ಭಾರತ ವಿರುದ್ಧದ ಮದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ದಾಖಲೆಯ ಗೆಲುವು ಸಾಧಿಸಿದೆ. ವಿಕೆಟ್ ನಷ್ಟವಿಲ್ಲದೆ ಗೆಲುವು ಸಾಧಿಸಿದ ಆಸೀಸ್, ವರ್ಷದ ಮೊದಲ ಏಕದಿನ ಪಂದ್ಯದಲ್ಲಿ ಗೆಲುವಿನ ಕೇಕೆ ಹಾಕಿದೆ.
ಮುಂಬೈ(ಜ.14): ಹೊಸ ವರ್ಷದ ಮೊದಲ ಟಿ20 ಸರಣಿ ಗೆದ್ದು ಬೀಗಿದ್ದ ಟೀಂ ಇಂಡಿಯಾ, ಮೊದಲ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗೆಲುವಿನೊಂದಿಗೆ ಸಂಕ್ರಾತಿ ಹಬ್ಬ ಆಚರಿಸಲು ಮುಂದಾಗಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ. ಡೇವಿಡ್ ವಾರ್ನರ್ ಹಾಗೂ ನಾಯಕ ಆ್ಯರೋನ್ ಫಿಂಚ್ ಅಬ್ಬರದಿಂದ ಭಾರತ ಹೀನಾಯ ಸೋಲು ಕಂಡಿತು.
ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ: ಕೊಹ್ಲಿ ಟೀಕಿಸಿದ ಫ್ಯಾನ್ಸ್!
ಆಸ್ಟ್ರೇಲಿಯಾಗೆ 256 ರನ್ ಟಾರ್ಗೆಟ್ ನೀಡಿದ ಟೀಂ ಇಂಡಿಯಾ ಬಹುಬೇಗನೆ ವಿಕೆಟ್ ಕಬಳಿಸಿ ಎದುರಾಳಿಗಳ ಮೇಲೆ ಒತ್ತಡ ಹೇರೋ ಪ್ಲಾನ್‌ನಲ್ಲಿತ್ತು. ಆದರೆ ಡೇವಿಡ್ ವಾರ್ನರ್ ಹಾಗೂ ಆ್ಯರೋನ್ ಫಿಂಚ್ ಸ್ಫೋಟಕ ಬ್ಯಾಟಿಂಗ್ ಎಲ್ಲಾ ಲೆಕ್ಕಾಚಾರ ತಲೆಕೆಳಗೆ ಮಾಡಿತು. ಬೌಂಡರಿ ಸಿಕ್ಸರ್ ಅಬ್ಬರಕ್ಕೆ ಟೀಂ ಇಂಡಿಯಾ ಬೌಲರ್‌ಗಳು ಸುಸ್ತಾದುರು.
ಇದನ್ನೂ ಓದಿ: INDvAUS ಮೊದಲ ಏಕದಿನ: ಕಪ್ಪು ಬಟ್ಟೆ ಧರಿಸಿದವರಿಗೆ ಪ್ರವೇಶ ನಿಷೇಧ!
ವಿಕೆಟ್ ಕಬಳಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದ್ದ ರಿವ್ಯೂ ಕೂಡ ಕಳೆದುಕೊಂಡರೂ ಆರಂಭಿಕರ ವಿಕೆಟ್ ಪತನವಾಗಲಿಲ್ಲ. ಇತ್ತ ವಾರ್ನರ್ ಹಾಗೂ ಫಿಂಚ್ ಭರ್ಜರಿ ಶತಕ ಸಿಡಿಸಿ ಮಿಂಚಿದರು.
ವಾರ್ನರ್ ಅಜೇಯ 128 ರನ್ ಹಾಗೂ ಫಿಂಚ್ ಅಜೇಯ 110 ರನ್ ಸಿಡಿಸಿದರು. ಈ ಮೂಲಕ ಆಸ್ಟ್ರೇಲಿಯಾ 37.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗೆಲುವಿನ ದಡ ಸೇರಿತು. ಭರ್ಜರಿ 10 ವಿಕೆಟ್ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.ಬರೋಬ್ಬರಿ 15 ವರ್ಷಗಳ ಬಳಿಕ ಭಾರತ 10 ವಿಕೆಟ್ ಹೀನಾಯ ಸೋಲು ಕಂಡಿತು.