ದಿನೇಶ್ ಕಾರ್ತಿಕ್ ಅವರ ಬೆಂಗಳೂರಿನ ಓಡಾಟ ಹಲವರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಅದೂ ಕೂಡ ಒಂದೇ ರಸ್ತೆಯಲ್ಲಿ, ಒಂದೇ ಕೆಫೆಗೆ ಪದೇಪದೇ ಬರುತ್ತಿದ್ದಾರೆ ದಿನೇಶ್ ಕಾರ್ತಿಕ್. ಅವರ ಹಲವು ಅಭಿಮಾನಿಗಳು ಇದೀಗ ಆ ಕೆಫೆಯ ಬಳಿ ..
ಹೌದು, ಈ ಸುದ್ದಿ ನಿಜ... ನೀವು ನಂಬಲೇಬೇಕು.. ಕ್ರಿಕೆಟಿಗ ದಿನೇಶ್ ಕಾರ್ತಿಕ್ (Dinesh Karthik) ಅವರು ಬೆಂಗಳೂರಿನ ರಸ್ತೆಯಲ್ಲಿ ಓಡಾಡುತ್ತಿರೋದನ್ನ ನೋಡಿದವರು ಇದ್ದಾರೆ. ಬೆಂಗಳೂರಿನ ನೆರಳು ಕೆಫೆಗೆ ಬಂದು ಕಾಫಿ ಕುಡಿದು ಹೋಗಿದ್ದಾರೆ ದಿನೇಶ್ ಕಾರ್ತಿಕ್. ಜೊತೆಯಲ್ಲಿ ಇಬ್ಬರು ಸಹ-ಆಟಗಾರರು ಹಾಗೂ ಗನ್ ಮ್ಯಾನ್ ಸಹ ಇದ್ದಾರೆ. ಮೊನ್ನೆ ಕೂಡ ಅದೇ ಸ್ಥಳದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ನೋಡಿದವರಿದ್ದಾರೆ. ಈ ಸುದ್ದಿಯೀಗ ಭಾರೀ ವೈರಲ್ ಆಗುತ್ತಿದೆ.
ಹೌದು, ದಿನೇಶ್ ಕಾರ್ತಿಕ್ ಅವರ ಬೆಂಗಳೂರಿನ ಓಡಾಟ ಹಲವರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಅದೂ ಕೂಡ ಒಂದೇ ರಸ್ತೆಯಲ್ಲಿ, ಒಂದೇ ಕೆಫೆಗೆ ಪದೇಪದೇ ಬರುತ್ತಿದ್ದಾರೆ ದಿನೇಶ್ ಕಾರ್ತಿಕ್. ಅವರ ಹಲವು ಅಭಿಮಾನಿಗಳು ಇದೀಗ ಆ ಕೆಫೆಯ ಬಳಿ ಸುಳಿಯತೊಡಗಿದ್ದಾರಂತೆ. ಕ್ರಿಕೆಟರ್ ದಿನೇಶ್ ಕಾರ್ತಿಕ್ ನೆಕ್ಸ್ಟ್ ಯಾವಾಗ ಬರ್ತಾರೆ? ಯಾವ ಟೈಮ್ ಅಂತೆಲ್ಲ ವಿಚಾರಿಸತೊಡಗಿದ್ದಾರೆ. ಜೊತೆಯಲ್ಲಿ ಬರುತ್ತಿರುವ ಸಹ ಆಟಗಾರರ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡತೊಡಗಿದೆ.
ಮುಂಬೈ ಇಂಡಿಯನ್ಸ್ ಸೋಲಿನ ಬೆನ್ನಲ್ಲೇ ನಾಯಕ ಹಾರ್ದಿಕ್ ಪಾಂಡ್ಯಗೆ ಬಿಗ್ ಶಾಕ್!
ಸಾಮಾನ್ಯ ಜನರಲ್ಲಿ ನಟನಟಿಯರು, ಸೆಲೆಬ್ರಟಿಗಳು, ಕ್ರಿಕೆಟರ್ಸ್ ಹಾಗೂ ವಿಐಪಿಗಳ ಸಹಜ ಕುತೂಹಲ ಇರುತ್ತದೆ. ಇಲ್ಲಿ ಕೂಡ ಅದೇ ಕೆಲಸ ಮಾಡುತ್ತಿದೆ. ಜನಸಾಮಾನ್ಯರಂತೆ ಅವರೂ ಸಹ ಎಂಬುದು ಗೊತ್ತಿದ್ದರೂ ಕೂಡ ಅದೇನೋ ಕುತೂಹಲ, ನೋಡಬೇಕೆಂಬ ಕಾತುರ ಹಾಗೂ ಆತುರ ಇದ್ದೇ ಇರುತ್ತೆ. ಇದೀಗ ದಿನೇಶ್ ಕಾರ್ತಿಕ್ ಅವರನ್ನು ಅಲ್ಲಿ ನೋಡಲು, ಮಾತನಾಡಿಸಲು ಹಲವು ಜನರು ಕಾದುಕೊಂಡಿದ್ದಾರೆ. ಈ ಸಂಗತಿಯೀಗ ಹಲವರ ಪಾಲಿಗೆ ಹಬ್ಬಕ್ಕೆ ಹೋಳಿಗೆ ಎಂಬಂತಾಗಿದೆ.
ಅಂದಹಾಗೆ, ಏಪ್ರಿಲ್ 02 ರಿಂದ (02 April 2025) ಬೆಂಗಳೂರಿನಲ್ಲಿ ಆರ್‌ಸಿಬಿ (RCB) ಮ್ಯಾಚ್ ಆರಂಭವಾಗಲಿದೆ. ಈ ಕಾರಣಕ್ಕೆ ದಿನೇಶ್ ಕಾರ್ತಿಕ್ ಬೆಂಗಳೂರಿಗೆ ಬಂದಿದ್ದಾರೆ. ರಿಹರ್ಸಲ್ ಇರುತ್ತೆ, ಬೇರೆ ಏನೇನೋ ಪ್ರಿಪರೇಶನ್ಸ್ ಇರುತ್ತೆ, ಅದರ ಮಧ್ಯೆ ಅವರು ಕಾಫಿ ಕುಡಿಯೋದು ಬೇಡ್ವಾ? ಅದಕ್ಕೇ ನೆರಳು ಕೆಫೆ ಕಡೆ ಮುಖ ಮಾಡುತ್ತಿದ್ದಾರೆ. ಅದರಲ್ಲೇನು ತಪ್ಪಿದೆ? ಹೀಗೆ ಹತ್ತು ಹಲವು ಯೋಚನೆಗಳಲ್ಲಿ ಹಲವರು ಮುಳುಗಿದ್ದಾರೆ. ಆದರೆ ಅದ್ಯಾವುದರ ಪರಿವೆ ಇಲ್ಲದೇ ಆ ಕ್ರಿಕಟರ್ ದಿನೇಶ್ ಕಾರ್ತಿಕ್ ತಮ್ಮ ಪಾಡಿಗೆ ತಾವು ಕಾಫಿ ಕುಡಿದು ಹೋಗುತ್ತಿದ್ದಾರೆ. ಜಗತ್ತು ಎಂಥ ವಿಚಿತ್ರವಾಗಿದೆ ಅಂತೀರಾ ಹೇಗೆ? ನೋಡಿ, ಥಿಂಕ್ ಮಾಡಿ..!
ಶೇನ್ ವಾರ್ನ್ ಸಾವಿನ ಹಿಂದಿದೆ ಕಾಣದ ಕೈ; ಕೊನೆಗೂ ಬಯಲಾಯ್ತು ಬೆಚ್ಚಿಬೀಳಿಸೋ ಸುದ್ದಿ!