
ಕ್ರೈಸ್ಟ್‌ಚರ್ಚ್: ಟಿ20 ವಿಶ್ವಕಪ್ ತಂಡ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಹೊಣೆ ಹೊತ್ತು ನ್ಯೂಜಿಲೆಂಡ್ ಟಿ20 ಹಾಗೂ ಏಕದಿನ ತಂಡಗಳ ನಾಯಕತ್ವವನ್ನು ಕೇನ್ ವಿಲಿಯಮ್ಸನ್ ತ್ಯಜಿಸಿದ್ದಾರೆ. ಅಲ್ಲದೇ, ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಕೇಂದ್ರ ಗುತ್ತಿಗೆ ಪಟ್ಟಿಯಿಂದಲೂ ಹೊರಗುಳಿಯಲು ವಿಲಿಯಮ್ಸನ್ ನಿರ್ಧರಿಸಿದ್ದಾರೆ. ಈ ಮೂಲಕ ಕಿವೀಸ್ ಪಡೆಗೆ ಕ್ಯಾಪ್ಟನ್ ಕೂಲ್ ವಿಲಿಯಮ್ಸನ್ ಡಬಲ್ ಶಾಕ್ ನೀಡಿದ್ದಾರೆ.
ಕಳೆದ ವರ್ಷ ವಿಲಿಯಮ್ಸನ್ ಟೆಸ್ಟ್ ನಾಯಕತ್ವವನ್ನು ಬಿಟ್ಟಿದ್ದರು. ಅವರು ಒಟ್ಟಾರೆ 40 ಟೆಸ್ಟ್, 91 ಏಕದಿನ ಹಾಗೂ 75 ಟಿ20 ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದ್ದಾರೆ. ಅವರ ನಾಯಕತ್ವದಲ್ಲಿ ನ್ಯೂಜಿಲೆಂಡ್ 2019ರ ಏಕದಿನ ವಿಶ್ವಕಪ್, 2021ರ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿತ್ತು. 2021ರಲ್ಲಿ ಭಾರತವನ್ನು ಮಣಿಸಿ ಟೆಸ್ಟ್ ವಿಶ್ವ ಚಾಂಪಿಯನ್ ಆಗಿತ್ತು.
T20 World Cup 2024: ಆಫ್ಘಾನ್ ಎದುರಿನ ಮಹತ್ವದ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ; 2 ಮೇಜರ್ ಚೇಂಜ್?
ಟಿ20: ಸ್ಟೋಯ್ನಿಸ್ ವಿಶ್ವ ನಂ.1 ಆಲ್ರೌಂಡರ್
ದುಬೈ: ಆಸ್ಟ್ರೇಲಿಯಾದ ಮಾರ್ಕಸ್ ಸ್ಟೋಯ್ನಿಸ್ ಐಸಿಸಿ ಟಿ20 ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಬುಧವಾರ ಹೊಸದಾಗಿ ಪ್ರಕಟಗೊಂಡ ರ್‍ಯಾಂಕಿಂಗ್ ಪಟ್ಟಿಯಲ್ಲಿ ಸ್ಟೋಯ್ನಿಸ್, ಅಫ್ಘಾನಿಸ್ತಾನದ ಮೊಹಮದ್ ನಬಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ನಬಿ 3 ಸ್ಥಾನ ಕುಸಿದಿದ್ದು ಶ್ರೀಲಂಕಾದ ವಾನಿಂಡು ಹಸರಂಗ ಹಾಗೂ ಬಾಂಗ್ಲಾದೇಶದ ಶಕೀಬ್ ಅಲ್-ಹಸನ್ ಕ್ರಮವಾಗಿ 2 ಹಾಗೂ 3ನೇ ಸ್ಥಾನಕ್ಕೇರಿದ್ದಾರೆ.
ನೇಪಾಳದ ರೋಹಿತ್‌ಗೆ ಗುದ್ದಿದ್ದಕ್ಕೆ ಬಾಂಗ್ಲಾದ ತನ್ಜಿಮ್‌ಗೆ ಐಸಿಸಿ ದಂಡ!
ದುಬೈ: ನೇಪಾಳ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಅನುಚಿತ ವರ್ತನೆ ತೋರಿ, ಆ ತಂಡದ ನಾಯಕ ರೋಹಿತ್ ಪೌಡೆಲ್‌ಗೆ ಗುದ್ದಿದ್ದ ಬಾಂಗ್ಲಾದೇಶದ ವೇಗಿ ತನ್ಜಿಮ್ ಹಸನ್ ಶಕೀಬ್‌ಗೆ ಐಸಿಸಿ ದಂಡ ಹಾಕಿದೆ. ಪಂದ್ಯದ ಸಂಭಾವನೆಯ ಶೇ.15ರಷ್ಟು ಮೊತ್ತವನ್ನು ದಂಡವಾಗಿ ಪಾವತಿಸಲು ಮ್ಯಾಚ್ ರೆಫ್ರಿ ಸೂಚಿಸಿದ್ದಾರೆ. ಜೊತೆಗೆ ತನ್ಜಿಮ್ ಒಂದು ಋಣಾತ್ಮಕ ಅಂಕಕ್ಕೂ ಗುರಿಯಾಗಿದ್ದಾರೆ.
Breaking: ಕರ್ನಾಟಕ ಮೂಲದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದುರ್ಮರಣ..!
ವಿಶ್ವಕಪ್ ಸ್ವಾರಸ್ಯ
ಸೂಪರ್-8ಗೆ ಪ್ರವೇಶಿಸಿರುವ 8 ತಂಡಗಳ ಪೈಕಿ ಅತಿಕಡಿಮೆ ಸಿಕ್ಸರ್ ಬಾರಿಸಿರುವ ತಂಡ ಭಾರತ. ಟೂರ್ನಿಯಲ್ಲಿ ಸದ್ಯ 3 ಪಂದ್ಯಗಳನ್ನು ಆಡಿರುವ ಭಾರತ ಗಳಿಸಿರುವುದು ಕೇವಲ 11 ಸಿಕ್ಸರ್. ವಿಂಡೀಸ್ 34 ಸಿಕ್ಸರ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 32 ಸಿಕ್ಸರ್ ಚಚ್ಚಿರುವ ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದೆ. ದ.ಆಫ್ರಿಕಾ 26 ಸಿಕ್ಸರ್ ಸಿಡಿಸಿದೆ. ಸೂಪರ್-8ನಲ್ಲಿ ಭಾರತಕ್ಕೆ ಮೊದಲ ಎದುರಾಳಿಯಾಗಲಿರುವ ಆಫ್ಘನ್ 21 ಸಿಕ್ಸರ್ ಬಾರಿಸಿದೆ.
ದಿ ಹಂಡ್ರೆಡ್‌ನ ಲಂಡನ್ ತಂಡದಲ್ಲಿ ಪಾಲುದಾರಿಕೆಗೆ ಐಪಿಎಲ್ ಟೀಂಗಳ ಆಸಕ್ತಿ!
ಲಂಡನ್: ಇಂಗ್ಲೆಂಡ್‌ನ ದಿ ಹಂಡ್ರೆಡ್ ಟೂರ್ನಿಯ ಲಂಡನ್ ಸ್ಪಿರಿಟ್ ತಂಡದಲ್ಲಿ ಪಾಲು ಪಡೆಯಲು ಐಪಿಎಲ್‌ನ 5 ಫ್ರಾಂಚೈಸಿಗಳು ಆಸಕ್ತಿ ತೋರಿವೆ ಎಂದು ತಂಡದ ಮುಖ್ಯಸ್ಥ, ಖ್ಯಾತ ವೀಕ್ಷಕ ವಿವರಣೆಗಾರ ಮಾರ್ಕ್ ನಿಕೋಲಸ್ ಹೇಳಿದ್ದಾರೆ. ಆದರೆ ಯಾವ 5 ಫ್ರಾಂಚೈಸಿಗಳು ಎನ್ನುವ ವಿವರವನ್ನು ಮಾರ್ಕ್ ಬಹಿರಂಗಗೊಳಿಸಿಲ್ಲ. ಈಗಾಗಲೇ ದ.ಆಫ್ರಿಕಾ, ವಿಂಡೀಸ್, ಅಮೆರಿಕ, ಯುಎಇ ಲೀಗ್‌ಗಳಲ್ಲಿ ಐಪಿಎಲ್ ಫ್ರಾಂಚೈಸಿಗಳು ತಂಡಗಳನ್ನು ಹೊಂದಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.