ಪಾಕ್‌ ವೇಗಿ ಹ್ಯಾರಿಸ್ ರೌಫ್‌ಗೆ ಎಂ ಎಸ್ ಧೋನಿ ಸಿಎಸ್‌ಕೆ ಜೆರ್ಸಿ ಉಡುಗೊರೆ..!

Contributor Asianet   | Asianet News
Published : Jan 08, 2022, 05:23 PM ISTUpdated : Jan 08, 2022, 05:28 PM IST
ಪಾಕ್‌ ವೇಗಿ ಹ್ಯಾರಿಸ್ ರೌಫ್‌ಗೆ ಎಂ ಎಸ್ ಧೋನಿ ಸಿಎಸ್‌ಕೆ ಜೆರ್ಸಿ ಉಡುಗೊರೆ..!

ಸಾರಾಂಶ

* ಪಾಕಿಸ್ತಾನದ ವೇಗಿಯ ಬಹುದಿನದ ಕನಸು ನನಸು * ಮಹೇಂದ್ರ ಸಿಂಗ್ ಧೋನಿ ಸಹಿ ಮಾಡಿದ ಜರ್ಸಿ ಪಡೆದು ಖುಷಿ ಹಂಚಿಕೊಂಡ ಹ್ಯಾರಿಸ್ ರೌಫ್ * ಸದ್ಯ ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಮೆಲ್ಬೊರ್ನ್ ಸ್ಟಾರ್ಸ್ ತಂಡದ ಪರ ಆಡುತ್ತಿರುವ ಪಾಕ್ ವೇಗಿ

ಲಾಹೋರ್(ಜ.08)‌: ಭಾರತ ಕ್ರಿಕೆಟ್ ತಂಡ (Indian Cricket Team) ಕಂಡಂತಹ ಅತ್ಯಂತ ಯಶಸ್ವಿ ನಾಯಕ, ಕ್ಯಾಪ್ಟನ್‌ ಕೂಲ್‌ ಎಂ.ಎಸ್‌. ಧೋನಿ(MS Dhoni) ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳು ಇದ್ದಾರೆ. ಇನ್ನು ನೆರೆಯ ಪಾಕಿಸ್ತಾನದಲ್ಲೂ ಧೋನಿಗೆ ಸಾಕಷ್ಟು ಫ್ಯಾನ್ಸ್‌ ಇದ್ದಾರೆ. ಕಲೆ, ಕ್ರೀಡೆಗೆ ಜಾತಿ-ಧರ್ಮ ಹಾಗೂ ಗಡಿಯ ಹಂಗಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇದೀಗ ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾರಕ ವೇಗಿ ಹ್ಯಾರಿಸ್ ರೌಫ್‌ ಅವರ ಬಹುದಿನದ ಕನಸೊಂದು ನನಸಾಗಿದೆ. ತಮ್ಮ ಹಸ್ತಾಕ್ಷರವುಳ್ಳ ಜೆರ್ಸಿ ನೀಡಿದ್ದಕ್ಕೆ ಭಾರತದ ಮಾಜಿ ಹಾಗೂ ಐಪಿಎಲ್‌ನ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ನಾಯಕ ಎಂ.ಎಸ್‌.ಧೋನಿಗೆ ಪಾಕಿಸ್ತಾನದ ವೇಗದ ಬೌಲರ್‌ ಹ್ಯಾರಿಸ್‌ ರೌಫ್‌(Haris Rauf) ಧನ್ಯವಾದ ತಿಳಿಸಿದ್ದಾರೆ. 

ಶುಕ್ರವಾರ ಧೋನಿಯ ಚೆನ್ನೈ ತಂಡದ ಜೆರ್ಸಿಯ ಫೋಟೋ ಟ್ವೀಟ್‌ ಮಾಡಿದ ಹ್ಯಾರಿಸ್ ರೌಫ್‌, ‘ದಿಗ್ಗಜ ನಾಯಕ ಧೋನಿ ತಮ್ಮ ಹಸ್ತಾಕ್ಷರವಿರುವ ಜೆರ್ಸಿಯನ್ನು ನನಗೆ ಉಡುಗೊರೆ ನೀಡಿದ್ದಾರೆ. ‘ನಂ.7’ ಈಗಲೂ ವಿಶೇಷ ಕಾರ‍್ಯಗಳ ಮೂಲಕ ಜನರ ಹೃದಯ ಗೆಲ್ಲುತ್ತಿದೆ’ ಎಂದು ಬರೆದಿದ್ದಾರೆ.

ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್‌ಗೆ ಧೋನಿ ಎದುರು ಆಡುವ ಅವಕಾಶ ಸಿಕ್ಕಿರಲಿಲ್ಲ. ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್(ICC T20 World Cup) ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ರೌಫ್‌ ಮಾರಕ ದಾಳಿ ನಡೆಸೆ ಗಮನ ಸೆಳೆದಿದ್ದರು. ಆ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಟೀಂ ಇಂಡಿಯಾ(Team India) 10 ವಿಕೆಟ್‌ಗಳ ಸೋಲು ಕಂಡು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ವಿಶ್ವಕಪ್ ಇತಿಹಾಸದಲ್ಲಿ ಮೊದಲ ಭಾರಿಗೆ ಟೀಂ ಇಂಡಿಯಾ ನೆರೆಯ ಪಾಕಿಸ್ತಾನ ಎದುರು ಮುಗ್ಗರಿಸಿತ್ತು.

ಮಹೇಂದ್ರ ಸಿಂಗ್ ಧೋನಿ 2020ರ ಆಗಸ್ಟ್ 15ರಂದು ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರೂ ಸಹಾ, ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಮುಂಬರುವ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯು ತಮ್ಮ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು 12 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿದೆ.

Rahul Dravid on Rishabh Pant: ರಿಷಭ್‌ ಪಂತ್‌ಗೆ ಕೋಚ್‌ ರಾಹುಲ್ ದ್ರಾವಿಡ್‌ ಕ್ಲಾಸ್‌..!

ಇನ್ನೊಂದೆಡೆ ಹ್ಯಾರಿಸ್ ರೌಫ್ ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್‌ಬ್ಯಾಶ್ ಲೀಗ್ (Big Bash League) ಟೂರ್ನಿಯಲ್ಲಿ ಮೆಲ್ಬೊರ್ನ್ ಸ್ಟಾರ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಮೆಲ್ಬೊರ್ನ್‌ ಸ್ಟಾರ್ಸ್‌ ತಂಡದ ಪರ 2 ಪಂದ್ಯಗಳನ್ನಾಡಿ ಮೂರು ವಿಕೆಟ್ ಪಡೆದಿದ್ದಾರೆ. ಸದ್ಯ ಮೆಲ್ಬೊರ್ನ್ ಸ್ಟಾರ್ಸ್‌ ತಂಡವು 8 ಪಂದ್ಯಗಳನ್ನಾಡಿ ಕೇವಲ 3 ಗೆಲುವಿನೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಕಡೆಯ ಸ್ಥಾನದಲ್ಲಿದೆ.

ವಿಶ್ವಕಪ್‌ ತಂಡದಿಂದ ಕೊಕ್‌: ಪೂನಂ ಭಾರೀ ಅಸಮಾಧಾನ

ನವದೆಹಲಿ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ ಭಾರತ ತಂಡದಲ್ಲಿ ಸ್ಥಾನ ಸಿಗದಿದ್ದಕ್ಕೆ ತಾರಾ ಬ್ಯಾಟರ್‌ ಪೂನಂ ರಾವತ್‌ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೇಗಿ ಶಿಖಾ ಪಾಂಡೆ ಕೂಡಾ ಬೇಸರದ ಪ್ರತಿಕ್ರಿಯೆ ನೀಡಿದ್ದಾರೆ. 

ಗುರುವಾರ ಟ್ವೀಟ್‌ ಮಾಡಿದ ಪೂನಂ, ‘ಸ್ಥಿರ ಪ್ರದರ್ಶನ ನೀಡುತ್ತಿದ್ದರೂ ಅನುಭವಿ ಹಾಗೂ ಯಶಸ್ವಿ ಬ್ಯಾಟರ್‌ ಆಗಿರುವ ನನ್ನನ್ನು ತಂಡದಿಂದ ಕೈಬಿಡಲಾಗಿದೆ. 2021ರಲ್ಲಿ 6 ಪಂದ್ಯಗಳಲ್ಲಿ 73.75 ಸರಾಸರಿಯಲ್ಲಿ 295 ರನ್‌ ಗಳಿಸಿದ್ದೇನೆ. ಉತ್ತಮ ಪ್ರದರ್ಶನದ ಹೊರತಾಗಿಯೂ ಸತತವಾಗಿ ತಂಡದಿಂದ ಹೊರಗುಳಿಯುತ್ತಿರುವುದರಿಂದ ಹತಾಶೆಗೊಂಡಿದ್ದೇನೆ’ ಎಂದಿದ್ದಾರೆ. ಇನ್ನು ಶಿಖಾ, ಭರವಸೆ ಕಳೆದುಕೊಳ್ಳುವುದಿಲ್ಲ. ಇನ್ನಷ್ಟು ಪ್ರಯತ್ನಿಸುತ್ತೇನೆ’ ಎಂದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಒಂದು ತಂಡ ಬಿಟ್ಟು ಆರ್‌ಸಿಬಿ, ಚೆನ್ನೈ ಸೇರಿ ಐಪಿಎಲ್‌ ತಂಡಗಳ ಬ್ರ್ಯಾಂಡ್ ಮೌಲ್ಯ ಭಾರೀ ಕುಸಿತ!
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!