ಟಿ20 ವಿಶ್ವಕಪ್ ಗೆದ್ದು ಮುಂಬೈ ರಸ್ತೆಯಲ್ಲಿ ಬಿಂದಾಸ್ ಡ್ರೈವ್ ಮಾಡಿದ ರೋಹಿತ್ ಶರ್ಮಾ..! ಗಮನ ಸೆಳೆದ ಹಿಟ್‌ಮ್ಯಾನ್ ಕಾರ್ ನಂಬರ್‌

By Naveen KodaseFirst Published Jul 28, 2024, 1:01 PM IST
Highlights

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ತಮ್ಮ ರೇಂಜ್ ರೋವರ್ ಕಾರ್ ನಂಬರ್ ಇದೀಗ ಸಾಕಷ್ಟು ಗಮನ ಸೆಳೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಮುಂಬೈ: ದಶಕದ ಬಳಿಕ ಭಾರತಕ್ಕೆ ಐಸಿಸಿ ಟ್ರೋಪಿ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾ, ಸದ್ಯ ಬಿಡುವಿನ ಸಮಯವನ್ನು ತಮ್ಮ ಕುಟುಂಬದ ಜತೆಗೆ ಬಿಂದಾಸ್ ಆಗಿಯೇ ಎಂಜಾಯ್ ಮಾಡುತ್ತಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಟಿ20 ಮಾದರಿಗೆ ಗುಡ್‌ ಬೈ ಹೇಳಿರುವ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಇದೀಗ ತಮ್ಮ ಐಶಾರಾಮಿ ರೇಂಜ್ ರೋವರ್ ಕಾರ್‌ನಲ್ಲಿ ಮುಂಬೈನ ರಸ್ತೆಗಳಲ್ಲಿ ಬಿಂದಾಸ್ ಆಗಿಯೇ ಡ್ರೈವ್ ಮಾಡಿ ಗಮನ ಸೆಳೆದಿದ್ದಾರೆ. ರೋಹಿತ್ ಶರ್ಮಾಗೆ ಪತ್ನಿ ರಿತಿಕಾ ಸಜ್ದೇ ಮತ್ತು ಮಗಳು ಸಮೈರಾ ಸಾಥ್ ನೀಡಿದ್ದಾರೆ.

ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಸದ್ಯ ಭಾರತ ಕ್ರಿಕೆಟ್ ತಂಡವು ಸೀಮಿತ ಓವರ್‌ಗಳ ಸರಣಿಯನ್ನಾಡಲು ಲಂಕಾ ಪ್ರವಾಸ ಕೈಗೊಂಡಿದ್ದು, ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿಯನ್ನಾಡುತ್ತಿದೆ. ಇದಾದ ಬಳಿಕ ನಡೆಯಲಿರುವ ಲಂಕಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ರೋಹಿತ್ ಶರ್ಮಾ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

Latest Videos

ಮೊದಲ ಟಿ20: ಭಾರತದ ಅಬ್ಬರಕ್ಕೆ ಮಣಿದ ಲಂಕಾ

ತಮ್ಮ ಹೋಮ್‌ ಟೌನ್ ಎನಿಸಿಕೊಂಡಿರುವ ಮುಂಬೈನಲ್ಲಿ ರೋಹಿತ್ ಶರ್ಮಾಗೆ ಅಪಾರ ಅಭಿಮಾನಿಗಳಿದ್ದಾರೆ ಎನ್ನುವುದನ್ನು ನಿಮಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇನ್ನು ಇದೆಲ್ಲದರ ನಡುವೆ ರೋಹಿತ್ ಶರ್ಮಾ ಕಾರಿನ ನಂಬರ್ ಇದೀಗ ಅಭಿಮಾನಿಗಳ ಹುಬ್ಬೇರಿಸುವಂತೆ ಮಾಡಿದೆ. ರೋಹಿತ್ ಶರ್ಮಾ ಅವರ ರೇಂಜ್‌ ರೋವರ್ ಕಾಲಿನ ನಂಬರ್ 00264. ಅರೇ ಇದೇನಿದು ಅಂತೀರಾ?

ನೀವು ರೋಹಿತ್ ಶರ್ಮಾ ಅಪ್ಪಟ ಅಭಿಮಾನಿಗಳಾಗಿದ್ದರೇ ಖಂಡಿತವಾಗಿಯೂ ಅರ್ಥವಾಗಿರುತ್ತೆ. ಹೌದು, ಇದು ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಬಾರಿಸಿದ ಗರಿಷ್ಠ ವೈಯುಕ್ತಿಕ ಸ್ಕೋರ್. ಏಕದಿನ ಕ್ರಿಕೆಟ್‌ ಇತಿಹಾಸದಲ್ಲೇ ಅತಿಹೆಚ್ಚು ದ್ವಿಶತಕ(03) ಹಾಗೂ ಗರಿಷ್ಠ ವೈಯುಕ್ತಿಕ ಸ್ಕೋರ್(264) ಬಾರಿಸಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿ ಅಚ್ಚಳಿಯದೇ ಉಳಿದಿದೆ.

ಐಪಿಎಲ್ 2025 ಮೆಗಾ ಹರಾಜಿನಲ್ಲಿ ಈ ಬದಲಾವಣೆ ಗ್ಯಾರಂಟಿ..! ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಹೀಗಿದೆ ನೋಡಿ ಹಿಟ್‌ಮ್ಯಾನ್ ಬಿಂದಾಸ್ ಡ್ರೈವ್:

Rohit Sharma again forgot how many bags😂😂

Kitane bag the Rohit bhai 7 ya 8🤣 pic.twitter.com/HpnLOHFCEn

— 𝐑𝐮𝐬𝐡𝐢𝐢𝐢⁴⁵ (@rushiii_12)

Talk about aura even in driving Range Rover 🥵 pic.twitter.com/AyFsLSSilT

— Vishu45 (@Ro_45stan)

ಇನ್ನು ಕ್ರಿಕೆಟ್ ವಿಚಾರಕ್ಕೆ ಬರುವುದಾದರೇ, ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆಯೇ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಮಾದರಿಗೆ ವಿದಾಯ ಘೋಷಿಸಿದ್ದು, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರೆಯುವುದಾಗಿ ಸ್ಪಷ್ಟಪಡಿಸಿದ್ದಾರೆ. ನಾನು ಸದ್ಯಕ್ಕೆ ಏಕದಿನ ಹಾಗೂ ಟೆಸ್ಟ್‌ನಿಂದ ನಿವೃತ್ತಿ ಪಡೆಯುವ ಆಲೋಚನೆ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

click me!