
ಬೆಂಗಳೂರು: ಐಪಿಎಲ್ 2027ರ ಸೀಸನ್‌ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಸಹಾಯಕ ಕೋಚಿಂಗ್ ಬಳಗದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿದೆ. ಐದು ಬಾರಿಯ ಚಾಂಪಿಯನ್ ಸಿಎಸ್‌ಕೆ, ತನ್ನ ದೀರ್ಘಕಾಲದ ಬ್ಯಾಟಿಂಗ್ ಕೋಚ್ ಹಾಗೂ ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕಲ್ ಹಸ್ಸಿ ಅವರಿಗೆ ವಿದಾಯ ಹೇಳಿದೆ. ಕಳೆದ ಎಂಟು ವರ್ಷಗಳಿಂದ ಬ್ಯಾಟಿಂಗ್ ಕೋಚ್ ಆಗಿದ್ದ 'ಮಿಸ್ಟರ್ ಕ್ರಿಕೆಟ್' ಖ್ಯಾತಿಯ ಹಸ್ಸಿ ಈಗ ತಂಡದಿಂದ ಹೊರಬಂದಿದ್ದಾರೆ. ಹಸ್ಸಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅತ್ಯಂತ ನಂಬಿಗಸ್ಥ ಆಟಗಾರನಾಗಿ ಗುರುತಿಸಿಕೊಂಡಿದ್ದರು.
2008ರ ಮೊದಲ ಐಪಿಎಲ್ ಸೀಸನ್‌ನಿಂದಲೇ ಹಸ್ಸಿ ಸಿಎಸ್‌ಕೆ ತಂಡದ ಆಟಗಾರನಾಗಿದ್ದರು. ಅವರು ಆರು ಸೀಸನ್‌ಗಳಲ್ಲಿ ಹಳದಿ ಜರ್ಸಿಯಲ್ಲಿ ಕಣಕ್ಕಿಳಿದಿದ್ದರು. ಆ ಬಳಿಕ 2018ರಲ್ಲಿ ಹೆಡ್ ಕೋಚ್ ಸ್ಟೀಫನ್ ಫ್ಲೆಮಿಂಗ್ ಜೊತೆಗೆ ಬ್ಯಾಟಿಂಗ್ ಕೋಚ್ ಆಗಿ ಹಸ್ಸಿ ಮತ್ತೆ ತಂಡ ಸೇರಿಕೊಂಡರು. ಹಸ್ಸಿ ಗೈಡೆನ್ಸ್‌ನಲ್ಲಿ ಚೆನ್ನೈ ತಂಡ 2018, 2021 ಮತ್ತು 2023ರಲ್ಲಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿತ್ತು.
"2008ರ ಮೊದಲ ಸೀಸನ್‌ನಿಂದಲೂ ನೀವು ಚೆನ್ನೈ ಸೂಪರ್ ಕಿಂಗ್ಸ್ ಕುಟುಂಬದ ಪ್ರಮುಖ ಭಾಗವಾಗಿದ್ದೀರಿ. ನೀವು ಗಳಿಸಿದ ರನ್‌ಗಳು ಹಾಗೂ ಆಟಗಾರರಿಗೆ ನೀಡಿದ ಮಾರ್ಗದರ್ಶನ ಮಾತ್ರವಲ್ಲ, ಇಷ್ಟು ವರ್ಷಗಳ ಕಾಲ ಫ್ರಾಂಚೈಸಿ ಮೇಲೆ ನೀವು ತೋರಿದ ಶ್ರದ್ಧೆ ಹಳದಿ ಜರ್ಸಿಯಲ್ಲಿ ನಿಮ್ಮ ಪಯಣವನ್ನು ಗುರುತಿಸುವಂತೆ ಮಾಡಿದೆ. ನಮ್ಮ ಇತಿಹಾಸದಲ್ಲಿ ನಿಮ್ಮ ಸ್ಥಾನ ಯಾವಾಗಲೂ ವಿಶೇಷವಾಗಿರುತ್ತದೆ. ಒಮ್ಮೆ ಸೂಪರ್ ಕಿಂಗ್ ಆಗಿದ್ದರೆ, ಯಾವಾಗಲೂ ಸೂಪರ್ ಕಿಂಗ್ ಆಗಿರುತ್ತೀರಿ" ಎಂದು ಸಿಎಸ್‌ಕೆ ಹೇಳಿದೆ.
ಹೆಡ್ ಕೋಚ್ ಸ್ಥಾನದಿಂದ ಸ್ಟೀಫನ್ ಫ್ಲೆಮಿಂಗ್ ಕೂಡ ಹೊರಬಂದಿದ್ದಾರೆ. ಅವರ ಜಾಗಕ್ಕೆ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಅವರನ್ನು ಸಿಎಸ್‌ಕೆ ಹೊಸ ಹೆಡ್ ಕೋಚ್ ಆಗಿ ನೇಮಿಸಿದೆ. 2022ರಿಂದ 2024ರವರೆಗೆ ಸರ್ರೆ ತಂಡವನ್ನು ಸತತ ಮೂರು ಕೌಂಟಿ ಚಾಂಪಿಯನ್‌ಶಿಪ್ ಗೆಲ್ಲಿಸಿದ ಗರೆತ್ ಬ್ಯಾಟಿ ಅವರನ್ನು ಹೊಸ ಅಸಿಸ್ಟೆಂಟ್ ಕೋಚ್ ಆಗಿ ಆಯ್ಕೆ ಮಾಡಿದೆ.
ಹಸ್ಸಿ ಮಾತ್ರವಲ್ಲದೆ, 2018ರಿಂದ ತಂಡದಲ್ಲಿದ್ದ ಬೌಲಿಂಗ್ ಕೋಚ್ ಎರಿಕ್ ಸೈಮನ್ಸ್, ಫೀಲ್ಡಿಂಗ್ ಕೋಚ್ ಜೇಮ್ಸ್ ಫಾಸ್ಟರ್, ಅಸಿಸ್ಟೆಂಟ್ ಕೋಚ್ ರಾಜೀವ್ ಕುಮಾರ್, ಫಿಸಿಯೋಥೆರಪಿಸ್ಟ್ ಟಾಮಿ ಸಿಮ್ಸೆಕ್ ಮತ್ತು ಟ್ರೈನರ್ ಗ್ರೆಗ್ ಕಿಂಗ್ ಕೂಡ ಸಿಎಸ್‌ಕೆ ತೊರೆದಿದ್ದಾರೆ. ಭಾರತದ ಮಾಜಿ ಆಟಗಾರ ಮೋಹಿತ್ ಶರ್ಮಾ ಅವರನ್ನು ಚೆನ್ನೈ ತಂಡದ ಹೊಸ ಬೌಲಿಂಗ್ ಕೋಚ್ ಆಗಿ ಮ್ಯಾನೇಜ್ಮೆಂಟ್ ನೇಮಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವು 2024ರಿಂದೀಚಗೆ ನೀರಸ ಪ್ರದರ್ಶನ ತೋರುತ್ತಿರುವುದರಿಂದಲೇ ಕೋಚಿಂಗ್ ವಿಭಾಗದಲ್ಲಿ ಸಿಎಸ್‌ಕೆ ಫ್ರಾಂಚೈಸಿಯು ಮೇಜರ್ ಸರ್ಜರಿ ಮಾಡಿದೆ. ಕಳೆದ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಒಂಬತ್ತನೇ ಸ್ಥಾನ ಪಡೆದು ನಿರಾಸೆ ಅನುಭವಿಸಿತ್ತು. ಇದೀಗ ಜಹೀರ್ ಖಾನ್ ಮಾರ್ಗದರ್ಶನದಲ್ಲಿ ಸಿಎಸ್‌ಕೆ ತಂಡವು ಹಳೆಯ ಲಯಕ್ಕೆ ಮರಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.