ದುಲೀಪ್ ಟ್ರೋಫಿ: 13 ವರ್ಷಗಳ ಟ್ರೋಫಿ ಗೆದ್ದ ಪೂರ್ವ ವಲಯ..! ದಕ್ಷಿಣ ವಲಯ ನಾಯಕನಿಗೆ ಸರಣಿ ಶ್ರೇಷ್ಠ ಪ್ರಶಸ್ತಿ

Naveen Kodase   | Kannada Prabha
Published : Sep 11, 2026, 09:25 AM IST
Duleep Trophy East Zone vs South Zone

ಸಾರಾಂಶ

ಬರೋಬ್ಬರಿ 13 ವರ್ಷಗಳ ಬಳಿಕ ದುಲೀಪ್‌ ಟ್ರೋಫಿ ದೇಸಿ ಪ್ರಥಮ ದರ್ಜೆ ಕ್ರಿಕೆಟ್‌ ಟೂರ್ನಿಯಲ್ಲಿ ಪೂರ್ವ ವಲಯ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ದಕ್ಷಿಣ ವಲಯ ವಿರುದ್ಧದ ಫೈನಲ್ ಪಂದ್ಯ ಡ್ರಾಗೊಂಡರೂ, ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಇಶಾನ್ ಕಿಶನ್ ನಾಯಕತ್ವದ ಪೂರ್ವ ವಲಯ ಗೆಲುವು ಸಾಧಿಸಿತು.

ಚೆನ್ನೈ: ಬರೋಬ್ಬರಿ 13 ವರ್ಷಗಳ ಬಳಿಕ ದುಲೀಪ್‌ ಟ್ರೋಫಿ ದೇಸಿ ಪ್ರಥಮ ದರ್ಜೆ ಕ್ರಿಕೆಟ್‌ ಟೂರ್ನಿಯಲ್ಲಿ ಪೂರ್ವ ವಲಯ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಗುರುವಾರ ದಕ್ಷಿಣ ವಲಯ ವಿರುದ್ಧ ಪೂರ್ವ ವಲಯ ಬರೋಬ್ಬರಿ 760 ರನ್‌ ಮುನ್ನಡೆಯಲ್ಲಿದ್ದಾಗ ಇನ್ನಿಂಗ್ಸ್‌ ಡಿಕ್ಲೇರ್‌ ಘೋಷಿಸಿತು. ಕೂಡಲೇ ಪಂದ್ಯ ಡ್ರಾಗೊಳಿಸಿ, ಮೊದಲ ಇನ್ನಿಂಗ್ಸ್‌ ಆಧಾರದ ಮೇಲೆ ಇಶಾನ್‌ ಕಿಶನ್‌ ನಾಯಕತ್ವದ ಪೂರ್ವ ವಲಯವನ್ನು ವಿಜೇತ ಎಂದು ಘೋಷಿಸಲಾಯಿತು.

ಪೂರ್ವ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 708 ರನ್‌ಗೆ ಆಲೌಟಾಗಿತ್ತು. ಇದಕ್ಕೆ ಉತ್ತರವಾಗಿ ತಿಲಕ್‌ ವರ್ಮಾ ನಾಯಕತ್ವದ, ಕರ್ನಾಟಕದ ಕೆಲ ಆಟಗಾರರನ್ನೊಳಗೊಂಡಿದ್ದ ದಕ್ಷಿಣ ವಲಯ ತಂಡ 336 ರನ್‌ಗೆ ಆಲೌಟಾಗಿತ್ತು. ಪಂದ್ಯ ಕೊನೆಗೊಳ್ಳದಿದ್ದರೆ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ವಿಜೇತರನ್ನು ಘೋಷಿಸಲಾಗುತ್ತದೆ. ಹೀಗಾಗಿಯೇ ಪೂರ್ವ ತಂಡ ಮೊದಲ ಇನ್ನಿಂಗ್ಸ್‌ ಪೂರ್ಣಗೊಳ್ಳುವ ಮೊದಲೇ ಗೆಲುವು ಬಹುತೇಕ ಖಚಿತಪಡಿಸಿಕೊಂಡಿತ್ತು.

ಫಾಲೋ ಆನ್ ಹೇರದ ಪೂರ್ವ ವಲಯ

ಇದರ ಹೊರತಾಗಿಯೂ ದಕ್ಷಿಣದ ಮೇಲೆ ಫಾಲೋಆನ್‌ ಹೇರದೆ 2ನೇ ಇನ್ನಿಂಗ್ಸ್‌ ಆರಂಭಿಸಿದ್ದ ಪೂರ್ವ ತಂಡ, ಗುರುವಾರ 7 ವಿಕೆಟ್‌ ನಷ್ಟದಲ್ಲಿ 388 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಮೊಹಮ್ಮದ್‌ ಕೌನೈನ್‌ ಖುರೈಶಿ ಔಟಾಗದೆ 116 ರನ್‌ ಸಿಡಿಸಿದರು. ಡಿಕ್ಲೇರ್‌ ಘೋಷಣೆ ಬಳಿಕ ದಕ್ಷಿಣ ತಂಡ ಬ್ಯಾಟ್‌ ಮಾಡುವುದರಿಂದ ಯಾವುದೇ ಪ್ರಯೋಜನವಿರಲಿಲ್ಲ. ಹೀಗಾಗಿ ಮಧ್ಯಾಹ್ನ 2.10ರ ವೇಳೆಗೆ ಉಭಯ ತಂಡಗಳ ನಾಯಕರು ಡ್ರಾಗೆ ಸಮ್ಮತಿಸಿದರು.

ದಕ್ಷಿಣ ವಲಯ ನಾಯಕ ತಿಲಕ್ ವರ್ಮಾಗೆ ಸರಣಿಶ್ರೇಷ್ಠ ಪ್ರಶಸ್ತಿ: 

ಇನ್ನು ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಮೂರು ಪಂದ್ಯಗಳ ಐದು ಇನ್ನಿಂಗ್ಸ್‌ಗಳಿಂದ 409 ರನ್‌ ಸಿಡಿಸಿದ್ದ ಇಶಾನ್ ಕಿಶನ್, ಟೂರ್ನಿಯಲ್ಲಿ ಗರಿಷ್ಠ ರನ್ ಸಿಡಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದರು. ಅದರಲ್ಲೂ ಫೈನಲ್‌ನಲ್ಲಿ ಇಶಾನ್ ಕಿಶನ್ 270 ಹಾಗೂ 80 ರನ್ ಸಿಡಿಸಿದ್ದರು. ಇದೆಲ್ಲದರ ಹೊರತಾಗಿ ಇಶಾನ್ ಕಿಶನ್ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಇನ್ನೊಂದೆಡೆ ಎರಡು ಪಂದ್ಯಗಳ ಮೂರು ಇನ್ನಿಂಗ್ಸ್‌ಗಳಿಂದ 266 ರನ್ ಸಿಡಿಸಿದ ದಕ್ಷಿಣ ವಲಯ ನಾಯಕ ತಿಲಕ್ ವರ್ಮಾ ಸರಣಿಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದು ಅಚ್ಚರಿ ಮೂಡಿಸಿತು.

ಸ್ಕೋರ್‌: ಪೂರ್ವ ವಲಯ ಮೊದಲ ಇನ್ನಿಂಗ್ಸ್‌ 708/10 ಮತ್ತು 2ನೇ ಇನ್ನಿಂಗ್ಸ್ 388/7 ಡಿಕ್ಲೇರ್‌ (ಖುರೈಶಿ ಔಟಾಗದೆ 116, ಅನುಕೂಲ್‌ 64, ನಿಧೀಶ್‌ 2-28)

ಪಂದ್ಯಶ್ರೇಷ್ಠ: ಇಶಾನ್‌ ಕಿಶನ್‌(270 ಮತ್ತು 80 ರನ್‌)

ಸರಣಿಶ್ರೇಷ್ಠ: ತಿಲಕ್‌ ವರ್ಮಾ(2 ಪಂದ್ಯ, 266 ರನ್‌)

03ನೇ ಟ್ರೋಫಿ

ಪೂರ್ವ ವಲಯಕ್ಕೆ ಇದು 3ನೇ ದುಲೀಪ್‌ ಟ್ರೋಫಿ ಕಪ್. ಈ ಹಿಂದೆ 2011-12, 2012-13ರ ಆವೃತ್ತಿಗಳಲ್ಲಿ ಸತತವಾಗಿ 2 ಬಾರಿ ಚಾಂಪಿಯನ್ ಆಗಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket: ಭಾರತ-ಅಫ್ಘಾನಿಸ್ತಾನ್ 1ನೇ ಟಿ20 ಪಂದ್ಯ ರದ್ದು?: ಆ ಒಂದು ಪತ್ರದ ಗೊಂದಲ, ಬಿಬಿಸಿಐ ಕೊಟ್ಟ ಸ್ಪಷ್ಟನೆ ಏನು?
ಫೈನಲ್ ಮ್ಯಾಚ್‌ ಡ್ರಾ ಆದರೂ ದುಲಿಪ್ ಟ್ರೋಫಿ ಎತ್ತಿಹಿಡಿದ ಕಿಶನ್; ಗೆದ್ದ ತಂಡಕ್ಕೆ ಸಿಕ್ಕಿದ್ದು ಎಷ್ಟು ಕೋಟಿ?