
ಲಂಡನ್(ಏ.15): ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಬ್ರೆಂಡನ್ ಮೆಕ್ಕಲಂ '22 ಬೆಟ್' ಹೆಸರಿನ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ) ತನಿಖೆ ಆರಂಭಿಸಿದೆ. ಮೆಕ್ಕಲಂಗೆ ಬೆಟ್ಟಿಂಗ್ ಸಂಸ್ಥೆ ಜೊತೆಗಿನ ಸಂಬಂಧ ಹಾಗೂ ಮಂಡಳಿಯ ಭ್ರಷ್ಟಾಚಾರ ವಿರೋಧಿ ನಿಯಮವನ್ನು ಮೆಕ್ಕಲಂ ಉಲ್ಲಂಘಿಸಿದ್ದಾರೆಯೇ ಎಂದು ಇಸಿಬಿ ಪರಿಶೀಲನೆ ನಡೆಸುತ್ತಿದೆ.
ಇನ್ನು ಇದೆಲ್ಲದರ ನಡುವೆಯೇ, ಬ್ರೆಂಡನ್ ಮೆಕ್ಕಲಂ ಅವರ ವಿರುದ್ದ ಯಾವುದೇ ತನಿಖೆ ನಡೆಸುತ್ತಿಲ್ಲ ಎಂದು ಇಸಿಬಿ ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ. ನ್ಯೂಜಿಲೆಂಡ್ ಮಾಜಿ ನಾಯಕ ಜನವರಿಯಲ್ಲಿ 22 ಬೆಟ್‌ನ ರಾಯಭಾರಿಯಾಗಿ ನೇಮಕಗೊಂಡಿದ್ದರು. ಇತ್ತೀಚೆಗೆ ಐಪಿಎಲ್‌ಗೆ ಸಂಬಂಧಿಸಿದ ಬೆಟ್ಟಿಂಗ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.
ಬ್ರೂಕ್ ಶತಕಕ್ಕೆ ಬೆಚ್ಚಿದ ನೈಟ್ರೈಡರ್ಸ್!
ಕೋಲ್ಕತಾ: ಕೊನೆ ಕ್ಷಣದಲ್ಲಿ ಬ್ಯಾಟಿಂಗ್ನಲ್ಲಿ ಅಬ್ಬರಿಸಿ ಕಳೆದೆರಡು ಪಂದ್ಯಗಳನ್ನು ತನ್ನದಾಗಿಸಿಕೊಂಡಿದ್ದ ಕೋಲ್ಕತಾ ಈ ಬಾರಿ ಅದೇ ಸಾಹಸ ಪ್ರದರ್ಶಿಸುವಲ್ಲಿ ವಿಫಲವಾಯಿತು. ರಿಂಕು ಸಿಂಗ್ ಹಾಗೂ ನಿತೀಶ್ ರಾಣಾ ಮತ್ತೊಮ್ಮೆ ಸ್ಪೋಟಕ ಆಟವಾಡಿದರೂ ಶುಕ್ರವಾರ ತಂಡಕ್ಕೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 23 ರನ್ಗಳ ಸೋಲಿನಿಂದ ತಪ್ಪಿಸಲು ಆಗಲಿಲ್ಲ. ಎರಡು ಸೋಲಿನೊಂದಿಗೆ ಟೂರ್ನಿಗೆ ಕಾಲಿರಿಸಿದ್ದ ಹೈದರಬಾದ್ ಸತತ 2ನೇ ಜಯ ದಾಖಲಿಸಿದರೆ, ಕೋಲ್ಕತಾದ ಹ್ಯಾಟ್ರಿಕ್ ಗೆಲುವಿನ ಕನಸು ನನಸಾಗಲಿಲ್ಲ.
IPL 2023: ಹ್ಯಾಟ್ರಿಕ್ ಸೋಲಿಂದ ಪಾರಾಗುತ್ತಾ ಪಂಜಾಬ್ ಕಿಂಗ್ಸ್?
ಶತಕಗಳ ಮೂಲಕವೇ ವಿಶ್ವ ಕ್ರಿಕೆಟ್ನಲ್ಲಿ ಹೆಸರು ಗಳಿಸುತ್ತಿರುವ ಹ್ಯಾರಿ ಬ್ರೂಕ್, ಐಪಿಎಲ್‌ನಲ್ಲೂ ಶತಕದ ಖಾತೆ ತೆರೆದರು. ಅವರ ಅಬ್ಬರದ ಬ್ಯಾಟಿಂಗ್ ಹೈದರಬಾದ್ 4 ವಿಕೆಟ್ಗೆ 228 ರನ್ ಕಲೆಹಾಕಲು ನೆರವಾಯಿತು. ಬೃಹತ್ ಮೊತ್ತ ಬೆನ್ನತ್ತಿದ ಕೆಕೆಆರ್ 7 ವಿಕೆಟ್ಗೆ 205 ರನ್ಗಳಿಸಿ ಸೋಲೊಪ್ಪಿಕೊಂಡಿತು.
6 ಕ್ಯಾಚ್ ಕೈಚೆಲ್ಲಿದರೂ ಗೆದ್ದ ಸನ್ರೈಸರ್ಸ್!
ಸನ್ರೈಸರ್ಸ್ ದೊಡ್ಡ ಮೊತ್ತ ಕಲೆಹಾಕದೆ ಹೋಗಿದ್ದರೆ ಕಳಪೆ ಫೀಲ್ಡಿಂಗ್‌ನಿಂದಾಗಿಯೇ ಪಂದ್ಯ ಸೋತಿದ್ದರೆ ಆಶ್ಚಯರ್ವಿರಲಿಲ್ಲ. ಕೆಕೆಆರ್‌ನ ಒಟ್ಟು 6 ಕ್ಯಾಚ್‌ಗಳನ್ನು ಸನ್ರೈಸರ್ಸ್ ಆಟಗಾರರು ಕೈಚೆಲ್ಲಿದರು. ಅತ್ಯುತ್ತಮ ಕ್ಷೇತ್ರರಕ್ಷಕರೆನಿಸಿರುವ ಗ್ಲೆನ್ ಫಿಲಿಫ್ಸ್, ಏಡನ್ ಮಾರ್ಕ್ರಮ್, ವಾಷಿಂಗ್ಟನ್ ಸುಂದರ್ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ತಂಡದ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತು.
ಈ ವಾರ ತವರಿನಲ್ಲಿ ಪಂದ್ಯ ಆಡಿದ ತಂಡಗಳು ಸೋತಿವೆ!
ಈ ವಾರ ಸತತ 5ನೇ ಪಂದ್ಯದಲ್ಲಿ ತವರಿನಲ್ಲಿ ಆಡಿದ ತಂಡ ಸೋಲುಂಡಿದೆ. ಲಖನೌ ವಿರುದ್ಧ ಬೆಂಗಳೂರಲ್ಲಿ ಆರ್‌ಸಿಬಿ, ಡೆಲ್ಲಿಯಲ್ಲಿ ಮುಂಬೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈನಲ್ಲಿ ರಾಜಸ್ಥಾನ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್, ಮೊಹಾಲಿಯಲ್ಲಿ ಗುಜರಾತ್ ವಿರುದ್ಧ ಪಂಜಾಬ್ ಕಿಂಗ್ಸ್, ಕೋಲ್ಕತಾದಲ್ಲಿ ಸನ್ರೈಸರ್ಸ್ ವಿರುದ್ಧ ಕೆಕೆಆರ್ ಸೋಲುಂಡಿದೆ. ಈ ಟ್ರೆಂಡ್ ಮುಂದುವರಿಯಲಿದೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.