
ದೆಹಲಿ(ಏ.24) ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ತಾಣದಲ್ಲಿ ನಡೆದ ಭೀಕರ ಉಗ್ರ ದಾಳಿಗೆ ದೇಶ ಮರುಗಿದೆ. ಹಿಂದೂಗಳನ್ನು ಗುರಿಯಾಸಿ ನಡದ ದಾಳಿಯಲ್ಲಿ 26 ಅಮಾಯಕರು ಪ್ರಾಣತೆತ್ತಿದ್ದಾರೆ. ಕೇಂದ್ರ ಸರ್ಕಾರ ಈ ದಾಳಿಗ ಪ್ರತೀಕಾರ ತೀರಿಸಲು ಸಜ್ಜಾಗಿದೆ. ಒಂದೆಡೆ ಉಗ್ರರ ಆತಂಕ, ಮತ್ತೊಂದೆಡೆ ಆಕ್ರೋಶ ಹೆಚ್ಚಾಗುತ್ತಿದೆ. ಇದರ ನಡುವೆ ಮತ್ತೊಂದು ಆತಂಕಕಾರಿ ಬೆಳವಣಿಯಾಗಿದೆ. ಟೀಂ ಇಂಡಿಯಾ ಮುಖ್ಯ ಕೋಚ್, ಮಾಜಿ ಬಿಜೆಪಿ ಸಂಸದ ಗೌತಮ್ ಗಂಭೀರ್‌ಗೆ ಐಸಿಸ್ ಕಾಶ್ಮೀರ್ ಉಗ್ರರಿಂದ ಜೀವ ಬೆದರಿಕೆ ಬಂದಿದೆ. ಪಹಲ್ಗಾಮ್ ದಾಳಿ ಬೆನ್ನಲ್ಲೇ ಗೌತಮ್ ಗಂಭೀರ್‌ಗೆ ಜೀವ ಬೆದರಿಕೆ ಎಚ್ಚರಿಕೆ ಇದೀಗ ಹಲವರ ಆತಂಕ ಹೆಚ್ಚಿಸಿದೆ.
ದೆಹಲಿ ಪೊಲೀಸರಿಗೆ ಗಂಭೀರ್ ದೂರು
ಜೀವ ಬೆದರಿಕೆ ಕುರಿತು ಗೌತಮ್ ಗಂಭೀರ್ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಐಸಿಸ್ ಕಾಶ್ಮೀರ್ ಸಂಘಟನೆಯಿಂದ ಜೀವ ಬೆದರಿಕೆ ಬಂದಿದೆ. ಹೀಗಾಗಿ ತನಗೂ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ದೆಹಲಿ ಪೊಲೀಸರು ಎಫ್ಐರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಕೇರಳದವರು ಸತ್ತರೇ 25 ಲಕ್ಷ, ಕನ್ನಡಿಗರು ಮೃತಪಟ್ಟರೆ 10 ಲಕ್ಷ ರೂ ತಾರತ ...
ಗಂಭೀರ್ ಟಾರ್ಗೆಟ್
ಸದ್ಯ ಟೀಂ ಇಂಡಿಯಾ ಕೋಚ್ ಆಗಿರುವ ಗೌತಮ್ ಗಂಭೀರ್ ಬಿಜೆಪಿ ಪಕ್ಷ ಸೇರುವ ಮೊದಲೇ ಹಿಂದುತ್ವ ಕುರಿತು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದರು. ಬಳಿಕ ಬಿಜೆಪಿ ಪಕ್ಷ ಸೇರಿ ಸಂಸದನಾಗಿ 5 ವರ್ಷ ಕಾಲ ಕೆಲಸ ಮಾಡಿದ್ದಾರೆ. ಉಗ್ರರ ದಾಳಿಗೆ ಗುರಿಯಾದ ಹಲವು ಕುಟುಂಬಗಳ ಮಕ್ಕಳ ಶಿಕ್ಷಣ ಜವಾಬ್ದಾರಿಯನ್ನು ಗೌತಮ್ ಗಂಭೀರ್ ಹೊತ್ತುಕೊಂಡಿದ್ದಾರೆ. ಇನ್ನು ಹಿಂದುಗಳ ಮೇಲೆ ನಡೆದ ಹಲವು ದಾಳಿಯನ್ನು, ಗಡಿಯಲ್ಲಿ ಪಾಕಿಸ್ತಾನದ ಉಗ್ರರ ಉಪಟಳ ಕುರಿತು ಗೌತಮ್ ಗಂಭೀರ್ ಹಲವು ಭಾರಿ ಮಾತನಾಡಿದ್ದಾರೆ. ಈ ಕಾರಣಗಳಿಂದ ಗೌತಮ್ ಗಂಭೀರ್ ವಿರುದ್ದ ಜೀವ ಬೆದರಿಕೆ ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪಹಲ್ಗಾಮ್ ಉಗ್ರ ದಾಳಿ ಬೆನ್ನಲ್ಲೇ ಹೆಚ್ಚಾದ ಆತಂಕ
ಹಿಂದೂಗಳನ್ನು ಗುರಿಯಾಸಿ ಪಹಲ್ಗಾಮ್ ಉಗ್ರ ದಾಳಿ ನಡೆದಿದೆ. ಈ ಉಗ್ರ ದಾಳಿ ಬೆನ್ನಲ್ಲೇ ದೇಶದೆಲ್ಲೆಡೆ ಆತಂಕ ಹೆಚ್ಚಾಗಿದೆ. ಹಲವು ಸ್ವರೂಪದಲ್ಲಿ ಉಗ್ರರು ಭಾರತದೆಲ್ಲೆಡೆ ಸೇರಿಕೊಂಡಿರುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬಂದಿದೆ. ಪಹಲ್ಗಾಮ್ ಪ್ರವಾಸಿ ತಾಣದಲ್ಲಿ ಸೇರಿದ್ದ ಪ್ರವಾಸಿಗರ ಮೇಲೆ ನಡೆದ ಪೂರ್ವನಿಯೋಜಿತ ದಾಳಿ ಇದಾಗಿದೆ. ಹಿಂದೂಗಳ ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿದೆ. ಪ್ರತಿಯೊಬ್ಬರನ್ನು ಪ್ರಶ್ನಿಸಿ ದಾಳಿ ನಡೆಸಲಾಗಿದೆ. ಹಿಂದೂ ಎಂದರೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಧರ್ಮ ಹೇಳದವರ ಸುನ್ನತ್ ಪರೀಕ್ಷಿಸಿ ದಾಳಿ ನಡೆಸಲಾಗಿದೆ. ಈ ದಾಳಿಯನ್ನು ದೇಶವೇ ಖಂಡಿಸಿದೆ. ದಾಳಿ ಖಂಡಿಸಿ ಕರ್ನಾಟಕ ಸೇರಿದಂತೆ ಹಲವೆಡೆ ಮೆರವಣಿ ನಡೆಯುತ್ತಿದೆ. ಪ್ರತೀಕಾರ ಕೂಗು ಹೆಚ್ಚಾಗುತ್ತಿದೆ.
ಓರ್ವ ಮುಸ್ಲಿಂ ಆಗಿ ನಾಚಿಕೆಯಾಗುತ್ತಿದೆ, ಪಹಲ್ಗಾಮ್ ದಾಳಿ ಖಂಡಿಸಿ ಭಾವು ...
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.