
ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಪೂರ್ವ ವಲಯ ಮತ್ತು ದಕ್ಷಿಣ ವಲಯ ತಂಡಗಳು ಚೆನ್ನೈನಲ್ಲಿ ಮುಖಾಮುಖಿಯಾಗಿವೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಪೂರ್ವ ವಲಯ, ಉತ್ತಮ ಆರಂಭ ಪಡೆದುಕೊಂಡಿದೆ. ಇದರ ನಡುವೆ ಪಂದ್ಯದಲ್ಲಿ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೈಭವ್ ಸೂರ್ಯವಂಶಿ, ತಿಲಕ್ ವರ್ಮಾ ನಡುವಿನ ಗುದ್ದಾಟಕ್ಕೆ ಅಂಪೈರ್‌ಗಳು ಬ್ರೇಕ್ ಹಾಕಿದ್ದಾರೆ.
ವೈಭವ್ ಸೂಯವಂಶಿ ಮತ್ತು ತಿಲಕ್ ವರ್ಮಾ ನಡುವೆ ಮೊದಲು ತಮಾಷೆಯಾಗಿ ಆರಂಭವಾದ ಸ್ಲೆಡ್ಜಿಂಗ್, ಆ ಬಳಿಕ ತೀವ್ರ ಸ್ವರೂಪ್ ಪಡೆದುಕೊಂಡಿತ್ತು. ಆದರೆ ಆ ಬಳಿಕ ಉಲ್ಭಣಗೊಳ್ಳುತ್ತಿದ್ದಂತೆ, ಅಂಪೈರ್‌ಗಳು ಬಂದು ಇಬ್ಬರಯ ಆಟಗಾರರನ್ನು ಶಾಂತಗೊಳಿಸಿದರು.
ಪೂರ್ವ ವಲಯದ ಮೊದಲ ಇನ್ನಿಂಗ್ಸ್‌ನ 11ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದ್ದು, ದಕ್ಷಿಣ ವಲಯದ ನಾಯಕ ತಿಲಕ್ ವರ್ಮಾ ನಿರಂತರವಾಗಿ ವೈಭವ್ ಸೂರ್ಯವಂಶಿ ಅವರೊಂದಿಗೆ ಮಾತನಾಡುತ್ತಿದ್ದರು. ಇತ್ತ ಪೂರ್ವ ವಲಯದ ಉಪನಾಯಕ ವೈಭವ್ ಕೂಡ ಟಾಂಗ್ ನೀಡುತ್ತಲೇ ಬಂದಿದ್ದರು. ಈ ಹಂತದಲ್ಲಿ ತಿಲಕ್, ವೈಭವ್‌ಗೆ.. ಈತ ಉಪನಾಯಕ ಎಂದು ಹೇಳಿದ್ದರು. ಆದರೆ ಕೆಲವು ಕ್ಷಣಗಳ ಬಳಿಕ ಸ್ಲೆಡ್ಜಿಂಗ್ ತೀವ್ರ ವಾಗ್ವಾದಕ್ಕೆ ಕಾರಣವಾಗಿತ್ತು.
ತಿಲಕ್ ವರ್ಮಾ ಮೊದಲು ವೈಭವ್ ಸೂರ್ಯವಂಶಿ ಕಡೆಗೆ ತೆರಳಿ ತಮಾಷೆಯಾಗಿ ಮೈಮೇಲೆ ಗುದ್ದಿ ಸನ್ನೆ ಮಾಡಿದ್ದರು. ಆದರೆ ಈ ಹಂತದಲ್ಲಿ ತಾಳ್ಮೆ ಕಳೆದುಕೊಂಡ ವೈಭವ್, ತಿಲಕ್‌ಗೆ ಮುಖಾಮುಖಿಯಾಗಿ ನಿಂತು ತಿರುಗೇಟು ನೀಡಿದ್ದರು. ಈ ನಡುವೆ ಇತರ ಆಟಗಾರರು ಹಾಗೂ ಅಂಪೈರ್‌ಗಳು ಮಧ್ಯಪ್ರವೇಶ ಮಾಡಿ ಆಟಗಾರರನ್ನು ಬೇರ್ಪಡಿಸಿದರು.
ತಿಲಕ್ ವರ್ಮಾ ಅವರೊಂದಿಗೆ ವಾಗ್ವಾದಕ್ಕೂ ಮುನ್ನ ವೈಭವ್ ಸೂರ್ಯವಂಶಿ ಮತ್ತು ಅಭಿಮನ್ಯು ಈಶ್ವರನ್ ಜೋಡಿ ಪೂರ್ವ ವಲಯಕ್ಕೆ 100 ರನ್‌ಗಳ ಜೊತೆಯಾಟದೊಂದಿಗೆ ಉತ್ತಮ ಆರಂಭ ನೀಡಿದ್ದರು. ವೈಭವ್ ಇನ್ನಿಂಗ್ಸ್‌ನಲ್ಲಿ 37 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿ 44 ರನ್ ಗಳಿಸಿ ಔಟ್ ಆಗಿದ್ದಾರೆ.
ಇನ್ನು, ಕ್ವಾರ್ಟರ್ ಫೈನಲ್‌ನಲ್ಲಿ ನಾರ್ಥ ಈಸ್ಟ್ ಝೋನ್ ವಿರುದ್ಧ ಕೇವಲ 08 ರನ್ ಗಳಿಸಿದ್ದ ವೈಭವ್, ಬೌಲಿಂಗ್‌ನಲ್ಲಿ ಎರಡು ವಿಕೆಟ್ ಪಡೆದು ಮಿಂಚಿದರು. ಆದರೆ ಸೆಂಟ್ರಲ್ ಝೋನ್ ವಿರುದ್ಧ ಸೆಮಿಫೈನಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ 92 ರನ್ ಗಳಿಸಿದರೆ, 2ನೇ ಇನ್ನಿಂಗ್ಸ್ನಲ್ಲಿ 40 ರನ್ ಗಳಿಸಿದ್ದರು. ಇದರೊಂದಿಗೆ ದುಲೀಪ್ ಟ್ರೋಫಿಯಲ್ಲಿ ಅರ್ಧಶತಕಗಳಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದರು.
Wtf Tilak..
Ha*assing a 16 yr old 🫣 🤨😜#DuleepTrophy pic.twitter.com/bkFdxOICkQ— Asvanth (@asvanth1808) September 6, 2026
ಈಸ್ಟ್ ಝೋನ್ ಪ್ಲೇಯಿಂಗ್ ಇಲೆವೆನ್: ಅಭಿಮನ್ಯ ಈಶ್ವರನ್, ವೈಭವ್ ಸೂರ್ಯವಂಶಿ, ಕುಮಾರ್ ಕುಶಾಗ್ರ, ಸುದೀಪ್ ಕುಮಾರ್ ಘರಾಮಿ, ಇಶಾನ್ ಕಿಶನ್, ಶಿಖರ್ ಮೋಹನ್, ಅನುಕುಲ್ ರಾಯ್, ಮೊಹಮ್ಮದ್ ಕೌನೈನ್ ಖುರೇಷಿ, ಮೊಹಮ್ಮದ್ ಶಮಿ, ಅಭಿಜಿತ್ ಕೆ ಸರ್ಕಾರ್, ಮುಖೇಶ್ ಕುಮಾರ್.
ಸೌತ್ ಝೋನ್ ಪ್ಲೇಯಿಂಗ್ ಇಲೆವೆನ್: ರಿಕಿ ಭುಯಿ, ನಾರಾಯಣ ಜಗದೀಸನ್, ಪಡಿಕ್ಕಲ್, ಶೇಖ್ ರಶೀದ್, ತಿಲಕ್ ವರ್ಮಾ, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ತ್ರಿಪುರಾಣ ವಿಜಯ್, ಸಿರಾಜ್, ಚಾಮ ಮಿಲಿಂದ್, ಎಂಡಿ ನಿಧೀಶ್.
ಸಂಕ್ಷೀಪ್ತ ಸ್ಕೋರ್: ಈಸ್ಟ್ ಝೋನ್ ಮೊದಲ ಇನ್ನಿಂಗ್ಸ್- 39 ಓವರ್‌ಗಳ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು 190 ರನ್ ಗಳಿಸಿದೆ. ಆರಂಭಿಕರಾದ ಈಶ್ವರನ್ 76 ರನ್, ವೈಭವ್ 44 ರನ್ ಗಳಿಸಿ ನಿರ್ಗಮಿಸಿದರೆ. ಸುದೀಪ್ ಕುಮಾರ್ ಘರಾಮಿ 6 ರನ್ ಗಳಿಸಿ ನಿರ್ಗಮಿಸಿದರು. ಶಿಖರ್ ಮೋಹನ್ (51), ನಾಯಕ ಇಶಾನ್ ಕಿಶನ್ 15 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ.
6️⃣,4️⃣,4️⃣
Shikhar Mohan ups the ante post lunch and has completed his 50 as well 🙌
Scorecard ▶️ https://t.co/KQf5Km69nk#DuleepTrophy | #SZvEZ pic.twitter.com/rhH73RxPK6— BCCI Domestic (@BCCIdomestic) September 6, 2026
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.