
ಗಾಲೆ(ಜ.23): ಶ್ರೀಲಂಕಾ ವಿರುದ್ದದ ಗಾಲೆ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಅನುಭವಿ ವೇಗದ ಬೌಲರ್ ಜೇಮ್ಸ್ ಆ್ಯಂಡರ್‌ಸನ್ 6 ವಿಕೆಟ್ ಕಬಳಿಸುವ ಮೂಲಕ ಕ್ರಿಕೆಟ್ ದಿಗ್ಗಜ ಗ್ಲೆನ್ ಮೆಗ್ರಾಥ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಹೌದು, ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಗ್ರಾತ್ ಒಟ್ಟು 29 ಬಾರಿ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು. ಇದೀಗ ಆ್ಯಂಡರ್‌ಸನ್ ಗಾಲೆ ಟೆಸ್ಟ್ ಪಂದ್ಯದಲ್ಲಿ ನಿರ್ಶೋನ್ ಡಿಕ್‌ವೆಲ್ಲಾ, ಸುರಂಗ ಲಕ್ಮಲ್, ಏಂಜಲೋ ಮ್ಯಾಥ್ಯೂಸ್, ಕುಸಾಲ್ ಪೆರೇರಾ ಹಾಗೂ ಲಹೀರು ತಿರುಮನ್ನೆ ವಿಕೆಟ್ ಕಬಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 30ನೇ ಬಾರಿಗೆ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.
ಇದಷ್ಟೇ ಅಲ್ಲದೇ 38 ವರ್ಷ 177 ದಿನದ ಆ್ಯಂಡರ್‌ಸನ್ ಇನಿಂಗ್ಸ್‌ವೊಂದರಲ್ಲಿ 5+ ವಿಕೆಟ್ ಕಬಳಿಸಿದ ಹಿರಿಯ ವೇಗಿ ಹಾಗೂ ಒಟ್ಟಾರೆ ಎರಡನೇ ಬೌಲರ್ ಎನ್ನುವ ಕೀರ್ತಿಗೂ ಆ್ಯಂಡರ್‌ಸನ್ ಭಾಜನರಾಗಿದ್ದಾರೆ. ಈ ಮೊದಲು ಲಂಕಾದ ಸ್ಪಿನ್ನರ್ ರಂಗನಾ ಹೆರಾತ್(40 ವರ್ಷ 123 ದಿನ) ದಕ್ಷಿಣ ಆಫ್ರಿಕಾ ವಿರುದ್ದ ಕೊಲಂಬೋ ಮೈದಾನದಲ್ಲಿ 5+ ವಿಕೆಟ್ ಕಬಳಿಸಿದ್ದ ಸಾಧನೆ ಮಾಡಿದ್ದರು.
ಇಂಡೋ-ಇಂಗ್ಲೆಂಡ್ ಟೆಸ್ಟ್ ಸರಣಿ: ಪ್ರೇಕ್ಷಕರಿಗಿಲ್ಲ ಪ್ರವೇಶ..!
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು 5+ ವಿಕೆಟ್ ಕಬಳಿಸಿದ ದಾಖಲೆ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರುಳೀಧರನ್ ಹೆಸರಿನಲ್ಲಿದೆ. ಮುರುಳಿ 67 ಬಾರಿ ಇನಿಂಗ್ಸ್‌ವೊಂದರಲ್ಲಿ 5+ ವಿಕೆಟ್ ಕಬಳಿಸಿದ್ದಾರೆ. ಇದಾದ ಬಳಿಕ ಶೇನ್ ವಾರ್ನ್(37), ರಿಚರ್ಡ್ ಹ್ಯಾಡ್ಲಿ(36), ಅನಿಲ್ ಕುಂಬ್ಳೆ(35) ಹಾಗೂ ರಂಗನಾ ಹೆರಾತ್(34) 30ಕ್ಕೂ ಹೆಚ್ಚು ಬಾರಿ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 600ಕ್ಕೂ ಅಧಿಕ ವಿಕೆಟ್ ಕಬಳಿಸಿದ ಮೊದಲ ವೇಗಿ ಹಾಗೂ ಒಟ್ಟಾರೆ 4ನೇ ಬೌಲರ್ ಎನ್ನುವ ದಾಖಲೆಯು ಜೇಮ್ಸ್ ಆ್ಯಂಡರ್‌ಸನ್ ಹೆಸರಿನಲ್ಲಿದೆ. ಸದ್ಯ 606 ವಿಕೆಟ್ ಕಬಳಿಸಿರುವ ಸ್ವಿಂಗ್ ಬೌಲರ್ ಇನ್ನು ಕೇವಲ 14 ವಿಕೆಟ್ ಕಬಳಿಸಿದರೆ ಅನಿಲ್ ಕುಂಬ್ಳೆ ಹೆಸರಿನಲ್ಲಿರುವ(619) ದಾಖಲೆ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.