ಕೆ ಎಲ್ ರಾಹುಲ್‌ಗೆ ‘ಬಾಕ್ಸಿಂಗ್ ಡೇ ಟೆಸ್ಟ್’ ಅಂದ್ರೆ ತುಂಬಾ ಸ್ಪೆಷಲ್..!

By Naveen KodaseFirst Published Dec 26, 2023, 3:20 PM IST
Highlights

ಕೊನೆಗೂ ಆ ಬಿಗ್ ಮೂಮೆಂಟ್ ಬಂದೇ ಬಿಡ್ತು. ಭಾರತ ವರ್ಸಸ್ ದಕ್ಷಿಣ ಆಫ್ರಿಕಾ ಟೆಸ್ಟ್ ಸಮರ ಕಣ್ತುಂಬಿಕೊಳ್ಳುವ ಆ ಕ್ಷಣ ಸಮೀಪಿಸೇ ಬಿಡ್ತು. ಡಿಸೆಂಬರ್ 26 ಅಂದ್ರೆ ಇವತ್ತಿಂದ ಭಾರತ-ಆಫ್ರಿಕಾ ನಡುವೆ ಟೆಸ್ಟ್ ಸರಣಿ ಆರಂಭಗೊಂಡಿದೆ. ಬಾಕ್ಸಿಂಗ್ ಡೇ ಟೆಸ್ಟ್‌ಗೆ ಸೆಂಚುರಿಯನ್ ಅಂಗಳ ಸಜ್ಜಾಗಿದ್ದು, ಪಂದ್ಯವನ್ನ ಗೆಲ್ಲಲು ಉಭಯ ತಂಡಗಳು ಡಿಫರೆಂಟ್ ಸ್ಟ್ರಾಟಜಿ ರೂಪಿಸಿವೆ.

ಸೆಂಚೂರಿಯನ್(ಡಿ.26): ಇಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಬಾಕ್ಸಿಂಗ್ ಡೇ ಟೆಸ್ಟ್ ಆರಂಭಗೊಂಡಿದೆ. ಈ ಬಾಕ್ಸಿಂಗ್ ಡೇ ಟೆಸ್ಟ್‌ಗೂ  ಕೆ ಎಲ್ ರಾಹುಲ್‌ಗೂ ಸ್ಪೆಷಲ್ ಮೆಮೊರೀಸ್ ಇವೆ. ಆ ಸ್ಪೆಷಲ್ ಮೆಮೋರೀಸ್ ಕೇಳಿದ್ರೆ ಖಂಡಿತಾ ನೀವು ವಾವ್ಹ್ ಅನ್ನದೇ ಇರಲ್ಲ. ಅಷ್ಟಕ್ಕೂ ಏನದು ಅಂತೀರಾ..? 

ಸೆಂಚುರಿಯನ್ ಡೈರಿನಲ್ಲಿ ಇಂಟ್ರೆಸ್ಟಿಂಗ್ ಸಂಗತಿ ರಿವೀಲ್ 

ಕೊನೆಗೂ ಆ ಬಿಗ್ ಮೂಮೆಂಟ್ ಬಂದೇ ಬಿಡ್ತು. ಭಾರತ ವರ್ಸಸ್ ದಕ್ಷಿಣ ಆಫ್ರಿಕಾ ಟೆಸ್ಟ್ ಸಮರ ಕಣ್ತುಂಬಿಕೊಳ್ಳುವ ಆ ಕ್ಷಣ ಸಮೀಪಿಸೇ ಬಿಡ್ತು. ಡಿಸೆಂಬರ್ 26 ಅಂದ್ರೆ ಇವತ್ತಿಂದ ಭಾರತ-ಆಫ್ರಿಕಾ ನಡುವೆ ಟೆಸ್ಟ್ ಸರಣಿ ಆರಂಭಗೊಂಡಿದೆ. ಬಾಕ್ಸಿಂಗ್ ಡೇ ಟೆಸ್ಟ್‌ಗೆ ಸೆಂಚುರಿಯನ್ ಅಂಗಳ ಸಜ್ಜಾಗಿದ್ದು, ಪಂದ್ಯವನ್ನ ಗೆಲ್ಲಲು ಉಭಯ ತಂಡಗಳು ಡಿಫರೆಂಟ್ ಸ್ಟ್ರಾಟಜಿ ರೂಪಿಸಿವೆ. ಈ ಬಾಕ್ಸಿಂಗ್ ಡೇ ಗೆಲ್ಲೋದು ಟೀಂ ಇಂಡಿಯಾಗೆ ಎಷ್ಟು ಮುಖ್ಯನೋ ಅಷ್ಟೇ ಕನ್ನಡಿಗ ಕೆ ಎಲ್ ರಾಹುಲ್‌ಗೆ  ಈ ಪಂದ್ಯ ಮಹತ್ವದ್ದಾಗಿದೆ. ಯಾಕಂದ್ರೆ ಬಾಕ್ಸಿಂಗ್ ಡೇ ಟೆಸ್ಟ್ ಜೊತೆ ಕನ್ನಡಿಗ ವಿಶೇಷ ಸವಿನೆನಪುಗಳನ್ನು ಹೊಂದಿದ್ದಾರೆ.

Ind vs SA: ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಸತತ 4ನೇ ಜಯ ದಾಖಲಿಸುತ್ತಾ ಭಾರತ..?

ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ರಾಹುಲ್ ಡೆಬ್ಯೂ 

ಇಂದು ಟೀಂ ಇಂಡಿಯಾದ ಖಾಯಂ ಟೆಸ್ಟ್ ಆಟಗಾರನಾಗಿರೋ ಕೆ.ಎಲ್. ರಾಹುಲ್ 2014ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ರು. ಮೆಲ್ಬೋರ್ನ್ನಲ್ಲಿ  ನಡೆದ ಆ ಪಂದ್ಯ ಬಾಕ್ಸಿಂಗ್ ಡೇ ಟೆಸ್ಟ್ ಆಗಿತ್ತು. ಆ ಟೆಸ್ಟ್‌ನ ಎರಡು ಇನ್ನಿಂಗ್ಸ್ನಲ್ಲೂ ರಾಹುಲ್ ವಿಫಲರಾಗಿದ್ದರು. ಆದ್ರೂ ಭಾರತ-ಆಸೀಸ್ ಟೆಸ್ಟ್ ಪಂದ್ಯ ಡ್ರಾ ಆಗಿತ್ತು. ಯಾವ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ರಾಹುಲ್ ಡೆಬ್ಯು ಮಾಡಿದ್ರೋ 4 ವರ್ಷಗಳ ಬಳಿಕ ಅಂದ್ರೆ 2018ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಅದೇ ಬಾಕ್ಸಿಂಗ್ ಡೇ ಟೆಸ್ಟ್‌ನಿಂದ ರಾಹುಲ್ ಕಿಕೌಟಾಗಿದ್ರು. ಮೊದಲ ಮೂರು ಟೆಸ್ಟ್ ಪಂದ್ಯಗಳನ್ನಾಡಿದ ಕನ್ನಡಿಗ, ಕೊನೆಯ ಬಾಕ್ಸಿಂಗ್ ಡೇ ಟೆಸ್ಟ್‌ನಿಂದ ಹೊರಗುಳಿದಿದ್ದು ಅವರಿಗೆ ನಿರಾಸೆ ತರಿಸಿತ್ತು.

2021ರ ಬಾಕ್ಸಿಂಗ್ ಡೇ ಟೆಸ್ಟ್ ಗೆಲುವಿನ ರೂವಾರಿ..!

2014ರಲ್ಲಿ ಬಿಟ್ರೆ ರಾಹುಲ್ ಮತ್ತೆ ಬಾಕ್ಸಿಂಗ್ ಡೇ ಟೆಸ್ಟ್ ಆಡಿದ್ದು, 2021ರಲ್ಲಿ ಸೌತ್ ಆಫ್ರಿಕಾ ವಿರುದ್ಧ. ಅದು ಭಾರತ-ಆಫ್ರಿಕಾ ನಡುವಿನ ಮೊದಲ ಬಾಕ್ಸಿಂಗ್ ಡೇ ಟೆಸ್ಟ್ ಆಗಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಸೆಂಚುರಿ ಸಿಡಿಸಿ ಭಾರತ ಬೃಹತ್ ಮೊತ್ತ ಕೂಡಿಹಾಕಲು ಕನ್ನಡಿಗ ಕಾರಣನಾದ. 2ನೇ ಇನ್ನಿಂಗ್ಸ್ನಲ್ಲಿ 23 ರನ್ ಗಳಿಸಿ ಔಟಾದ್ರೂ ಭಾರತ ಬಾಕ್ಸಿಂಗ್ ಡೇ ಟೆಸ್ಟ್ ಅನ್ನ 113 ರನ್‌ಗಳಿಂದ ಗೆದ್ದುಕೊಂಡಿತು. ಶತಕವೀರ ಕೆ ಎಲ್ ರಾಹುಲ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ್ರು.

Boxing Day Test: ಭಾರತ ಎದುರು ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲೇ ಮೊದಲ ಸಲ ರಾಹುಲ್ ಕೀಪಿಂಗ್

ಇಂದಿನಿಂದ ಆರಂಭವಾದ ಭಾರತ-ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ರಾಹುಲ್ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ಇದನ್ನ ಕೋಚ್ ರಾಹುಲ್ ದ್ರಾವಿಡ್ ಸ್ಪಷ್ಟಪಡಿಸಿದ್ದಾರೆ. ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ಟೆಸ್ಟ್ ಟೀಮ್‌ಗೆ ಕೀಪರ್ ಆಗಿ ಸೆಲೆಕ್ಟ್ ಆಗಿದ್ದರು. ಅದ್ರೆ ಅವರು ವಿಶ್ರಾಂತಿಗೆ ಜಾರಿರೋದ್ರಿಂದ ಕೆಎಸ್ ಭರತ್ ಆಯ್ಕೆಯಾಗಿದ್ದಾರೆ. ಭರತ್ ಕೀಪಿಂಗ್‌ನಲ್ಲಿ ಉತ್ತಮವಾಗಿದ್ದರೂ ಬ್ಯಾಟಿಂಗ್ನಲ್ಲಿ ಅಷ್ಟಕಷ್ಟೆ. ಹಾಗಾಗಿ ರಾಹುಲ್ ಹೆಗಲಿದೆ ಕೀಪಿಂಗ್ ಜವಾಬ್ದಾರಿ ನೀಡಿದ್ದಾರೆ ಕೋಚ್ ದ್ರಾವಿಡ್.

ಯೆಸ್, ದ್ರಾವಿಡ್ ಹೇಳಿದಂತೆ ರಾಹುಲ್ಗೆ ವೈಟ್ ಬಾಲ್ ಕ್ರಿಕೆಟ್ನಲ್ಲಿ ಕೀಪಿಂಗ್ ಅನುಭವವಿದೆ. ಆದ್ರೆ ರೆಡ್ ಬಾಲ್ನಲ್ಲಿ ಇಲ್ಲ. ಇದೇ ಮೊದಲ ಬಾರಿಗೆ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ. ರಾಹುಲ್ ಕೀಪಿಂಗ್ ಮಾಡೋದ್ರಿಂದ ಭಾರತಕ್ಕೆ ಒಬ್ಬ ಹೆಚ್ಚುವರಿ ಬ್ಯಾಟರ್ ಸಿಗ್ತಾನೆ. ಆದ್ರೆ 50 ಓವರ್ ಕೀಪಿಂಗ್ ಮಾಡಿದಷ್ಟು ಈಸಿಯಲ್ಲ 90 ಓವರ್ ಕೀಪಿಂಗ್ ಮಾಡೋದು. ಇಡೀ ದಿನ ವಿಕೆಟ್ ಹಿಂದೆ ಅದ್ಭುತ ಪ್ರದರ್ಶನ ನೀಡಬೇಕು. ಆ ಚಾಲೆಂಜ್ಗೆ ಕನ್ನಡಿಗ ರೆಡಿಯಾಗಿದ್ದಾನೆ. ಒಟ್ನಲ್ಲಿ ಬ್ಯಾಟರ್ ಆಗಿ ಬಾಕ್ಸಿಂಗ್ ಡೇ ಟೆಸ್ಟ್ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರಾಹುಲ್, ಕೀಪಿಂಗ್ ಆಗಿಯೂ ಬಾಕ್ಸಿಂಗ್ ಡೇ ಟೆಸ್ಟ್ ಮೂಲಕವೇ ಡೆಬ್ಯು ಮಾಡ್ತಿರೋದು ವಿಶೇಷ. ಆಲ್ ದ ಬೆಸ್ಟ್ ರಾಹುಲ್.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

click me!