Sachin Tendulkar Advice for India Batters : ಕ್ರಿಕೆಟ್ ಅಭ್ಯಾಸ ಮಾಡ್ತಾ ಇದ್ರೆ, ನಿಮಗೂ ಇದು ಹೆಲ್ಪ್ ಆಗುತ್ತೆ!

Suvarna News   | Asianet News
Published : Dec 21, 2021, 09:24 PM IST
Sachin Tendulkar Advice for India Batters : ಕ್ರಿಕೆಟ್ ಅಭ್ಯಾಸ ಮಾಡ್ತಾ ಇದ್ರೆ, ನಿಮಗೂ ಇದು ಹೆಲ್ಪ್ ಆಗುತ್ತೆ!

ಸಾರಾಂಶ

ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳಿಗೆ ಸಚಿನ್ ಸಲಹೆ ಕ್ರಿಕೆಟ್ ಅಭ್ಯಾಸ ಮಾಡ್ತಿರೋ ಪ್ರತಿಯೊಬ್ಬರಿಗೂ ಇದು ಸಹಾಯ ಆಗುತ್ತೆ ಡಿ. 26 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ  

ಮುಂಬೈ (ಡಿ.17) : ದಕ್ಷಿಣ ಆಫ್ರಿಕಾ (South Africa) ನೆಲದಲ್ಲಿ ಮೊಟ್ಟಮೊದಲ ಸರಣಿ ಗೆಲುವು ಸಾಧಿಸುವ ಗುರಿಯೊಂದಿಗೆ ವಿರಾಟ್ ಕೊಹ್ಲಿ (Virat Kohli) ನೇತೃತ್ವದಲ್ಲಿ ಭಾರತ ತಂಡ (Team India) ಹರಿಣಗಳ ನಾಡಿನಲ್ಲಿದೆ. ಸೆಂಚುರಿಯನ್ ನಲ್ಲಿ (Centurion) ಡಿ. 26 ರಂದು ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ (Sachin Tendulkar) ಸಲಹೆಯೊಂದನ್ನು ನೀಡಿದ್ದಾರೆ. ಈ ಸಲಹೆ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳಿಗ ಮಾತ್ರವಲ್ಲ ಮುಂದೊಂದು ದಿನ ಕ್ರಿಕೆಟಿಗನಾಗಬೇಕು ಎನ್ನುವ ಆಸೆ ಹೊತ್ತು ಅಭ್ಯಾಸ ನಡೆಸುತ್ತಿರುವ ಎಲ್ಲಾ ಯುವ ಬ್ಯಾಟ್ಸ್ ಮನ್ ಗಳಿಗೂ ಈ ಸಲಹೆ ಸಹಾಯವಾಗಬಹುದು. ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ ಮನ್ ಗಳ ಸಾಲಿನಲ್ಲಿ ಒಬ್ಬರಾಗಿರುವ ಸಚಿನ್ ತೆಂಡುಲ್ಕರ್, ಟೆಸ್ಟ್ ಪಂದ್ಯವಾಡಲು ಅತ್ಯಂತ ಕಠಿಣ ಸ್ಥಳ ಎನಿಸಿರುವ ದಕ್ಷಿಣ ಆಫ್ರಿಕಾದಲ್ಲೂ ಯಶಸ್ಸಿನ ಸವಿ ಕಂಡವರು. 1992, 1996, 2001, 2006 ಹಾಗೂ 2010ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಭಾರತ ತಂಡದ ಸದಸ್ಯರಾಗಿದ್ದ ಸಚಿನ್, ಐದು ಬಾರಿ ಇಲ್ಲಿ ಶತಕದ ಗಡಿ ದಾಟಿದ್ದಾರೆ. ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಸಿದ್ಧವಾಗುತ್ತಿರುವ ಟೀಮ್ ಇಂಡಿಯಾ ಬ್ಯಾಟ್ಸ್ ಮನ್ ಗಳಿಗೆ ಸಚಿನ್ ಉಪಯುಕ್ತ ಸಲಹೆಯೊಂದನ್ನು ನೀಡಿದ್ದಾರೆ.

ಹಿರಿಯ ಕ್ರೀಡಾಪತ್ರಕರ್ತರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿನ್, ದಕ್ಷಿಣ ಆಫ್ರಿಕಾದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಯಶಸ್ಸು ಕಾಣಬೇಕಾದರೆ ತಾಂತ್ರಿಕವಾಗಿ ಏನು ಮಾಡಬೇಕು ಎನ್ನುವ ಪ್ರಶ್ನೆಯನ್ನು ಕೇಳಲಾಯಿತು. "ಬಹುಶಃ ಪ್ರತಿ ಬಾರಿಯೂ ನಾನು ಇದನ್ನೇ ಹೇಳುತ್ತಿರುತ್ತೇನೆ. ಫ್ರಂಟ್ ಅಲ್ಲಿ, ಫ್ರಂಟ್ ಫೂಟ್ ಡಿಫೆನ್ಸ್ (Front Foot Defence) ಬಹಳ ಪ್ರಮುಖ. ಆ ಫ್ರಂಟ್ ಫೂಟ್ ಡಿಫೆನ್ಸ್ ನಿಮ್ಮ ಯಶಸ್ಸನ್ನು ಇಲ್ಲಿ ನಿರ್ಧಾರ ಮಾಡುತ್ತದೆ. ವೇಗದ ಬೌಲಿಂಗ್ ಗೆ ನೆರವೀಯುವ ದಕ್ಷಿಣ ಆಫ್ರಿಕಾದಂಥ ನೆಲದಲ್ಲಿ ಮೊದಲ 25 ಓವರ್ ಗಳ ಆಟದಲ್ಲಿ ನಾವಾಡುವ ಫ್ರಂಟ್ ಫೂಟ್ ಡಿಫೆನ್ಸ್ ನಮ್ಮ ಆಟದಲ್ಲಿ ಬಹಳ ನಿರ್ಣಾಯಕವಾಗಿರುತ್ತದೆ' ಎಂದಿದ್ದಾರೆ.

ಇದೇ ವೇಳೆ ರೋಹಿತ್ ಶರ್ಮ (Rohit Sharma) ಹಾಗೂ ಕೆಎಲ್ ರಾಹುಲ್ (KL Rahul) ಅವರ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಸಚಿನ್, "ಇವರು ಆಡುವಾಗ ನೀವು ಗಮನವಿಟ್ಟು ನೋಡಿ ದೇಹದಿಂದ ತುಂಬಾ ದೂರ ಕೈಗಳನ್ನು ಕೊಂಡೊಯ್ಯುವುದಿಲ್ಲ. ಕೈಗಳನ್ನು ದೇಹದಿಂದ ತುಂಬಾ ದೂರ ತೆಗೆದುಕೊಂಡು  ಹೋಗಲು ಯಾವಾಗ ಆರಂಭಿಸುತ್ತೀರೋ ಆಗ ನಿಧಾನವಾಗಿ ನೀವು ನಿಯಂತ್ರಣ ಕಳೆದುಕೊಳ್ಳುತ್ತೀರಿ. ಕೆಲ ಹೊತ್ತಿನಲ್ಲೇ ಸಂಪೂರ್ಣ ನಿಯಂತ್ರಣ ಕಳೆದುಕೊಳ್ಳುತ್ತೀರಿ. ಈ ಇಬ್ಬರು ಬ್ಯಾಟ್ಸ್ ಮನ್ ಗಳ ವಿಶೇಷತೆ ಎಂದರೆ ಇದೇ ಆಗಿದೆ' ಎಂದು ಸಚಿನ್ ವಿವರಣೆ ನೀಡಿದ್ದಾರೆ.

World's Most Admired List: ಜಗತ್ತಿನ ಅಚ್ಚುಮೆಚ್ಚಿನ ಕ್ರೀಡಾಪಟುಗಳಲ್ಲಿ ತೆಂಡುಲ್ಕರ್‌ಗೆ ಮೂರನೇ ಸ್ಥಾನ
ಇಂಥ ಸಣ್ಣ ಸಣ್ಣ ಸಂಗತಿಗಳ ಮೇಲೆ ಗಮನ ನೀಡಿದರೆ ಟೆಸ್ಟ್ ಪಂದ್ಯದಲ್ಲಿ ದೀರ್ಘ ಕಾಲ ಆಡಲು ಸಾಧ್ಯವಾಗುತ್ತದೆ. ರೋಹಿತ್ ಶರ್ಮ ಹಾಗೂ ಕೆಎಲ್ ರಾಹುಲ್ ಇಂಗ್ಲೆಂಡ್ ನೆಲದಲ್ಲಿ (India Tour Of Engand) ಯಶಸ್ಸು ಕಂಡಿದ್ದು ಇದೇ ಕಾರಣದಿಂದ. ಪ್ರತಿ ಚೆಂಡನ್ನು ಎದುರಿಸುವಾಗ ನಾವು ತೋರುವ ತಾಳ್ಮೆಯೇ ನಮ್ಮ ಆಟ ಎಷ್ಟು ಹೊತ್ತು ಇರಲಿದೆ ಎನ್ನುವುದನ್ನು ನಿರ್ಧರಿಸುತ್ತದೆ ಎಂದಿದ್ದಾರೆ.

Sara Tendulkar Now a Model: ಸಚಿನ್ ತೆಂಡುಲ್ಕರ್ ಪುತ್ರಿ ಈಗ ಮಾಡೆಲ್, ಮೊದಲ ವಿಡಿಯೋ ಇಲ್ಲಿದೆ
ಇವರಿಬ್ಬರು ದೊಡ್ಡ ಇನ್ನಿಂಗ್ಸ್ ಆಡಲು ಕಾರಣವಾದ ಅಂಶವೆಂದರೆ, ಅವರು ತಮ್ಮ ಕೈಗಳನ್ನು ದೇಹಕ್ಕೆ ತೀರಾ ಹತ್ತಿರದಲ್ಲಿಟ್ಟು ಶಾಟ್ ಬಾರಿಸುತ್ತಿದ್ದರು. ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಬಂದ ಇವರ ಜೊತೆಯಾಟಕ್ಕೂ, ಅದಕ್ಕೂ ಹಿಂದಿನ ಇಂಗ್ಲೆಂಡ್ ಪ್ರವಾಸಗಳಲ್ಲಿ ಆದ ವಿಫಲ ಜೊತೆಯಾಟಗಳಿಗೂ ಇರುವ ದೊಡ್ಡ ವ್ಯತ್ಯಾಸ ಇದೇ ಆಗಿದೆ ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2026: ಮಿನಿ ಹರಾಜಿಗೆ ಒಂದು ದಿನ ಬಾಕಿ ಇರುವಾಗ ಕೊನೆ ಕ್ಷಣದಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗ 'ವೈಲ್ಡ್ ಕಾರ್ಡ್' ಎಂಟ್ರಿ!
ಮುಂಬೈನಲ್ಲಿ ಮೆಸ್ಸಿ ಮೇನಿಯಾ! ಫುಟ್ಬಾಲ್‌ ಲೆಜೆಂಡ್‌ಗೆ 2011ರ ವಿಶ್ವಕಪ್ ಜೆರ್ಸಿ ಕೊಟ್ಟ ಸಚಿನ್