ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡಕ್ಕೆ ಬೇಕು ಮಹಿಳೆಯರ ಪರ್ಫ್ಯೂಮ್!

Published : Mar 27, 2021, 09:45 PM IST
ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡಕ್ಕೆ ಬೇಕು ಮಹಿಳೆಯರ ಪರ್ಫ್ಯೂಮ್!

ಸಾರಾಂಶ

ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡ ಮಹಿಳೆಯರ ಡಿಯೋಡ್ರೆಂಟ್ ಬಳಕೆ ಮಾಡುತ್ತಾರೆ. ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್  ಬಹಿರಂಗ ಪಡಿಸಿದ್ದಾರೆ. ಅಷ್ಟಕ್ಕೂ ಮಹಿಳೆಯ ಡಿಯೋಡ್ರೆಂಟ್ ಮೇಲೆ ಇಂಗ್ಲೆಂಡ್ ತಂಡದ ಕಣ್ಣೇಕೆ? 

ಪುಣೆ(ಮಾ.27):  ಇದು ಅಚ್ಚರಿಯಾದರೂ ಸತ್ಯ. ಮಹಿಳೆಯರ ಪರ್ಫ್ಯೂಮ್ ಹಾಕುವ ಅಭ್ಯಾಸ ಸಂಪೂರ್ಣ ಇಂಗ್ಲೆಂಡ್ ಪುರುಷ ತಂಡಕ್ಕಿದೆ. ಈ ಮಾತನ್ನು ಆಲ್ರೌಂಡರ್ ಬೆನ್ ಸ್ಟೋಕ್ಸ್ ಬಹಿರಂಗ ಪಡಿಸಿದ್ದಾರೆ. ಇದರ ಜೊತೆಗೆ ಕೆಲ ಕುತೂಹಲ ಮಾಹಿತಿಗಳನ್ನು ಸ್ಟೋಕ್ಸ್ ಬಹಿರಂಗ ಪಡಿಸಿದ್ದಾರೆ.

2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಆಘಾತ, ಸರಣಿ ಸಮಬಲಗೊಳಿಸಿದ ಇಂಗ್ಲೆಂಡ್!

ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡ ಮಹಿಳೆಯ ಡಿಯೋಡ್ರೆಂಟ್ ಬಳಕೆ ಮಾಡುತ್ತೆ. ಮಹಿಳೆಯರ ಪರ್ಫ್ಯೂಮ್ ಸುವಾಸನೆ ಹೊಂದಿದೆ. ಹೀಗಾಗಿ ಬಳಕೆ ಮಾಡುತ್ತೇವೆ. ನಾನು ಮಾತ್ರವಲ್ಲ, ಸಂಪೂರ್ಣ ತಂಡವೇ ಮಹಿಳೆಯ ಡಿಯೋಡ್ರೆಂಟ್ ಬಳಕೆ ಮಾಡುತ್ತದೆ ಎಂದು ಸ್ಟೋಕ್ಸ್ ಹೇಳಿದ್ದಾರೆ.

ಇಂದು ತಂಡದ ರೂಢಿಯಾಗಿದೆ. ಪರ್ಫ್ಯೂಮ್ ಬಳಕೆ ಮಾಡಿ ಮೈದಾನಕ್ಕಿಳಿಯುತ್ತೇವೆ ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ.  ಪುರಷರ ಡಿಯೋಡ್ರೆಂಟ್ ಇದ್ದರೂ ಮಹಿಳೆಯರ ಪರ್ಫ್ಯೂಮ ಬಳಕೆ ಇದೀಗ ಅಭಿಮಾನಿಗಳಲ್ಲಿ ಅಚ್ಚರಿ ತಂದಿದೆ.  2ನೇ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ 99 ರನ್  ಸಿಡಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಸಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India vs New Zealand: ಕೊಹ್ಲಿ ಕ್ಲಾಸಿಕ್‌ ಇನ್ನಿಂಗ್ಸ್‌, ನ್ಯೂಜಿಲೆಂಡ್‌ ವಿರುದ್ಧ 4 ವಿಕೆಟ್‌ ಗೆಲುವು ಕಂಡ ಟೀಮ್‌ ಇಂಡಿಯಾ
ಯಶ್‌ ದಯಾಳ್‌ ಬಳಿಕ ಮತ್ತೊಬ್ಬ ಆರ್‌ಸಿಬಿ ಪ್ಲೇಯರ್‌ ಸೋಶಿಯಲ್‌ ಮೀಡಿಯಾ ರಂಗಿನಾಟ ಬಯಲು..!