ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ದಿಗ್ವಿಜಯ

By Suvarna News  |  First Published Dec 29, 2020, 9:34 AM IST

ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಲ್ಲಿ ಇನ್ನು ಒಂದು ದಿನ ಬಾಕಿ ಇರುವಾಗಲೇ ಟೀಂ ಇಂಡಿಯಾ 8  ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ 4 ಪಂದ್ಯಗಳ ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾ 1-1ರ ಸಮಬಲ ಸಾಧಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಮೆಲ್ಬರ್ನ್‌(ಡಿ.29): ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.

ಅಡಿಲೇಡ್‌ ಟೆಸ್ಟ್‌ ಪಂದ್ಯದಲ್ಲಿ 8 ವಿಕೆಟ್‌ಗಳ ಹೀನಾಯ ಸೋಲು ಕಂಡಿದ್ದ ಟೀಂ ಇಂಡಿಯಾ ಎರಡನೇ ಟೆಸ್ಟ್‌ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಕಾಂಗರೂ ಪಡೆಗೆ ಅವರ ನೆಲದಲ್ಲೇ ಭರ್ಜರಿ ತಿರುಗೇಟು ನೀಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ ಅರ್ಹ ಗೆಲುವು ದಾಖಲಿಸಿದೆ.

Tap to resize

Latest Videos

ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯಾ ಆಲೌಟ್‌ @200; ಭಾರತ ಗೆಲ್ಲಲು 70 ರನ್‌ ಗುರಿ

Shubman Gill and Ajinkya Rahane survive early jitters to help India win by 8️⃣ wickets in Melbourne 🔥

The series is now level at 1-1. SCORECARD ▶️ https://t.co/bcDsS3qmgl pic.twitter.com/1tHYMLrBa0

— ICC (@ICC)

ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಶುಭ್‌ಮನ್‌ ಗಿಲ್‌(45+35*) ಹಾಗೂ ಮೊಹಮ್ಮದ್ ಸಿರಾಜ್(5 ವಿಕೆಟ್‌) ಅಮೋಘ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರೆ, ಅಜಿಂಕ್ಯ ರಹಾನೆ ಶತಕ ಬಾರಿಸುವ ಮೂಲಕ ನಾಯಕನ ಆಟವಾಡಿ ಸ್ಮರಣೀಯ ಗೆಲುವು ದಕ್ಕಿಸಿ ಕೊಟ್ಟಿದ್ದಾರೆ.

click me!