ಆರ್‌ಸಿಬಿ ಖರೀದಿ ಗಾಸಿಪ್ ಬೆನ್ನಲ್ಲೇ ಮಹತ್ವದ ಸುಳಿವು ಕೊಟ್ಟ ಸಿಇಒ ಆದಾರ್ ಪೂನಾವಾಲ

Published : Oct 02, 2025, 04:34 PM IST
RCB adar Poonawalla

ಸಾರಾಂಶ

ಆರ್‌ಸಿಬಿ ಖರೀದಿ ಗಾಸಿಪ್ ಬೆನ್ನಲ್ಲೇ ಮಹತ್ವದ ಸುಳಿವು ಕೊಟ್ಟ ಸಿಇಒ ಆಧಾರ್ ಪೂನಾವಾಲ, ಸೀರಮ್ ಸಂಸ್ಥೆಯ ಸಿಇಓ ಆಧಾರ್ ಪೂನಾವಾಲ ಆರ್‌ಸಿಬಿ ಫ್ರಾಂಚೈಸಿ ಖರೀದಿಸುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದ್ದಂತೆ ಮಹತ್ವದ ಸೂಚನೆಯೊಂದನ್ನು ನೀಡಿದ್ದಾರೆ.

ಬೆಂಗಳೂರು (ಅ.02) ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ವರ್ಷ ಟ್ರೋಫಿ ಗೆದ್ದು ಸಂಭ್ರಮಿಸಿದೆ. ಆರ್‌‌ಸಿಬಿ ಗೆದ್ದಿರುವುದು ಒಂದು ಟ್ರೋಫಿ, ಆದರೆ ಗೆದ್ದ ಅಭಿಮಾನಿಗಳ ಸಂಖ್ಯೆಗೆ ಲೆಕ್ಕವಿಲ್ಲ. ಹೀಗಾಗಿಯೇ ಉಳಿದೆಲ್ಲಾ ತಂಡಗಳಿಗಿಂತ ಆರ್‌ಸಿಬಿ ವಾಲ್ಯೂ ಅಧಿಕ. ಕಳೆದ ಟ್ರೋಫಿ ಸಂಭ್ರಮದಲ್ಲಿ ನಡೆದ ಕಾಲ್ತುಳಿತ ಸೇರಿದಂತೆ ಹಲವು ಘಟನೆಗಳಿಂದ ಆರ್‌‌ಸಿಬಿ ತಂಡ ಮಾರಾಟ ಮಾಡಲು ಯುಬಿ ಗ್ರೂಪ್ ಮುಂದಾಗಿದೆ. ಆರ್‌ಸಿಬಿ ಫ್ರಾಂಚೈಸಿಯನ್ನು ಸೀರಮ್ ಸಂಸ್ಥೆಯ ಸಿಇಒ ಆಧಾರ್ ಪೂನಾವಾಲ ಖರೀದಿಸುತ್ತಿದ್ದಾರೆ ಅನ್ನೋ ಸುದ್ದಿಗಳು ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಆಧಾರ್ ಪೂನಾವಾಲ ಮಹತ್ವದ ಸುಳಿವು ನೀಡಿದ್ದಾರೆ.

ಟ್ವೀಟ್ ಮೂಲಕ ಆಧಾರ್ ಪೂನಾವಾಲ ಸುಳಿವು

ಆರ್‌‌ಸಿಬಿ ತಂಡ ಖರೀದಿಯ ಮಾತುಕತೆಗಳು ನಡೆಯುತ್ತಿದೆ. ಮೌಲ್ಯ, ಮೊತ್ತದ ವಿಚಾರದಲ್ಲಿ ಚೌಕಾಸಿ ನಡೆಯುತ್ತಿದೆ ಅನ್ನೋ ಸುದ್ದಿಗಳು ಹರಿದಾಡುತ್ತಿತ್ತು. ಇತ್ತ ಆಧಾರ್ ಪೂನಾವಾಲ ಆರ್‌ಸಿಬಿ ತಂಡ ಖರೀದಿ ಬಹುತೇಕ ನಿಶ್ಚಿತ ಅನ್ನೋ ಮಾತುಗಳು ಕೇಳಿಬಂದಿತ್ತು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಆಧಾರ್ ಪೂನಾವಾಲ ಟ್ವೀಟ್ ಮೂಲಕ ಸುಳಿವು ನೀಡಿದ್ದಾರೆ. ಸರಿಯಾದ ಮೌಲ್ಯಮಾಪನ, ಆರ್‌ಸಿಬಿ ಅತ್ಯುತ್ತಮ ತಂಡ ಎಂದು ಪೂನಾವಾಲ ಹೇಳಿದ್ದಾರೆ.

ಆಧಾರ್ ಪೂನಾವಾಲ ಆರ್‌ಸಿಬಿ ಕುರಿತು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿ ಎರಡು ಪ್ರಮುಖ ವಿಷಗಳ ಕುರಿತು ಹೇಳಿದ್ದಾರೆ. ಒಂದು ಆರ್‌ಸಿಬಿ ಮೌಲ್ಯ, ಮತ್ತೊಂದು ಉತ್ತಮ ತಂಡ. ಫ್ರಾಂಚೈಸಿ ಖರೀದಿಸುವಾಗ ಈ ಎರಡು ಅಂಶಗಳು ಅತ್ಯಂತ ಪ್ರಮುಖ. ಕಾರಣ ಫ್ರಾಂಚೈಸಿ ಖರೀದಿ ವೇಳೆ ತಂಡದ ಮೌಲ್ಯ ಹಾಗೂ ತಂಡ ಉತ್ತಮ ತಂಡವೇ ಅನ್ನೋ ಇತಿಹಾಸವೂ ಅಗತ್ಯ. ಈ ಎರಡು ವಿಚಾರಗಳನ್ನು ಪೂನಾವಾಲ ಸೂಚ್ಯವಾಗಿ ಟ್ವೀಟ್ ಮೂಲಕ ಹೇಳಿದ್ದಾರೆ. ಹೀಗಾಗಿ ಹಲವರು ಆಧಾರ್ ಪೂನಾವಾಲ ಆರ್‌ಸಿಬಿ ತಂಡ ಖರೀದಿ ಬಹುತೇಕ ಪಕ್ಕ ಎಂದು ಅಭಿಪ್ರಾಯಪಟ್ಟಿದ್ದಾರೆ.

 

 

ಆರ್‌ಸಿಬಿ ವಾಲ್ಯೂ 23 ಸಾವಿರ ಕೋಟಿ ರೂಪಾಯಿ

ಐಪಿಎಲ್ ಟೂರ್ನಿಯಲ್ಲಿರುವ 10 ತಂಡಗಳ ಪೈಕಿ ಅತೀ ಹೆಚ್ಚು ವ್ಯಾಲ್ಯೂ ಹೊಂದಿರು ತಂಡದಲ್ಲಿ ಆರ್‌ಸಿಬಿ ಕೂಡ ಒಂದು. ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಐದೈದು ಟ್ರೋಫಿ ಗೆದ್ದಿದೆ. ಆರ್‌ಸಿಬಿ ಒಂದು ಟ್ರೋಫಿ ಗೆದ್ದಿದೆ. ಆದರೆ ವ್ಯಾಲ್ಯೂ ಇತರ ತಂಡಕ್ಕಿಂತ ಹೆಚ್ಚಿದೆ. ಮೂಲಗಳ ಪ್ರಕಾರ ಆರ್‌ಸಿಬಿ ತಂಡದ ವಾಲ್ಯೂ ಬರೋಬ್ಬರಿ 23,000 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.

15,000 ಕೋಟಿ ರೂಪಾಯಿ ಆಫರ್ ನೀಡಿದ್ರಾ ಪೂನಾವಾಲ?

ಆರ್‌ಸಿಬಿ ಖರೀದಿಸಲು 23,000 ರೂಪಾಯಿ ಕೋಟಿ ನೀಡಬೇಕು ಎಂದು ಆರ್‌ಸಿಬಿ ಪ್ರಾಂಚೈಸಿ ವಾಲ್ಯುಯೇಶನ್ ಮಾಡಿದೆ. ಇತ್ತ ವರದಿಗಳ ಪ್ರಕಾರ ಆಧಾರ್ ಪೂನಾವಾಲ 15,000 ಕೋಟಿ ರೂಪಾಯಿ ನೀಡಿ ಆರ್‌ಸಿಬಿ ತಂಡ ಖರೀದಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ-ಆಫ್ರಿಕಾ ಫೈನಲ್ ಫೈಟ್: ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?