6 6 6 6! ಸೂರ್ಯವಂಶಿ ಸಹೋದರ ವಿನಾಶಕಾರಿ ಬ್ಯಾಟಿಂಗ್, ಅಣ್ಣನಂತೆ ಸ್ಫೋಟಕ ಶತಕ

Published : Oct 26, 2026, 05:07 PM IST
Vaibhav Suryavanshi brother Ashirvad Sooryavanshi

ಸಾರಾಂಶ

ಟೀಂ ಇಂಡಿಯಾ ಆಟಗಾರ ವೈಭವ್ ಸೂರ್ಯವಂಶಿ ಅವರ 10 ವರ್ಷದ ಸಹೋದರ ಆಶೀರ್ವಾದ್ ಸೂರ್ಯವಂಶಿ ಸ್ಥಳೀಯ ಟೂರ್ನಮೆಂಟ್‌ನಲ್ಲಿ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಕೇವಲ 87 ಎಸೆತಗಳಲ್ಲಿ 14 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ವೈಭವ್ ಬೆನ್ನಲ್ಲೇ ಅವರ ಕುಟುಂಬದಿಂದ ಮತ್ತೊಂದು ಪ್ರತಿಭೆ ಹೊರಹೊಮ್ಮುತ್ತಿದೆ.

ವೈಭವ್ ಸೂರ್ಯವಂಶಿ ಟೀಂ ಇಂಡಿಯಾದ ಹಿರಿಯರ ತಂಡದಲ್ಲಿದ್ದು, ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾರೆ. ಟಿ-20 ಸರಣಿಯಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಸೂರ್ಯವಂಶಿಗೆ ಎರಡನೇ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಆದರೆ 8 ಬಾಲ್‌ನಲ್ಲಿ ಕೇವಲ 4 ರನ್‌ಗಳಿಸಿ ನಿರಾಸೆ ಮೂಡಿಸಿದರು. ಆದರೆ ಅವರ ಸಹೋದರ ಆಶೀರ್ವಾದ್ ಸೂರ್ಯವಂಶಿ ಸ್ಥಳೀಯ ಟೂರ್ನಮೆಂಟ್‌ನಲ್ಲಿ ಆರ್ಭಟಿಸಿ ಮಿಂಚಿದ್ದಾರೆ. ಮತ್ತೊಮ್ಮೆ ದೊಡ್ಡ ಮೊಟ್ಟದಲ್ಲಿ ಸುದ್ದಿ ಆಗಿದ್ದಾರೆ.

ಏಕಾಂಗಿಯಾಗಿ ಮ್ಯಾಚ್ ಗೆಲ್ಲಿಸಿದ ಪೋರ

ವಿನಾಶಕಾರಿ ಬ್ಯಾಟಿಂಗ್ ನಡೆಸಿರುವ ವೈಭವ್ ಸಹೋದರ 87 ಬಾಲ್‌ನಲ್ಲಿ ಸ್ಪೋಟಕ ಶತಕ ಬಾರಿಸಿದ್ದಾರೆ. ತಮ್ಮ ಶತಕದೊಂದಿಗೆ ತಂಡಕ್ಕೆ ಎರಡು ವಿಕೆಟ್‌ಗಳ ಗೆಲುವುನ್ನೂ ತಂದುಕೊಟ್ಟಿದ್ದಾರೆ. ಆಶೀರ್ವಾದ್ ಶತಕದಲ್ಲಿ 14 ಬೌಂಡರಿ, 4 ಸಿಕ್ಸರ್‍‌ಗಳು ಸೇರಿವೆ. ಇನ್ನೊಂದು ಅಚ್ಚರಿಯ ವಿಚಾರ ಏನೆಂದರೆ.. ಆಶೀರ್ವಾದ್ ತಂಡದ 9 ಬ್ಯಾಟರ್‍‌ಗಳು 20 ರನ್‌ ಸಹ ತಲುಪಿಲ್ಲ. ಏಕಾಂಗಿಯಾಗಿ ನಿಂತು ತಂಡವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆಶೀರ್ವಾದ್ ಸೂರ್ಯವಂಶಿ ಅವರು Cricket Academy Tajpur ತಂಡವನ್ನು ಪ್ರತಿನಿಧಿಸುತ್ತಾರೆ.

ಉಜ್ವಲ್ ಸೂರ್ಯವಂಶಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ಪೋಸ್ಟ್ ಒಂದನ್ನ ಮಾಡಿದ್ದಾರೆ. ಆ ಪೋಸ್ಟ್‌ ಆಶೀರ್ವಾದ್‌ ಶತಕ ಬಾರಿಸಿ ಸಂಭ್ರಮಿಸುತ್ತಿರುವ ಕ್ಷಣಗಳಾಗಿವೆ. ಆಶೀರ್ವಾದ್ ಸಹೋದರ ವೈಭವ್ ಸೂರ್ಯವಂಶಿ ಈಗಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಇದರ ಮಧ್ಯೆ ಆಶೀರ್ವಾದ್ ಹಂತ, ಹಂತವಾಗಿ ಭಾರತೀಯ ಕ್ರಿಕೆಟ್‌ನಲ್ಲಿ ಹೆಸರು ಮಾಡುತ್ತಿದ್ದಾರೆ. ವೈಭವ್ ಬೆನ್ನಲ್ಲೇ, ಅವರ ಕುಟುಂಬದಿಂದ ಮತ್ತೊಂದು ಪ್ರತಿಭೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಳೆದ ಜೂನ್‌ನಲ್ಲಿ ನಡೆದ ಪಂದ್ಯಗಳಲ್ಲೂ ಸೂರ್ಯವಂಶಿ ಅವರ ಸಹೋದರ ಮಿಂಚಿದ್ದರು. 141.18 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್ ಬೀಸಿ.. ಆರು ಸಿಕ್ಸರ್‍ಗಳು ಹಾಗೂ 19 ಬೌಂಡರಿ ಚಚ್ಚಿದ್ದರು.ಒಟ್ಟು 119 ಬಾಲ್ ಎದುರಿಸಿದ ಸೂರ್ಯವಂಶಿ168 ರನ್‌ಗಳಿಸಿದ್ದರು. ಇನ್ನೊಂದು ಪಂದ್ಯದಲ್ಲಿ 87 ಬಾಲ್‌ನಲ್ಲಿ 103 ರನ್‌ ಗಳಿಸಿದ್ದರು. ಅಲ್ಲಿಂದ ಆಶೀರ್ವಾದ್ ಸೂರ್ಯವಂಶಿ, ಜನಪ್ರಿಯತೆಗೆ ಬಂದರು. ಅಂದಹಾಗೆ ಆರ್ಶೀವಾದ್ ವಯಸ್ಸು ಕೇವಲ 10 ವರ್ಷ.

ವೈಭವ್ ಎಡಗೈ ಬ್ಯಾಟಿಂಗ್ ಮತ್ತು ಸ್ಪಿನ್ ಬೌಲಿಂಗ್ ಮಾಡುತ್ತಾರೆ. ಆದರೆ ಆಶೀರ್ವಾದ್ ಬಲಗೈ ಬ್ಯಾಟ್ಸ್‌ಮನ್ ಮತ್ತು ಮಧ್ಯಮ ವೇಗದ ಬೌಲಿಂಗ್ ಮಾಡುತ್ತಾರೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20ಐನಲ್ಲಿ ಗಾಯಗೊಂಡ ಇಶಾನ್ ಕಿಶನ್ ಬದಲಿಗೆ ವೈಭವ್ ಸೂರ್ಯವಂಶಿಗೆ ಆಡುವ ಅವಕಾಶ ಸಿಕ್ಕಿತ್ತು.

ತಮಗೆ ಸಿಕ್ಕ ಅವಕಾಶವನ್ನು ಅವರು ಸರಿಯಾಗಿ ಬಳಸಿಕೊಂಡಿಲ್ಲ. ಕೇವಲ 4 ರನ್‌ಗಳಿಸಿ ಸುಸ್ತಾದರು. ನಾಳೆ ಮೂರನೇ ಟಿ20 ಪಂದ್ಯವು ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ. ಇಶಾನ್ ಕಿಶಾನ್ ಅವರು ಸಿರೀಸ್‌ನಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ಮತ್ತೆ ಆಡುವ ಅವಕಾಶ ಇದೆ. ಹಾಗಾಗಿ ನಾಳೆ ನಡೆಯಲಿರುವ ಪಂದ್ಯದ ಮೇಲೆ ಸೂರ್ಯವಂಶಿ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IND vs NZ: ಮೂರನೇ ಟಿ20 ಪಂದ್ಯಕ್ಕೆ ಬಲಿಷ್ಠ ಭಾರತ ಸಂಭಾವ್ಯ ತಂಡ ಪ್ರಕಟ; ಓಪನ್ನಿಂಗ್ ಕಾಂಬಿನೇಷನ್ ಬದಲು?
IND vs NZ Live Streaming: ಫ್ರೀ ಆಗಿ ನೋಡಿ ಭಾರತ-ನ್ಯೂಜಿಲೆಂಡ್ 3ನೇ ಟಿ20 ಮ್ಯಾಚ್..! ಈ ಚಾನೆಲ್‌ನಲ್ಲಿ ಸಂಪೂರ್ಣ ಉಚಿತ