ಮ್ಯಾಂಚೆಸ್ಟರ್(ಜು.17): ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್, ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತ ಪ್ರದರ್ಶನದಿಂದ ಇಂಗ್ಲೆಂಡ್ ವಿರುದ್ದದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ ಗೆಲುವು ದಾಖಲಿಸಿದೆ. ರಿಷಬ್ ಪಂತ್ ಭರ್ಜರಿ ಸೆಂಚುರಿಯಿಂದ ಭಾರತ ಗೆಲುವಿನ ದಡ ಸೇರಿತು. ಈ ಮೂಲಕ 2-1 ಅಂತರದಲ್ಲಿ ಏಕದಿನ ಸರಣಿ ಕೈವಶ ಮಾಡಿದೆ. ಗೆಲುವಿಗೆ 260 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ಆರಂಭ ಕಳಪೆಯಾಗಿತ್ತು. ನಾಯಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡಲು ವಿಫಲವಾಗಿತ್ತು. ಶಿಖರ್ ಧವನ್ ಕೇವಲ 1 ರನ್ ಸಿಡಿಸಿ ಔಟಾದರು. ಇತ್ತ ರೋಹಿತ್ ಶರ್ಮಾ 17 ರನ್ ಸಿಡಿಸಿ ಔಟಾದರು. ಇತ್ತ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಮತ್ತೆ ಮುಂದುವರಿಯಿತು. ಕೊಹ್ಲಿ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಗಳು ಹುಸಿಯಾಯ್ತು. ಕೇವಲ 17 ರನ್ ಸಿಡಿಸಿ ನಿರ್ಗಮಿಸಿದರು.
ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದರು. ಆದರೆ ಸೂರ್ಯಕುಮಾರ್ ಯಾದವ್ ಉತ್ತಮ ಸಾಥ್ ನೀಡಲಿಲ್ಲ. ಯಾದವ್ 16 ರನ್ ಸಿಡಿಸಿ ಔಟಾದರು. 72 ರನ್‌ಗಳಿಗೆ ಭಾರತ 4 ವಿಕೆಟ್ ಕಳೆದುಕೊಂಡಿತು. ರಿಷಬ್ ಪಂತ್ ಜೊತೆ ಸೇರಿ ಇನ್ನಿಂಗ್ಸ್ ಕಟ್ಟಿದ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದಲ್ಲಿ ಹೊಸ ಚೈತನ್ಯ ತುಂಬಿದರು. ಹಾರ್ದಿಕ್ ಪಾಂಡ್ಯ ಬಿರುಸಿನ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ ಗೆಲುವಿನ ಹಾದಿಯಲ್ಲಿ ಸಾಗಿತು.
ಟೀಂ ಇಂಡಿಯಾ ನಾಯಕತ್ವ ತೊರೆದ ನಂತರ ಕೊಹ್ಲಿ ವಿರಾಟ ರೂಪ ತೋರಿಸುತ್ತಿಲ್ಲ!
ಪಾಂಡ್ಯ 55 ಎಸೆತದಲ್ಲಿ 71 ರನ್ ಸಿಡಿಸಿ ಔಟಾದರು. ಪಾಂಡ್ಯ 129ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದರು. ಪಾಂಡ್ಯ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಒಳಗೊಂಡಿದೆ. ಇತ್ತ ರಿಷಬ್ ಪಂತ್ ಅಬ್ಬರಿಸಿದರು. ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡಿದ ಪಂತ್ ಚೊಚ್ಚಲ ಏಕದಿನ ಶತಕ ಸಿಡಿಸಿ ದಾಖಲೆ ಬರೆದರು. ಪಂಚ್ 106 ಎಸೆತದಲ್ಲಿ ಸೆಂಚುರಿ ಪೂರೈಸಿದರು. ಈ ಮೂಲಕ ಏಷ್ಯಾ ಹೊರಭಾಗದಲ್ಲಿ ಶತಕ ಸಿಡಿಸಿದ ಭಾರತದ 3ನೇ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು.
ಏಷ್ಯಾ ಹೊರಭಾಗದಲ್ಲಿ ಸೆಂಚುರಿ ಸಿಡಿಸಿದ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್
ರಾಹುಲ್ ದ್ರಾವಿಡ್ 145 ರನ್ v ಶ್ರೀಲಂಕಾ, 1999
ಕೆಎಲ್ ರಾಹುಲ್ 112 ರನ್ v ನ್ಯೂಜಿಲೆಂಡ್, 2020
ರಿಷಬ್ ಪಂತ್ 125* v ಇಂಗ್ಲೆಂಡ್, 2022
ಡೇವಿಡ್ ವಿಲೆ ಎಸೆದ 42 ನೇ ಓವರ್‌ನಲ್ಲಿ ಪಂತ್ ಮತ್ತೊಂದು ದಾಖಲೆ ಬರೆದಿದ್ದಾರೆ. ಸತತ 5 ಬೌಂಡರಿ ಸಿಡಿಸಿ ಮಿಂಚಿದರು. 42.1 ಓವರ್‌ಗಳಲ್ಲಿ ಭಾರತ 5 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ರಿಷಬ್ ಪಂತ್ ಅಜೇಯ 125 ರನ್ ಸಿಡಿಸಿದರು.
ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ರೋಹಿತ್ ಶರ್ಮಾ ಯಾಕೆ ದೀರ್ಘ ಚರ್ಚೆ ನಡೆಸುತ್ತಿಲ್ಲ..?
ಇಂಗ್ಲೆಂಡ್ ಇನ್ನಿಂಗ್ಸ್
ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 45.5 ಓವರ್‌ಗಳಲ್ಲಿ 259 ರನ್‌ಗೆ ಆಲೌಟ್ ಆಗಿತ್ತು. ಜೇಸನ್ ರಾಯ್ 41 ರನ್ ಕಾಣಿಕೆ ನೀಡಿದರು. ಆದರೆ ಜಾನಿ ಬೈರ್‌ಸ್ಟೋ ಹಾಗೂ ಜೋ ರೂಟ್ ಅಬ್ಬರಿಸಲಿಲ್ಲ. ಬೆನ್ ಸ್ಟೋಕ್ಸ್ 27ರನ್ ಸಿಡಿಸಿ ಔಟಾದರು. ನಾಯಕ ಜೋಸ್ ಬಟ್ಲರ್ 60 ರನ್ ಸಿಡಿಸಿದರು. ಮೊಯಿನ್ ಆಲಿ 34 ರನ್ ಸಿಡಿಸಿದರು. ಲಿಯಾಮ್ ಲಿವಿಂಗ್‌ಸ್ಟೋನ್ 27 ರನ್ ಸಿಡಿಸಿ ಔಟಾದರು. ಡೇವಿಡ್ ವಿಲೆ 18 ರನ್ ಸಿಡಿಸಿದರೆ, ಕ್ರೈಗ್ ಓವರ್ಟನ್ 32 ರನ್ ಸಿಡಿಸಿದರು. ಈ ಮೂಲಕ ಇಂಗ್ಲೆಂಡ್ 259 ರನ್ ಸಿಡಿಸಿತು.