ಮೊದಲ ಬಾರಿ ಪುರುಷರ ಟೆಸ್ಟ್‌ ಪಂದ್ಯಕ್ಕೆ ಮಹಿಳಾ ಅಂಪೈರ್‌!

By Kannadaprabha NewsFirst Published Jan 7, 2021, 8:30 AM IST
Highlights

ಭಾರತ-ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಪುರುಷರ ಟೆಸ್ಟ್‌ ಪಂದ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊದಲ ಮಹಿಳಾ ಅಂಪೈರ್‌ ಕಾರ್ಯ ನಿರ್ವಹಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಸಿಡ್ನಿ(ಜ.07): ಆಸ್ಪ್ರೇಲಿಯಾದ ಕ್ಲೇರ್‌ ಪೊಲೊಸಾಕ್‌ ಪುರುಷರ ಟೆಸ್ಟ್‌ ಪಂದ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊದಲ ಮಹಿಳಾ ಅಂಪೈರ್‌ ಎನ್ನುವ ದಾಖಲೆ ಬರೆದಿದ್ದಾರೆ. 

ಗುರುವಾರದಿಂದ ಇಲ್ಲಿ ನಡೆಯುತ್ತಿರುವ ಭಾರತ-ಆಸ್ಪ್ರೇಲಿಯಾ ನಡುವಿನ 4ನೇ ಟೆಸ್ಟ್‌ ಪಂದ್ಯದಲ್ಲಿ ಕ್ಲೇರ್‌ 4ನೇ ಅಂಪೈರ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. 32 ವರ್ಷದ ಕ್ಲೇರ್‌ 2019ರಲ್ಲಿ ಪುರುಷರ ಏಕದಿನ ಪಂದ್ಯದಲ್ಲಿ ಕಾರ್ಯನಿರ್ವಹಿಸಿದ ಮೊದಲ ಮಹಿಳಾ ಅಂಪೈರ್‌ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. 

ಸಿಡ್ನಿ ಟೆಸ್ಟ್‌; ವಾರ್ನರ್ ಔಟ್‌, ಪಂದ್ಯಕ್ಕೆ ವರುಣನ ಅಡ್ಡಿ

Australia Claire Polosak will become the first female official to be involved in a men's Test after being named as the fourth umpire for the SCG Test! pic.twitter.com/zYQ9mF2EMG

— All India Radio Sports (@akashvanisports)

The list of accomplishments grows for Claire Polosak!

After becoming the first woman to officiate men's ODI, she today becomes the first woman to officiate a men's Test match. Congratulations Claire! 👏 pic.twitter.com/ON9mg7Fc60

— Cricket Australia (@CricketAus)

ನಮೀಬಿಯಾ ಹಾಗೂ ಒಮಾನ್‌ ನಡುವಿನ ಐಸಿಸಿ 2ನೇ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಅವರು ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಟೆಸ್ಟ್‌ ಕ್ರಿಕೆಟ್‌ನಲ್ಲಿ 4ನೇ ಅಂಪೈರ್ ಆಗಿ ಕಾರ್ಯ ನಿರ್ವಹಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

click me!