ಕ್ಯಾನ್ಸರ್‌‌ ವಿರುದ್ಧ ಹೋರಾಡುತ್ತಿದ್ದ ಬೆನ್ ಸ್ಟೋಕ್ಸ್ ತಂದೆ ನಿಧನ!

Published : Dec 08, 2020, 08:28 PM IST
ಕ್ಯಾನ್ಸರ್‌‌ ವಿರುದ್ಧ ಹೋರಾಡುತ್ತಿದ್ದ ಬೆನ್ ಸ್ಟೋಕ್ಸ್ ತಂದೆ ನಿಧನ!

ಸಾರಾಂಶ

ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ತಂದೆ ಗೆಡ್ ಸ್ಟೋಕ್ಸ್ ನಿಧನರಾಗಿದ್ದಾರೆ. ತಂದೆಯನ್ನು ಉಳಿಸಿಕೊಳ್ಳಲು ಹೋರಾಡಿದ ಪುತ್ರ ಬೆನ್ ಸ್ಟೋಕ್ಸ್ ನೋವು ಹೇಳತೀರದು.  

ನ್ಯೂಜಿಲೆಂಡ್(ಡಿ.08): ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ತಂದೆ ನಿಧನರಾಗಿದ್ದಾರೆ. ಮೆದುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸ್ಟೋಕ್ಸ್ ತಂದೆ ಗೆಡ್ ಸ್ಟೋಕ್ಸ್ ಸತತ ಒಂದು ವರ್ಷದಿಂದ ಹಲವು ಬಾರಿ ತುರ್ತು ಘಟಕದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ತಂದೆಯನ್ನು ಉಳಿಸಲು ಸ್ಟೋಕ್ಸ್ ಮಾಡಿದ ಎಲ್ಲಾ ಪ್ರಯತ್ನ ಕೈಗೂಡಲಿಲ್ಲ. ಇಂದು(ಡಿ.08) ಗೆಡ್ ಸ್ಟೋಕ್ಸ್ ನಿಧನರಾಗಿದ್ದಾರೆ.

ಮುಂಬೈ ವಿರುದ್ಧದ ಶತಕವನ್ನು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತಂದೆಗೆ ಅರ್ಪಿಸಿದ ಬೆನ್ ಸ್ಟೋಕ್ಸ್.

ಸೌತ್ ಆಫ್ರಿಕಾ ಪ್ರವಾಸದಲ್ಲಿರುವ ಸ್ಟೋಕ್ಸ್, ದಿಢೀರ್ ವಾಪಾಸ್ಸಾಗಲು ಕೊರೋನಾ ಪ್ರೋಟೋಕಾಲ್ ಅನುಮತಿ ನೀಡುತ್ತಿಲ್ಲ. ಕಠಿಣ ಸಮಯದಲ್ಲಿ ಸ್ಟೋಕ್ಸ್ ಕುಟುಂಬದ ಜೊತೆ ಕಳೆಯಲು ಸಾಧ್ಯವಾಗುತ್ತಿಲ್ಲ. ಈ ವರ್ಷದ ಆರಂಭದಲ್ಲೇ ಸ್ಟೋಕ್ಸ್ ತಂದೆ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಹೀಗಾಗಿ ಸ್ಟೋಕ್ಸ್ ಇಂಗ್ಲೆಂಡ್‌ನ ತವರಿನ ಸರಣಿ ಮೊಟಕು ಗೊಳಿಸಿ ನ್ಯೂಜಿಲೆಂಡ್‌ಗೆ ತೆರಳಿದ್ದರು.

ಇತ್ತೀಚೆಗೆ ದುಬೈನಲ್ಲಿ ಆಯೋಜಿಸಿದ್ದ ಐಪಿಎಲ್ ಟೂರ್ನಿಗೂ ಸ್ಟೋಕ್ಸ್ ತಡವಾಗಿ ಆಗಮಿಸಿದ್ದರು. ತಂದೆ ತೀವ್ರ ನಿಘಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಐಪಿಎಲ್ ಟೂರ್ನಿಗೆ ತಡವಾಗಿ ಆಗಮಿಸಿದ್ದರು.  ಇದೀಗ ನ್ಯೂಜಿಲೆಂಡ್‌ನಲ್ಲಿ ಗೆಡ್ ಸ್ಟೋಕ್ಸ್ ಅಸುನೀಗಿದ್ದಾರೆ. 

ಮಾಜಿ ರಗ್ಬಿ ಆಟಗಾರನಾಗಿರುವ ಗೆಡ್ ಸ್ಟೋಕ್ಸ್, ನ್ಯೂಜಿಲೆಂಡ್‌ನ ವರ್ಕಿಂಗ್‌ಟನ್ ಟೌನ್ ರಗ್ಬಿ ತಂಡದ ಪರ ಆಡಿದ್ದಾರೆ. ಬಳಿಕ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಇದೀಗ ವರ್ಕಿಂಗ್‌ಟೌನ್ ರಗ್ಬಿ ಕ್ಲಬ್ ಸಂತಾಪ ಸೂಚಿಸಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್‌ಸಿಬಿ ಕಾಲ್ತುಳಿತದ ದುರ್ಘಟನೆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿ.24ಕ್ಕೆ ಮೊದಲ ಕ್ರಿಕೆಟ್‌ ಪಂದ್ಯ? ಕೊಹ್ಲಿ ಭಾಗಿ
ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?