Cricket Schedule 2022: ಮುಂದಿನ ವರ್ಷ ಟೀಂ ಇಂಡಿಯಾಗೆ ಇರೋ ಸವಾಲುಗಳೇನು?

By Suvarna NewsFirst Published Dec 29, 2021, 5:43 PM IST
Highlights

ರೋಹಿತ್ ಶರ್ಮ-ವಿರಾಟ್ ಕೊಹ್ಲಿ ಎದುರು ಸಾಕಷ್ಟು ಸವಾಲುಗಳು
ಆಸ್ಟ್ರೇಲಿಯಾದಲ್ಲಿ ನಡೆಯಲಿದೆ ಟಿ2 ವಿಶ್ವಕಪ್ ಟೂರ್ನಿ
ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿ ಗೆಲ್ಲುವ ದೊಡ್ಡ ಅವಕಾಶ

ಬೆಂಗಳೂರು (ಡಿ. 29): ಭಾರತ (Team India) ಕ್ರಿಕೆಟ್ ತಂಡದ ಪಾಲಿಗೆ 2021ರ ವರ್ಷ ಬಹಳ ವಿಶೇಷವಾಗಿರಲಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನ (WTC) ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್  (New Zealand) ವಿರುದ್ಧ ಸೋಲು ಕಂಡಿದ್ದ ಭಾರತ ತಂಡ, ಆ ಬಳಿಕ ನಡೆದ ಟಿ20 ವಿಶ್ವಕಪ್ ನಲ್ಲಿ (T20 World Cup) ಗುಂಪು ಹಂತದಲ್ಲೇ ನಿರ್ಗಮಿಸಿತ್ತು. ಇದರಲ್ಲಿ ಪಾಕಿಸ್ತಾನ (Pakistan) ವಿರುದ್ಧ ವಿಶ್ವಕಪ್ ಟೂರ್ನಿಯಲ್ಲಿ ಎದುರಾದ ಮೊಟ್ಟಮೊದಲ ಸೋಲೂ ಕೂಡ ಸೇರಿದೆ. ಈ ಎಲ್ಲಾ ಕೆಟ್ಟ ಸೋಲುಗಳನ್ನು ಹಿಂದೆ ಬಟ್ಟು ಹೊಸ ವರ್ಷವನ್ನು ಉತ್ಸಾಹದೊಂದಿಗೆ ಎದುರಿಸಲು ಸಜ್ಜಾಗಿದೆ. 2022ರಲ್ಲಿ ಇರುವ ಅತಿದೊಡ್ಡ ಐಸಿಸಿ (ICC) ಟೂರ್ನಮೆಂಟ್ ಎಂದರೆ 2022ರ ಟಿ20 ವಿಶ್ವಕಪ್. ಅದರೊಂದಿಗೆ ಭಾರತ ತಂಡ ಇಂಗ್ಲೆಂಡ್ (England) ಹಾಗೂ ದಕ್ಷಿಣ ಅಫ್ರಿಕಾ (South Africa) ವಿರುದ್ಧವೂ ಮಹತ್ವದ ಸರಣಿಯನ್ನು ಆಡಲಿದೆ.

ಮುಂದಿನ ವರ್ಷ ಯಾರ ವಿರುದ್ಧವಿದೆ ಭಾರತ ತಂಡಕ್ಕೆ ಸರಣಿ
ಜನವರಿ: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ಭಾರತ ಜನವರಿ 3-7ರವರೆಗೆ 2ನೇ ಟೆಸ್ಟ್ ಹಾಗೂ 11-15ರವರೆಗೆ ಮೂರನೇ ಟೆಸ್ಟ್ ನಲ್ಲಿ ಕಾದಾಟ ನಡೆಸಲಿದೆ. ಆ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಜನವರಿ 19, 21 ಹಾಗೂ 23ಕ್ಕೆ ಪಂದ್ಯ ನಿಗದಿಯಾಗಿದೆ.

ಫೆಬ್ರವರಿ: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಬಳಿಕ ತಂಡ ತವರಿಗೆ ವಾಪಸಾಗಲಿದ್ದು, ಫೆಬ್ರವರಿಯಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಹಾಗೂ ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಫೆ. 6,9 ಹಾಗೂ 12ಕ್ಕೆ ಏಕದಿನ ಪಂದ್ಯಗಳ ಸರಣಿ ನಿಗದಿಯಾಗಿದ್ದರೆ, ಫೆ. 15, 18, 20ಕ್ಕೆ ಟಿ20 ಪಂದ್ಯಗಳು ನಡೆಯಲಿದೆ. ಅದಾದ ಬಳಿಕ ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ಅಡಲಿದ್ದು, ಫೆ. 25 ರಿಂದ ಮಾರ್ಚ್  ರವರೆಗೆ ಮೊದಲ ಟೆಸ್ಟ್ ನಡೆಯಲಿದೆ.

ಮಾರ್ಚ್: ಈ ತಿಂಗಳ 5 ರಿಂದ 9ರವರೆಗೆ ಭಾರತ ತಂಡ ಶ್ರೀಲಂಕಾ ವಿರುದ್ಧ 2ನೇ ಟೆಸ್ಟ್ ಆಡಲಿದೆ. ಟಿ20 ಸರಣಿಯ ಪಂದ್ಯಗಳು ಕ್ರಮವಾಗಿ ಮಾರ್ಚ್ 13, 15 ಹಾಗೂ 18 ರಂದು ನಡೆಯಲಿದ್ದು, ಆ ಬಳಿಕ ತಂಡದ ಆಟಗಾರರು ಐಪಿಎಲ್ ಗೆ ಸಿದ್ಧತೆ ನಡೆಸಲು ಆರಂಭಿಸಲಿದ್ದಾರೆ. 15ನೇ ಆವೃತ್ತಿಯ ಐಪಿಎಲ್ ಮಾರ್ಚ್ ಅಂತ್ಯದಲ್ಲಿ ನಡೆಯಲಿದೆ.

ಏಪ್ರಿಲ್ ಮತ್ತು ಮೇ: ಎಂದಿನಂತೆ ಏಪ್ರಿಲ್-ಮೇ ತಿಂಗಳಲ್ಲಿ ಸಂಪೂರ್ಣ ಕ್ರಿಕೆಟ್ ಜಗತ್ತು ಐಪಿಎಲ್ ನಲ್ಲಿ ವ್ಯಸ್ಥವಾಗಲಿದೆ.

ಜೂನ್: ಐಪಿಎಲ್ ಮುಕ್ತಾಯಗೊಂಡ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಯ ಟಿ20 ಪಂದ್ಯಗಳು ಕ್ರಮವಾಗಿ ಜೂನ್ 9, 12, 14, 17 ಹಾಗೂ 19ಕ್ಕೆ ನಡೆಯಲಿವೆ. ದಕ್ಷಿಣ ಆಫ್ರಿಕಾ ವಿರುದ್ಧ ತವರಿನ ಸರಣಿ ಮುಗಿಸ ಬಳಿಕ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ.

ಜುಲೈ: ಇಂಗ್ಲೆಂಡ್ ನೆಲದಲ್ಲಿ ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಯನ್ನ ಭಾರತ ಆಡಲಿದೆ. ಅದರ ಹೊರತಾಗಿ ಭಾರತ ಏಕೈಕ ಟೆಸ್ಟ್ ಪಂದ್ಯವನ್ನೂ ಆಡಲಿದೆ. 2021ರ ಆಗಸ್ಟ್-ಸೆಪ್ಟೆಂಬರ್ ನಲ್ಲಿ ಆಡಬೇಕಿದ್ದ ಐದು ಪಂದ್ಯಗಳ ಸರಣಿಯಲ್ಲಿ ಕೋವಿಡ್ ಕಾರಣದಿಂದಾಗಿ ಭಾರತ 4 ಪಂದ್ಯ ಮಾತ್ರವೇ ಆಡಿತ್ತು.

Round Up 2021: ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 5 ಬ್ಯಾಟರ್‌ಗಳಿವರು..!
ಸರಣಿಯಲ್ಲಿ 2-1 ಮುನ್ನಡೆಯಲ್ಲಿರುವ ಭಾರತ, ಇದರ ಕೊನೆಯ ಪಂದ್ಯವನ್ನು ಜುಲೈನಲ್ಲಿ ಆಡಲಿದೆ. ಐದೇ ಟೆಸ್ಟ್ ಪಂದ್ಯ ಜುಲೈ 1 ರಿಂದ 5ರವರೆಗೆ ನಡೆಯಲಿದೆ. ಆ ಬಳಿಕ, ಜುಲೈ 7, 9 ಹಾಗೂ 10 ರಂದು ಟಿ20 ಸರಣಿ, ಜುಲೈ 12, 14 ಹಾಗೂ 17 ರಂದು ಏಕದಿನ ಪಂದ್ಯಗಳ ಸರಣಿ ಆಡಲಿದೆ.

ಅಗಸ್ಟ್-ಸೆಪ್ಟೆಂಬರ್: ಭಾರತ ತಂಡ ಏಷ್ಯಾಕಪ್ ನಲ್ಲಿ ಆಡಲಿದ್ದು, ಟೂರ್ನಮೆಂಟ್ ನ ದಿನಾಂಕಗಳು ಇನ್ನಷ್ಟೇ ಘೋಷಣೆಯಾಗಬೇಕಿವೆ.

ಅಕ್ಟೋಬರ್-ನವೆಂಬರ್: ಭಾರತ ತಂಡ ಅಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಟಿ20 ವಿಶ್ವಕಪ್ ನಲ್ಲಿ ಪಾಲ್ಗೊಳ್ಳಲಿದೆ.

click me!