ಮೊದಲ ಟಿ20: ಭಾರತದ ಅಬ್ಬರಕ್ಕೆ ಮಣಿದ ಲಂಕಾ

Published : Jul 28, 2024, 10:11 AM ISTUpdated : Jul 29, 2024, 12:09 PM IST
ಮೊದಲ ಟಿ20: ಭಾರತದ ಅಬ್ಬರಕ್ಕೆ ಮಣಿದ ಲಂಕಾ

ಸಾರಾಂಶ

ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ.ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ

ಪಲ್ಲೆಕೆಲೆ: ಸೂರ್ಯಕುಮಾರ್‌ ನಾಯಕತ್ವ, ಗೌತಮ್‌ ಗಂಭೀರ್‌ ಕೋಚ್‌ ಹುದ್ದೆಯ ಮೊದಲ ಅಗ್ನಿಪರೀಕ್ಷೆಯಲ್ಲಿ ಗೆದ್ದಿದ್ದಾರೆ. ಶನಿವಾರ ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 43 ರನ್‌ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ತಂಡ 1-0 ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟ್‌ ಮಾಡಿದ ಭಾರತ 7 ವಿಕೆಟ್‌ಗೆ 213 ರನ್‌ ಕಲೆಹಾಕಿತು. ಆರಂಭಿಕರಾದ ಯಶಸ್ವಿ ಜೈಸ್ವಾಲ್‌ 21 ಎಸೆತಗಳಲ್ಲಿ 40, ಶುಭ್‌ಮನ್‌ ಗಿಲ್‌ 16 ಎಸೆತಗಳಲ್ಲಿ 34 ರನ್‌ ಸಿಡಿಸಿ ಭರ್ಜರಿ ಮುನ್ನಡೆ ಒದಗಿಸಿದರು. ಆ ಬಳಿಕ ಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ನಾಯಕ ಸೂರ್ಯಕುಮಾರ್‌ 26 ಎಸೆತಗಳಲ್ಲಿ 58 ರನ್‌ ಚಚ್ಚಿದರು. ಆರಂಭದಲ್ಲಿ ರನ್‌ ಗಳಿಸಲು ಪರದಾಡಿದರೂ ಬಳಿಕ ಆರ್ಭಟಿಸಿದ ರಿಷಭ್‌ ಪಂತ್‌ 33 ಎಸೆತಗಳಲ್ಲಿ 49 ರನ್‌ ಸಿಡಿಸಿ ತಂಡದ ಮೊತ್ತವನ್ನು 210ರ ಗಡಿ ದಾಟಿಸಿದರು.

ಐಪಿಎಲ್ 2025 ಮೆಗಾ ಹರಾಜಿನಲ್ಲಿ ಈ ಬದಲಾವಣೆ ಗ್ಯಾರಂಟಿ..! ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಬೃಹತ್‌ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ, ಉತ್ತಮ ಆರಂಭದ ಹೊರತಾಗಿಯೂ 19.2 ಓವರ್‌ಗಳಲ್ಲಿ 170 ರನ್‌ಗೆ ಸರ್ವಪತನ ಕಂಡಿತು. ಆರಂಭಿಕರಾದ ಪಥುಂ ನಿಸ್ಸಾಂಕ ಹಾಗೂ ಕುಸಾಲ್‌ ಮೆಂಡಿಸ್(45 ರನ್‌) 8.4 ಓವರ್‌ಗಳಲ್ಲಿ 84 ರನ್‌ ಜೊತೆಯಾಟವಾಡಿದರು. 2ನೇ ವಿಕೆಟ್‌ಗೆ ಪೆರೆರಾ ಜೊತೆಗೂಡಿ 56 ರನ್‌ ಸೇರಿಸಿದ ನಿಸ್ಸಾಂಕ, ತಂಡಕ್ಕೆ ಗೆಲುವಿನ ಕೊಡುಗೆ ನೀಡುವ ವಿಶ್ವಾಸದಲ್ಲಿದ್ದರು. ಆದರೆ 48 ಎಸೆತಗಳಲ್ಲಿ 79 ರನ್‌ ಸಿಡಿಸಿ ನಿಸ್ಸಾಂಕ ಔಟಾದ ಬಳಿಕ ತಂಡ ಸೋಲಿನತ್ತ ಮುಖಮಾಡಿತು. 140ಕ್ಕೆ 1 ವಿಕೆಟ್‌ ನಷ್ಟಕ್ಕೊಳಗಾಗಿದ್ದ ತಂಡ ಕೊನೆ 30 ರನ್‌ಗಳಿಗೆ 9 ವಿಕೆಟ್‌ ಕಳೆದುಕೊಂಡಿತು. ರಿಯಾನ್‌ ಪರಾಗ್‌ 5 ರನ್‌ಗೆ 3 ವಿಕೆಟ್‌ ಕಿತ್ತರೆ, ಅರ್ಶ್‌ದೀಪ್‌ ಸಿಂಗ್‌ ಹಾಗೂ ಅಕ್ಷರ್‌ ಪಟೇಲ್‌ ತಲಾ 2 ವಿಕೆಟ್‌ ಪಡೆದರು.

ಸ್ಕೋರ್‌: ಭಾರತ 20 ಓವರಲ್ಲಿ 213/7 (ಸೂರ್ಯ 59, ರಿಷಭ್‌ 49, ಜೈಸ್ವಾಲ್‌ 40, ಗಿಲ್‌ 34, ಪತಿರನ 4-40), ಶ್ರೀಲಂಕಾ 19.2 ಓವರ್‌ಗಳಲ್ಲಿ 170/10 (ನಿಸ್ಸಾಂಕ 79, ಮೆಂಡಿಸ್‌ 45, ಪರಾಗ್‌ 3-5) ಪಂದ್ಯಶ್ರೇಷ್ಠ:
 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಜಯ್‌ ಹಜಾರೆ ಟ್ರೋಫಿ: ಒಂದೂವರೆ ದಶಕದ ಬಳಿಕ ಡೆಲ್ಲಿ ಪರ ವಿರಾಟ್ ಕೊಹ್ಲಿ ಮೈದಾನಕ್ಕೆ! ಬೆಂಗಳೂರಲ್ಲಿ ನಡೆಯುತ್ತೆ ಮ್ಯಾಚ್‌
ಬೆಂಗಳೂರಲ್ಲಿ ಐಪಿಎಲ್‌ ನಡೆಸಲು ಸಂಪುಟ ಅಸ್ತು