
ಗಾಲೆ(ಜ.26): ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದರೂ 2ನೇ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಿಂದ ಶ್ರೀಲಂಕಾ ವಿರುದ್ಧ 2ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ 6 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.
4ನೇ ದಿನವಾದ ಸೋಮವಾರ ಮೊದಲ ಇನ್ನಿಂಗ್ಸ್‌ನಲ್ಲಿ 344 ರನ್‌ಗೆ ಆಲೌಟ್ ಆದ ಇಂಗ್ಲೆಂಡ್ 37 ರನ್ ಮುನ್ನಡೆ ಬಿಟ್ಟುಕೊಟ್ಟಿತು. ಆದರೆ ಸ್ಪಿನ್ನರ್‌ಗಳಾದ ಜ್ಯಾಕ್ ಲೀಚ್ ಹಾಗೂ ಡಾಮ್ ಬೆಸ್ ತಲಾ 4 ವಿಕೆಟ್ ಕಬಳಿಸಿದ್ದರಿಂದ 2ನೇ ಇನ್ನಿಂಗ್ಸ್‌ನಲ್ಲಿ ಲಂಕಾವನ್ನು 126 ರನ್‌ಗೆ ಆಲೌಟ್ ಮಾಡಿತು. 164 ರನ್ ಗುರಿಯನ್ನು ಇಂಗ್ಲೆಂಡ್, 4 ವಿಕೆಟ್ ಕಳೆದುಕೊಂಡು ಬೆನ್ನತ್ತಿತು. ಡಾಮ್ ಸಿಬ್ಲಿ (56) ಹಾಗೂ ಜೋಸ್ ಬಟ್ಲರ್ (46) ನೆರವಾದರು.
ಲಂಕಾದಿಂದಲೇ ಟೀಂ ಇಂಡಿಯಾಗೆ ಜೋ ರೂಟ್ ವಾರ್ನಿಂಗ್..!
ಸ್ಕೋರ್:
ಲಂಕಾ 381 ಹಾಗೂ 126
ಇಂಗ್ಲೆಂಡ್ 344 ಹಾಗೂ 164/4
ವಿಂಡೀಸ್ ವಿರುದ್ಧ ಬಾಂಗ್ಲಾಗೆ 3-0 ಜಯ
ಚಟ್ಟೊಗ್ರಾಮ್: ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 120 ರನ್‌ಗಳ ಗೆಲುವು ಸಾಧಿಸಿದ ಬಾಂಗ್ಲಾದೇಶ 3 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ 6 ವಿಕೆಟ್‌ಗೆ 297 ರನ್‌ಗಳಿಸಿತು. ವಿಂಡೀಸ್ 177 ರನ್‌ಗೆ ಆಲೌಟ್ ಆಯಿತು.
ಸ್ಕೋರ್:
ಬಾಂಗ್ಲಾ 297/6
ವಿಂಡೀಸ್ 177/10
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.