ಯುಎಸ್ಎ ತಂಡದ ಎಡಗೈ ಆಫ್ ಸ್ಪಿನ್ನರ್ ನಾಸ್ತೋಷ್ ಕೆಂಜಿಗೆ ಆಟಕ್ಕೆ ಕಾಫಿನಾಡು ಫುಲ್ ಫಿದಾ. ಪಾಕ್ ವಿರುದ್ಧ ಗೆದ್ದಿದ್ದು ಅಮೆರಿಕವಾದ್ರು ಸಂಭ್ರಮಿಸಿದ್ದು ಮಾತ್ರ ಭಾರತ. ನಾಸ್ತೋಷ್ ಕಿತ್ತ ಆ ಮೂರು ವಿಕೆಟ್ ಗೆ ಕಾಫಿನಾಡು ಫುಲ್ ಖುಷ್.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜೂ.08): ಭಾರತದ ಬದ್ಧ ವೈರಿ ಪಾಕಿಸ್ತಾನದ ವಿರುದ್ಧ ಯಾವ್ದೆ ಟೀಂ ಕ್ರಿಕೆಟ್ ಆಡಿದ್ರು ಅವರಿಗೆ ಭಾರತೀಯರ ಬೆಂಬಲ ಇದ್ದೇ ಇರುತ್ತೆ. ಅಂತದ್ರಲ್ಲಿ ಮೊನ್ನೆ ಟಿ20 ವಿಶ್ವಕಪ್ ನಲ್ಲಿ ಅದೇ ಪಾಕಿಸ್ತಾನಕ್ಕೆ ಕ್ರಿಕೆಟ್ ಶಿಶು ಅಮೆರಿಕ ಮಣ್ಣು ಮುಕ್ಕಿಸಿದ್ದು ಈಗ ಇತಿಹಾಸ. ಸಾಧನೆ. ಯುಎಸ್ಎ ತಂಡದ ಎಡಗೈ ಆಫ್ ಸ್ಪಿನ್ನರ್ ನಾಸ್ತೋಷ್ ಕೆಂಜಿಗೆ ಆಟಕ್ಕೆ ಕಾಫಿನಾಡು ಫುಲ್ ಫಿದಾ. ಪಾಕ್ ವಿರುದ್ಧ ಗೆದ್ದಿದ್ದು ಅಮೆರಿಕವಾದ್ರು ಸಂಭ್ರಮಿಸಿದ್ದು ಮಾತ್ರ ಭಾರತ. ನಾಸ್ತೋಷ್ ಕಿತ್ತ ಆ ಮೂರು ವಿಕೆಟ್ ಗೆ ಕಾಫಿನಾಡು ಫುಲ್ ಖುಷ್.
ಮಲೆನಾಡಿನ ಯುವಕ ಅಮೇರಿಕ ಟೀಂನಲ್ಲಿ
ಜೂನ್ 2 ರಿಂದ ಅಮೆರಿಕಾ ಹಾಗೂ ವೆಸ್ಟ್ ಇಂಡೀಸ್ ಸಾರಥ್ಯದಲ್ಲಿ ಟಿ20 ವಿಶ್ವಕಪ್ ಆರಂಭಗೊಂಡಿದೆ. ಮೊನ್ನೆ ತಾನೇ ಅಮೆರಿಕಾ-ಪಾಕಿಸ್ಥಾನದ ನಡುವೇ ಮ್ಯಾಚ್ ಕೂಡ ನಡೆದಿತ್ತು. ಆ ಮ್ಯಾಚಲ್ಲಿ ಟಿ20 ಮಾದರಿಯ ಬೆಸ್ಟ್ ಟೀಂ ಪಾಕಿಸ್ತಾನವನ್ನ ಕ್ರಿಕೆಟ್ ಶಿಶುಗಳಾದ ಅಮೆರಿಕಾ ಸೋಲಿಸುತ್ತೆ ಅಂತ ಯಾರೂ ಊಹಿಸರಲಿಲ್ಲ. 159 ರನ್ ಚೇಸ್ ಮಾಡಲಾಗದ ಪಾಕಿಸ್ತಾನ ಮ್ಯಾಚ್ ಟೈ ಮಾಡ್ಕೊಂಡು ಸೂಪರ್ ಓವರ್ ನಲ್ಲಿ ಅಮೆರಿಕಾದೆದುರು ಮಂಡಿಯೂರಿತ್ತು. ಆ ಮ್ಯಾಚ್‌ನಲ್ಲಿ ಕಾಫಿನಾಡು ಚಿಕ್ಕಮಗಳೂರು ಹುಡ್ಗನ ಸಾಧನೆ ಅಮೋಘ ವಾಗಿತ್ತು. ಅವನ ಆಟವನ್ನ ನೋಡಿ ಎಲ್ಲರೂ ಖುಷಿ ಪಟ್ಟಿದ್ದಾರೆ. ಆ ಪಂದ್ಯದಲ್ಲಿ ಫಸ್ಟ್ ಓವರ್ ಸ್ಪೀನ್ ಮಾಡಿದ ಹುಡ್ಗ ನಾಸ್ತೋಷ್ ಕೆಂಜಿಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದವನು. ಉದ್ಯೋಗದ ನಿಮಿತ್ತ ಅಮೆರಿಕಕ್ಕೆ ಹೋದ ನಾಸ್ತೋಷ್ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದು ಅಮೆರಿಕದ ಜೊತೆ ಭಾರತದ ಹೆಸರನ್ನೂ ಬೆಳೆಸುತ್ತಿದ್ದಾನೆ. ಭಾರತೀಯರ ಬದ್ಧ ವೈರಿಗಳಿಗೆ ಕ್ರೀಡಾಂಗಣದಲ್ಲಿ ಮಣ್ಣು ಮುಕ್ಕಿಸುತ್ತಿದ್ದಾನೆ ಎಂದು ಕಾಫಿನಾಡ ಕ್ರಿಕೆಟ್ ಪ್ರೇಮಿಗಳು ಪುಲ್ ಹ್ಯಾಪಿಯಾಗಿದ್ದಾರೆ. ಆತನ ಬೌಲಿಂಗ್-ಬ್ಯಾಟಿಂಗ್ ಎರಡಕ್ಕೂ ಕಾಫಿನಾಡಿಗರು ಫಿದಾ ಆಗಿದ್ದಾರೆ.
ಕೊಹ್ಲಿಯ 8 ಗಂಟೆಯ ಸಂಪಾದನೆ = ನೇಪಾಳ ಕ್ರಿಕೆಟರ ಒಂದು ತಿಂಗಳ ಸ್ಯಾಲರಿ..! ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
ವಿದ್ಯಾಭ್ಯಾಸದ ಜೊತೆ ಬ್ಯಾಟಿಂಗ್-ಬೌಲಿಂಗ್ ಬಗ್ಗೆ ಟ್ರೈನ್
ಇನ್ನು ನಾಸ್ತೋಷ್ ಕೆಂಜಿಗೆ ಹುಟ್ಟಿದ್ದು ಅಮೆರಿಕದಲ್ಲೆ. ಆದ್ರೆ, ಬೆಳೆದಿದ್ದು ಮಾತ್ರ ಈ ಪುಣ್ಯ ಭೂಮಿಯಲ್ಲಿ. ಬೆಂಗಳೂರು, ಚಿಕ್ಕಮಗಳೂರಿನಲ್ಲಿ ವಿದ್ಯಾಭ್ಯಾಸದ ಜೊತೆ ಕ್ರಿಕೆಟ್ ಕೋಚ್ ಪಡೆದಿದ್ದಾರೆ. 2022ರ ಕರೋನಾ ಅವಧಿಯಲ್ಲಿ ನಾಸ್ತೋಷ್ ಕೆಂಜಿಗೆ ಪ್ರಾಕ್ಟಿಸ್ ನಡೆದಿದ್ದೇ ಕಾಫಿನಾಡು ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ. ಇಲ್ಲಿರೋ ಕ್ರೀಡಾ ಪಟುಗಳ ಜೊತೆ ನಿತ್ಯ ಪ್ರಾಕ್ಟಿಸ್ ಮಾಡ್ತಿದ್ರು. ಇಲ್ಲಿರೋರಿಗೆ ಹೇಗೆ ಕ್ರಿಕೆಟ್ ಆಡಬೇಕು. ಬ್ಯಾಟಿಂಗ್-ಬೌಲಿಂಗ್ ಬಗ್ಗೆಯೂ ಟ್ರೈನ್ ಮಾಡಿದ್ರು. ಯು.ಎಸ್.ಎ. ಟೀಂನಲ್ಲಿ ಟಿ20ಯಲ್ಲಿ ಆಡಿರೋದನ್ನ ನೋಡಿ ನಮ್ಮ ಜೊತೆಯಲ್ಲಿದ್ದೋರು ಇಂದು ಹೊರದೇಶದಲ್ಲಿ ಆಡಿ ಅದರಲ್ಲೂ ಪಾಕಿಗಳ ಸೋಲಿಗೆ ಕಾರಣರಾದ್ರೂ ಅಂತಾ ಸಂತಸಪಟ್ಟಿದ್ದಾರೆ. ಮುಂದಿನ ವರ್ಷ ಐಪಿಎಲ್ ನಲ್ಲಿ ಆಡೋಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಒಟ್ಟಾರೆ, ಮೊನ್ನೆಯಿಂದ ಅಂತು ಸೋಶಿಯಲ್ ಮೀಡಿಯಾದಲ್ಲಿ ನಾಸ್ತೋಷ್ ಸಾಧನೆ ಭಾರೀ ವೈರಲ್ ಆಗ್ತಿದೆ. ಅವರು ಆಟವಾಡಿದ ವಿಡಿಯೋ ಕೂಡ ವೈರಲ್ ಆಗ್ತಿದೆ. ಪಾಕಿಸ್ಥಾನದ ವಿರುದ್ದ ಭರ್ಜರಿ ಆಟದ ಪ್ರದರ್ಶನದ ಜೊತೆ ಬೌಲಿಂಗ್ ನಲ್ಲಿ ಮೂರು ವಿಕೆಟ್ ಕಿತ್ತದ್ದನ್ನ ಕಂಡು ಖುಷಿಪಟ್ಟಿದ್ದಾರೆ. ಪಾಕಿಗಳ ಆ ಸೋಲಿಗೆ ಕಾಫಿನಾಡ ಪ್ರತಿಭೆಯೇ ಕಾರಣ ಅಂತ ಕ್ರಿಕೆಟ್ ಪ್ರೇಮಿಗಳು ಭೇಷ್ ಬೇಟಾ ಅಂದಿದ್ದಾರೆ.