ಟೀಂ ಇಂಡಿಯಾ ಪರ ಆಡಲು ಮೈದಾನಕ್ಕಿಳಿದ ಇಂಗ್ಲೆಂಡ್ ಅಭಿಮಾನಿ; ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ!

By Suvarna NewsFirst Published Aug 14, 2021, 10:12 PM IST
Highlights
  • ಟೀಂ ಇಂಡಿಯಾ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ 12ನೇ ಆಟಗಾರ ಪ್ರತ್ಯಕ್ಷ
  • ಜರ್ಸಿ ತೊಟ್ಟು ಟೀಂ ಇಂಡಿಯಾ ಸೇರಲು ಮುಂದಾದ ಅಭಿಮಾನಿ
  • ಇಂಗ್ಲೆಂಡ್ ಅಭಿಮಾನಿಯನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ

ಲಂಡನ್(ಆ.14): ಇಂಗ್ಲೆಂಡ್ ಹಾಗೂ ಭಾರತ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ವಿಶೇಷ ಘಟನೆಯೊಂದು ನಡೆದಿದೆ. ಇಂಗ್ಲೆಂಡ್ ಅಭಿಮಾನಿಯೊಬ್ಬ ಟೀಂ ಇಂಡಿಯಾ ಜರ್ಸಿ ತೊಟ್ಟ ಲಾರ್ಡ್ಸ್ ಮೈದಾನಕ್ಕಿಳಿದ್ದಾನೆ. ಅತ್ತ ವಿಕೆಟ್ ಉರುಳಿಸಲು ಟೀಂ ಇಂಡಿಯಾ 12ನೇ ಆಟಗಾರನ ಕರೆತಂದಿಯಾ ಅನ್ನೋ ಗೊಂದಲ ಇಂಗ್ಲೆಂಡ್ ತಂಡಕ್ಕೆ. ಇತ್ತ ಟೀಂ ಇಂಡಿಯಾಗೆ ನಮ್ಮ ತಂಡದಲ್ಲಿ ಇದು ಯಾರು ಜಾರ್ವೋ ಎಂದು ಚಕಿತಗೊಂಡ ಸಂದರ್ಭ ಸೃಷ್ಟಿಯಾಗಿದೆ.

ಕೆಎಲ್ ರಾಹುಲ್ ಮೇಲೆ ಬಿಯರ್ ಬಾಟಲಿ ಕಾರ್ಕ್ ಎಸೆತ; ಇಂಗ್ಲೆಂಡ್ ಅಭಿಮಾನಿಗಳ ವರ್ತನೆಗೆ ಆಕ್ರೋಶ!

ಇಂಗ್ಲೆಂಡ್ ತಂಡಕ್ಕೆ ಜೋ ರೂಟ್ ಶತಕದ ಮೂಲಕ ನೆರವಾಗಿದ್ದರು. ಇದೇ ವೇಳೆ ಇಂಗ್ಲೆಂಡ್ ಅಭಿಮಾನಿಯೊಬ್ಬ, ಟೀಂ ಇಂಡಿಯಾ ಟೆಸ್ಟ್ ಜರ್ಸಿ ತೊಟ್ಟು ನೇರವಾಗಿ ಪಿಚ್ ಬಳಿ ಬಂದಿದ್ದಾನೆ. ಜರ್ಸಿ ಹಿಂದೆ ಹೆಸರು ಜಾರ್ವೋ ಎಂದು ಬರೆಯಲಾಗಿದೆ. ಜರ್ಸಿ ನಂಬರ್ 69 ಎಂದು ನಮೂದಿಸಲಾಗಿದೆ.

ಒಂದು ಕ್ಷಣ ಟೀಂ ಇಂಡಿಯಾ ಕ್ರಿಕೆಟಿಗರೇ ಗೊಂದಲಕ್ಕೀಡಾಗಿದ್ದಾರೆ. ಅಷ್ಟರಲ್ಲೇ ಇದು ಇಂಗ್ಲೆಂಡ್ ಅಭಿಮಾನಿಯ ಕಿತಾಪತಿ ಎಂದು ಅಧಿಕಾರಿಗಳಿಗೆ ಅರಿವಾಗಿದೆ. ತಕ್ಷಣ ಮೈದಾನಕ್ಕೆ ಆಗಮಿಸಿದ ಅಧಿಕಾರಿ ಇಲ್ಲಿಗೆ ಯಾಕೆ ಬಂದಿದ್ದಿ ಎಂದು ಪ್ರಶ್ನಿಸಿದ್ದಾರೆ. ಕಿಲಾಡಿ ಅಭಿಮಾನಿ ಜರ್ಸಿ ತೋರಿಸಿ ತಾನು ಟೀಂ ಇಂಡಿಯಾ ಕ್ರಿಕೆಟಿಗ ಎಂದಿದ್ದಾನೆ.

 

Deeply concerning. More so in the COVID times. How was this allowed to happen?? https://t.co/yoynz1LeMR

— Wear a Mask. Stay Safe, India (@cricketaakash)

ಅಷ್ಟರಲ್ಲೇ ಭದ್ರತಾ ಅಧಿಕಾರಿಗಳು ಆಗಮಿಸಿ ಇಂಗ್ಲೆಂಡ್ ಅಭಿಮಾನಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಮೈದಾನದಿಂದ ಕರೆದೊಯ್ದಿದ್ದಾರೆ. ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಈ ಸಂದರ್ಭ ನೆನೆದು ನಕ್ಕು ನೀರಾಗಿದ್ದಾರೆ.

ಘಟನೆ ಒಂದಷ್ಟು ಹಾಸ್ಯ ಸಂದರ್ಭ ಸೃಷ್ಟಿಸಿತ್ತು ನಿಜ. ಆದರೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಕೊರೋನಾ ಸಂದರ್ಭದಲ್ಲಿ ಆಟಗಾರರು ಕೋವಿಡ್ ಪ್ರೊಟೋಕಾಲ್ ಪಾಲಿಸುತ್ತಾರೆ. ಆದರೆ ದಿಢೀರ್ ಅಭಿಮಾನಿಗಳು ಮೈದಾನಕ್ಕೆ ಲಗ್ಗೆ ಇಟ್ಟು ಕೊರೋನಾ ಆತಂಕ ಹೆಚ್ಚಿಸುತ್ತಿದ್ದಾರೆ. ಇದು ಭದ್ರತೆ ದೃಷ್ಟಿಯಿಂದಲೂ ಅಪಾಯ ಎಂದು ಅಭಿಪ್ರಾಯ ಪಟ್ಟಿದ್ದಾರೆ.
 

click me!