
ಬೆಂಗಳೂರು(ಮೇ.15): 15ನೇ ಐಪಿಎಲ್ ಮುಕ್ತಾಯದ ಹಂತ ತಲುಪಿದೆ. ಮೇ 22ಕ್ಕೆ ಗುಂಪು ಹಂತದ ಪಂದ್ಯಗಳು ಮುಗಿಯಲಿದ್ದು, 29ಕ್ಕೆ ಫೈನಲ್ ಮಹಾಸಮರ ನಡೆಯಲಿದೆ. ಈ ಕ್ಯಾಶ್ ರಿಚ್ ಲೀಗ್ ಮುಗಿಯುತ್ತಿದ್ದಂತೆ ಟೀಂ ಇಂಡಿಯಾ ಇಂಟರ್ನ್ಯಾಶನಲ್ ಕ್ರಿಕೆಟ್ನತ್ತ ಫೋಕಸ್ ಮಾಡಲಿದೆ. ಸೌತ್ ಆಫ್ರಿಕಾ ವಿರುದ್ಧ ರೋಹಿತ್ ಆಂಡ್ ಗ್ಯಾಂಗ್ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದ್ದು, ಟಿ20 ವಿಶ್ವಕಪ್ ಸಿದ್ಧತೆ ದೃಷ್ಟಿಯಿಂದ ಈ ಸರಣಿ ಮಹತ್ವವೆನಿಸಿದೆ. ಐಪಿಎಲ್ನಲ್ಲಿ ಸಾಲಿಡ್ ಪ್ರದರ್ಶನದ ನೀಡಿದ ನಾಲ್ವರು ಪ್ಲೇಯರ್ಸ್ ಇದೇ ಸರಣಿಯಲ್ಲಿ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.
1. RCB ತೂಫಾನ್ ದಿನೇಶ್ ಕಾರ್ತಿಕ್:
ಐಪಿಎಲ್ ಆರಂಭದಿಂದ ಇಲ್ಲಿಯವರೆಗೆ ದಿನೇಶ್ ಕಾರ್ತಿಕ್ ಹೆಸರು ಪ್ರಜ್ವಲಿಸ್ತಿದೆ.ಈ ಮಾನ್ಸ್ಸ್ಟಾರ್ ಆರ್ಸಿಬಿ ಪರ ರನ್ ಹೊಳೆ ಹರಿಸಿದ್ದಾರೆ. ಫಿನಿಶಿಂಗ್ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸ್ತಿರೋ ಡಿಕೆ ಈವರೆಗೆ 192 ಸ್ಟ್ರೈಕ್ರೇಟ್ನಲ್ಲಿ 285 ರನ್ ಗಳಿಸಿ ಹಲ್ಚಲ್ ಎಬ್ಬಿಸಿದ್ದಾರೆ. ಸೆಲೆಕ್ಟರ್ಸ್ ಡಿಕೆ ಆಟಕ್ಕೆ ಮನಸೋತಿದ್ದು, ಆಫ್ರಿಕಾ ಸರಣಿಯಲ್ಲಿ ಸ್ಥಾನ ಪಡೆಯೋದು ಪಕ್ಕಾ ಎನ್ನಲಾಗ್ತಿದೆ. ತಮಿಳ್ ಮಗನ್ 2019ರಲ್ಲಿ ಭಾರತ ಪರ ಕೊನೆ ಪಂದ್ಯವಾಡಿದ್ರು.
2. ನನಸಾಗಲಿದೆ ತೆವಾಟಿಯಾರ ಡೆಬ್ಯು ಡ್ರೀಮ್ :
ಹರಿಯಾಣದ ರಾಹುಲ್ ತೆವಾಟಿಯಾ ಕಳೆದ 3 ಸೀಸನ್ಗಳಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಈ ಬಾರಿ ಆಡಿದ 12 ಪಂದ್ಯಗಳಿಂದ ಅಮೋಘ 193 ರನ್ ಸಿಡಿಸಿ ಟೀಮ್ ಇಂಡಿಯಾಗೆ ಎಂಟ್ರಿಕೊಡೋ ರೇಸ್ನಲ್ಲಿದ್ದಾರೆ. ಆಲ್ರೌಂಡರ್ ತೆವಾಟಿಯಾ 2020ರಲ್ಲಿ ಟೀಮ್ ಇಂಡಿಯಾಗೆ ಸೆಲೆಕ್ಟ್ ಆಗಿದ್ರು. ಆದ್ರೆ ಡೆಬ್ಯು ಭಾಗ್ಯ ಸಿಕ್ಕಿರಲಿಲ್ಲ. ಈ ಸಲ ಆ ಬಿಗ್ ಡ್ರೀಮ್ ನೆರವೇರುವ ಎಲ್ಲಾ ಸಾಧ್ಯತೆ ಇದೆ.
3. ಬಿಗ್ ಹಿಟ್ಟರ್ ಹಾರ್ದಿಕ್ ಪಾಂಡ್ಯ ಇಸ್ ಬ್ಯಾಕ್:
2021ರ ಟಿ20 ವಿಶ್ವಕಪ್ ಬಳಿಕ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದಾರೆ. ಬ್ಯಾಡ್ ಫಾರ್ಮ್ ಹಾಗೂ ಅನ್ಫಿಟ್ ನಡುವೆ ಐಪಿಎಲ್ನಲ್ಲಿ ಕಣಕ್ಕಿಳಿದ ಪಾಂಡ್ಯ ಜಬರ್ದಸ್ತ್ ಆಟವಾಡ್ತಿದ್ದಾರೆ. ತಂಡವನ್ನ ಪ್ಲೇ ಆಫ್ ಗೇರಿಸಿದ್ದು, ಬ್ಯಾಟಿಂಗ್ನಲ್ಲಿ ಅಮೋಘ 333 ರನ್ ಗಳಿಸಿದ್ದಾರೆ. ಆ ಮೂಲಕ ಐಯಮ್ ಫಿಟ್ ಅನ್ನೋ ಸಂದೇಶವನ್ನ ಸೆಲೆಕ್ಟರ್ಸ್ಗೆ ರವಾನಿಸಿದ್ದಾರೆ.
4. ಸ್ಲಾಗ್ ಓವರ್ ಸ್ಪೆಶಲಿಸ್ಟ್ ನಟ್ಟುಗೆ ಒಲಿಯುತ್ತೆ ಅದೃಷ್ಟ:
ಇನ್ನು ಸನ್ರೈರ್ಸ್ ಹೈದ್ರಾಬಾದ್ ಪರ ಬೌಲಿಂಗ್ನಿಂದ ಟಿ ನಟರಾಜನ್ ಗಮನ ಸೆಳೆದಿದ್ದು, ಆಫ್ರಿಕಾ ಸರಣಿ ಮೇಲೆ ಕಣ್ಣಿಟ್ಟಿದ್ದಾರೆ. ನಟ್ಟು 9 ಪಂದ್ಯಗಳಿಂದ 17 ವಿಕೆಟ್ ಕಬಳಿಸಿದ್ದು ಸ್ಲಾಗ್ ಓವರ್ ಸ್ಪೆಶಲಿಸ್ಟ್ ಆಗಿ ಹೊರಹೊಮ್ಮಿದ್ದಾರೆ. ಟಿ20 ವಿಶ್ವಕಪ್ ದೃಷ್ಟಿಯಿಂದ ಬಿಸಿಸಿಐ ಸೆಲೆಕ್ಟರ್ಸ್ ನಟರಾಜನ್ಗೆ ಮಣೆ ಹಾಕೋದು ಪಕ್ಕಾ. ಒಟ್ಟಿನಲ್ಲಿ ಮೇಲಿನ ನಾಲ್ವರಲ್ಲದೇ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡ್ತಿರೋ ಇನ್ನು ಕೆಲ ಯಂಗ್ ಸ್ಟರ್ಸ್ಗೆ ಲಕ್ ಖುಲಾಯಿಸಿದ್ರು ಅಚ್ಚರಿಯಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.