ಕಳವಾಗಿದ್ದ ಡೇವಿಡ್ ವಾರ್ನರ್‌ ‘ಬ್ಯಾಗಿ ಗ್ರೀನ್‌’ ಪತ್ತೆ!

By Kannadaprabha News  |  First Published Jan 7, 2024, 9:39 AM IST

ಕಾಣೆಯಾಗಿದ್ದ ಕ್ಯಾಪ್‌ ಹೋಟೆಲ್‌ನಲ್ಲಿ ಪತ್ತೆಯಾಗಿದ್ದಾಗಿ ಶುಕ್ರವಾರ ವಾರ್ನರ್‌ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ಜ.3ರಂದು ಆರಂಭಗೊಂಡ ಪಾಕಿಸ್ತಾನ ವಿರುದ್ಧದ ಪಂದ್ಯದ ಮುನ್ನಾದಿನ ವಾರ್ನರ್‌ ತಮ್ಮ ಕ್ಯಾಪ್‌ ಇರುವ ಬ್ಯಾಗ್‌ ಕಳವಾಗಿದ್ದಾಗಿ ಬೇಸರ ವ್ಯಕ್ತಪಡಿಸಿದ್ದರು.


ಸಿಡ್ನಿ(ಜ.7): ವಿದಾಯದ ಟೆಸ್ಟ್‌ ಪಂದ್ಯಕ್ಕೂ ಮುನ್ನ ಕಳವಾಗಿದ್ದ ಬ್ಯಾಗಿ ಗ್ರೀನ್‌(ಟೆಸ್ಟ್ ಪಾದಾರ್ಪಣೆ ವೇಳೆ ನೀಡುವ ಕ್ಯಾಪ್‌)ಅನ್ನು ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್ ಮರಳಿ ಪಡೆದಿದ್ದಾರೆ. ಕಾಣೆಯಾಗಿದ್ದ ಕ್ಯಾಪ್‌ ಹೋಟೆಲ್‌ನಲ್ಲಿ ಪತ್ತೆಯಾಗಿದ್ದಾಗಿ ಶುಕ್ರವಾರ ವಾರ್ನರ್‌ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ಜ.3ರಂದು ಆರಂಭಗೊಂಡ ಪಾಕಿಸ್ತಾನ ವಿರುದ್ಧದ ಪಂದ್ಯದ ಮುನ್ನಾದಿನ ವಾರ್ನರ್‌ ತಮ್ಮ ಕ್ಯಾಪ್‌ ಇರುವ ಬ್ಯಾಗ್‌ ಕಳವಾಗಿದ್ದಾಗಿ ಬೇಸರ ವ್ಯಕ್ತಪಡಿಸಿದ್ದರು.

ಟೆಸ್ಟ್‌, ಏಕದಿನಕ್ಕೆ ಆಸ್ಟ್ರೇಲಿಯಾ ಸ್ಟಾರ್‌ ವಾರ್ನರ್‌ ಗುಡ್‌ಬೈ

Tap to resize

Latest Videos

ಸಿಡ್ನಿ: ಪಾಕಿಸ್ತಾನ ವಿರುದ್ಧದ 3ನೇ ಪಂದ್ಯದ ಮೂಲಕ ಆಸ್ಟ್ರೇಲಿಯಾದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಓರ್ವರಾದ ಡೇವಿಡ್‌ ವಾರ್ನರ್‌ ಶುಕ್ರವಾರ ತಮ್ಮ 12 ವರ್ಷಗಳ ಟೆಸ್ಟ್‌ ಕ್ರಿಕೆಟ್‌ ಪಯಣಕ್ಕೆ ವಿದಾಯ ಕೋರಿದ್ದಾರೆ. ವಿಶ್ವಕಪ್ ಫೈನಲ್‌ ಮೂಲಕ ತಮ್ಮ ಕೊನೆ ಏಕದಿನ ಪಂದ್ಯವಾಡಿರುವ 37ರ ವಾರ್ನರ್‌ ಇನ್ನು ಟಿ20ಯಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ವಾರ್ನರ್‌ ತಮ್ಮ ಕೊನೆ ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದರು.

2011ರಲ್ಲಿ ಟೆಸ್ಟ್‌ ಪಾದಾರ್ಪಣೆ ಮಾಡಿದ್ದ ವಾರ್ನರ್‌ ಈ ವರೆಗೆ ಆಸೀಸ್‌ ಪರ 112 ಟೆಸ್ಟ್‌ಗಳಲ್ಲಿ 44.59ರ ಸರಾಸರಿಯಲ್ಲಿ 8786 ರನ್‌ ಕಲೆಹಾಕಿದ್ದಾರೆ. ಗರಿಷ್ಠ ಸ್ಕೋರ್ 335 ರನ್‌. ಒಟ್ಟು 26 ಶತಕ, 37 ಅರ್ಧಶತಕಗಳನ್ನೂ ಅವರು ಬಾರಿಸಿದ್ದಾರೆ. ಇನ್ನು 161 ಏಕದಿನ ಪಂದ್ಯಗಳಲ್ಲಿ 45.30ರ ಸರಾಸರಿಯಲ್ಲಿ ವಾರ್ನರ್‌ 6932 ರನ್‌ ಗಳಿಸಿದ್ದರು. 22 ಶತಕಗಳ ಜೊತೆಗೆ 33 ಅರ್ಧಶತಕಗಳನ್ನೂ ಅವರು ಬಾರಿಸಿದ್ದಾರೆ.

ಟಿ20 ವಿಶ್ವಕಪ್‌ ವೇಳಾಪಟ್ಟಿ ಪ್ರಕಟ, ಜೂನ್‌ 1ಕ್ಕೆ ಟೂರ್ನಿ ಆರಂಭ; 9ಕ್ಕೆ ಭಾರತ-ಪಾಕ್‌ ಫೈಟ್‌

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಯನ್ನೂ ವಾರ್ನರ್‌ ಹೊಂದಿದ್ದಾರೆ. ಅವರು 451 ಇನ್ನಿಂಗ್ಸ್‌ಗಳಲ್ಲಿ 49 ಶತಕ(ಟೆಸ್ಟ್‌ 26, ಏಕದಿನಲ್ಲಿ 22, ಟಿ20ಯಲ್ಲಿ 1) ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್‌ 2ನೇ ಸ್ಥಾನದಲ್ಲಿದ್ದಾರೆ. ಅವರು 342 ಇನ್ನಿಂಗ್ಸ್‌ಗಳಲ್ಲಿ 45 ಶತಕ ಸಿಡಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ಆಸೀಸ್‌ 3-0 ವೈಟ್‌ವಾಶ್‌ 

ಸಿಡ್ನಿ: ಐತಿಹಾಸಿಕ ಟೆಸ್ಟ್‌ ಗೆಲ್ಲುವ ಕನಸಿನೊಂದಿಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದ್ದ ಪಾಕಿಸ್ತಾನ ಆಟಗಾರರು 0-3 ವೈಟ್‌ವಾಶ್‌ ಮುಖಭಂಗದೊಂದಿಗೆ ತವರಿಗೆ ಮರಳಿದ್ದಾರೆ. 3ನೇ ಟೆಸ್ಟ್‌ ಪಂದ್ಯದಲ್ಲಿ ಶನಿವಾರ ಆಸ್ಟ್ರೇಲಿಯಾ 8 ವಿಕೆಟ್ ಭರ್ಜರಿ ಜಯಗಳಿಸಿತು. 3ನೇ ದಿನ 7 ವಿಕೆಟ್‌ಗೆ 68 ರನ್‌ ಗಳಿಸಿದ್ದ ಪಾಕ್‌ ಶನಿವಾರ 115ಕ್ಕೆ ಆಲೌಟಾಯಿತು. ಗೆಲುವಿಗೆ 130 ರನ್‌ ಗುರಿ ಪಡೆದಿದ್ದ ಆಸೀಸ್‌ 2 ವಿಕೆಟ್‌ ಕಳೆದುಕೊಂಡು ಜಯಗಳಿಸಿತು. ವಿದಾಯದ ಪಂದ್ಯವಾಡಿದ ವಾರ್ನರ್‌ 57, ಲಬುಶೇನ್‌ 62 ರನ್‌ ಗಳಿಸಿದರು. ಇದಕ್ಕೂ ಮೊದಲು ಆರಂಭಿಕ ಇನ್ನಿಂಗ್ಸ್‌ನಲ್ಲಿ ಪಾಕ್‌ 313, ಆಸೀಸ್‌ 299 ರನ್‌ ಗಳಿಸಿತ್ತು.

click me!