ಈ ಬಾರಿಯ ಆಸೀಸ್ ಟೂರ್ ಕೊಹ್ಲಿಗೆ ಬಿಗ್ ಚಾಲೆಂಜ್: ಮತ್ತೊಮ್ಮೆ ಅಗ್ನಿಪರೀಕ್ಷೆಯಲ್ಲಿ ಗೆದ್ದು ಬರ್ತಾರಾ ವಿರಾಟ್?

By Suvarna News  |  First Published Oct 30, 2024, 3:22 PM IST

ಮುಂಬರುವ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯು ವಿರಾಟ್ ಕೊಹ್ಲಿ ಪಾಲಿಗೆ ಅಗ್ನಿ ಪರೀಕ್ಷೆಯಾಗುವ ಸಾಧ್ಯತೆಯಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ


ಬೆಂಗಳೂರು:  ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ನಂತರ, ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಈ ಸರಣಿ ರನ್‌ ಮಷಿನ್ ವಿರಾಟ್ ಕೊಹ್ಲಿ ಪಾಲಿಗೆ ಬಿಗ್ ಚಾಲೆಂಜ್ ಆಗಿದೆ. ಈ ಹಿಂದಿನ ಆಸಿಸ್ ಟೂರ್‌ಗಳು ಒಂದು ಲೆಕ್ಕವಾದ್ರೆ, ಈಗಿನ ಟೂರ್ ಮತ್ತೊಂದು ಲೆಕ್ಕವಾಗಿದೆ. ಯಾಕೆ ಅಂತೀರಾ? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.

12 ವರ್ಷಗಳ ಹಿಂದೆ ಒಂದು ಲೆಕ್ಕ ಈಗಿನದ್ದೇ ಒಂದು ಲೆಕ್ಕ! 

Latest Videos

undefined

ಅದು 2012..! ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಆಸೀಸ್ ನೆಲದಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿಯನ್ನ ಆಡಿತ್ತು. ಈ ಸರಣಿ ಆಗಷ್ಟೇ ಟೆಸ್ಟ್ ಕ್ರಿಕೆಟ್‌ಗೆ ಎಂಟ್ರಿ ನೀಡಿದ್ದ ಯಂಗ್  ಕೊಹ್ಲಿ, ಅಗ್ನಿಪರೀಕ್ಷೆಯಾಗಿತ್ತು. ತಂಡದಲ್ಲಿ ತನ್ನ ಸ್ಥಾನ ಸೇಫ್ ಮಾಡಿ ಕೊಳ್ಳಲು ಅಬ್ಬರಿಸಲೇಬೇಕಿತ್ತು. ಈ ಅಗ್ನಿಪರೀಕ್ಷೆಯಲ್ಲಿ ಡೆಲ್ಲಿ ಬಾಯ್‌ ಫಸ್ಟ್‌ ಕ್ಲಾಸ್‌ನಲ್ಲಿ ಪಾಸಾಗಿ ಹೋದ್ರು. 

ಘಟಾನುಘಟಿ ಬ್ಯಾಟರ್‌ಳಾದ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್‌ ಲಕ್ಷ್ಮಣ್ ಆಸೀಸ್‌ನ ಡೆಡ್ಲಿ ಬೌಲಿಂಗ್‌ನಲ್ಲಿ ಬ್ಯಾಟ್ ಬೀಸಲು ಪರದಾಡಿದ್ರು. ಆದ್ರೆ, 24 ವರ್ಷದ ಯಂಗ್‌ಸ್ಟರ್, ಅದ್ಭುತ ಬ್ಯಾಟಿಂಗ್‌ನಿಂದ ಕಾಂಗರೂ ಪಡೆಗೆ ಬೆವರಿಳಿಸಿದ್ದ. 

ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನು ಬ್ಲಾಕ್ ಮಾಡಿದ್ದೇಕೆ? ಇಬ್ಬರ ನಡುವೆ ಆಗಿದ್ದೇನು?

ಅಡಿಲೇಡ್ ಟೆಸ್ಟ್ನಲ್ಲಿ ವಿರಾಟ್ ವೀರಾವೇಶಕ್ಕೆ ಆಸೀಸ್ ಬೆಚ್ಚಿ ಬಿದ್ದಿತ್ತು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 607 ರನ್ ಕಲೆಹಾಕಿತ್ತು. ಆದ್ರೆ, ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲೇ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. 87ರನ್‌ಗೆ 4 ವಿಕೆಟ್ ಕಳೆದುಕೊಂಡಿತ್ತು. 111 ರನ್‌ಗಳಿಗೆ ತಂಡದ ಟಾಪ್ ಫೈವ್ ಬ್ಯಾಟರ್ಸ್ ಪೆವಿಲಿಯನ್ ಸೇರಿದ್ರು. ಇದ್ರಿಂದ ಧೋನಿ ಸೈನ್ಯ 200 ರನ್‌ ಗಳಿಸೋದು ಕಷ್ಟವಾಗಿತ್ತು. ಆದ್ರೆ, ನಂತರ ಶುರುವಾಗಿದ್ದೇ ವಿರಾಟಾರ್ಭಟ!

ಯೆಸ್, ಅಂದು ಕೊಹ್ಲಿ ಆಡಿದ್ದು ನಿಜಕ್ಕೂ ಒನ್ ಆಫ್ ಬೆಸ್ಟ್ ಇನ್ನಿಂಗ್ಸ್. ಆಸೀಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ವಿರಾಟ್, ವೃದ್ಧಿಮಾನ್ ಸಾಹ ಜೊತೆ ಸೇರಿ ಶತಕದ ಜೊತೆಯಾಟವಾಡಿದ್ರು. ಅಲ್ಲದೇ, ನೋಡು ನೋಡುತ್ತಲೇ ಶತಕದ ಗಾಡಿ ದಾಟಿದ್ರು. ಮೊದಲ ಆಸೀಸ್ ಪ್ರವಾಸದಲ್ಲೇ ಸೆಂಚುರಿ ಸಿಡಿಸಿ, ಇತಿಹಾಸ ನಿರ್ಮಿಸಿದ್ರು. ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ತಾಕತ್ತನ್ನ ಪ್ರೂವ್ ಮಾಡಿದ್ರು. 12 ವರ್ಷಗಳ ನಂತರ ಕೊಹ್ಲಿಗೆ ಮತ್ತೇ ಅಂತದ್ದೇ ಚಾಲೆಂಜ್ ಎದುರಾಗಿದೆ. 

ಕಾಂಗರೂ ನಾಡಿನಲ್ಲಿ ರನ್ಬೇಟೆಯಾಡ್ತಾರಾ ರನ್‌ಮಷೀನ್? 

ಯೆಸ್, ಸದ್ಯ ಕ್ರಿಕೆಟ್ ಜಗತ್ತಿನ ಹಾಟ್ ಟಾಪಿಕ್ ಅಂದ್ರೆ ಅದು,  ಕೊಹ್ಲಿ ಬ್ಯಾಡ್ ಫಾರ್ಮ್. ರನ್‌ ಮಷಿನ್ ಮತ್ತೊಮ್ಮೆ ರನ್‌ ಬರ ಎದುರಿಸುತ್ತಿದ್ದಾರೆ. ಇದರಿಂದ ಕೊಹ್ಲಿ ಆಟದ ಬಗ್ಗೆ ಟೀಕೆ, ಟಿಪ್ಪಣಿಗಳು ಕೇಳಿಬರ್ತಿವೆ. ಕೆಲವರಂತೂ ಕೊಹ್ಲಿ ಕಥೆ ಮುಗಿದಿದ್ದು, ರಿಟೈರ್ ಆಗ್ಬೇಕು ಅಂತ ಷರಾ ಬರೆಯುತ್ತಿದ್ದಾರೆ. ಕೊಹ್ಲಿಯ ಸಾಮರ್ಥ್ಯವನ್ನ ಪ್ರಶ್ನಿಸ್ತಿದ್ದಾರೆ. ಇದ್ರಿಂದ  ಆಸ್ಟ್ರೇಲಿಯಾ ಟೆಸ್ಟ್ ಸರಣಿ ಕೊಹ್ಲಿ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಫಾರ್ಮ್ ಕಂಡುಕೊಳ್ಳಲು ವಿರಾಟ್ ಕೊಹ್ಲಿ ಮೊದಲು ದೇಶಿ ಕ್ರಿಕೆಟ್ ಆಡಲಿ: ಆರ್‌ಸಿಬಿ ಮಾಜಿ ಕ್ರಿಕೆಟಿಗನ ಆಗ್ರಹ

12 ವರ್ಷಗಳ ಹಿಂದೆ ಕೊಹ್ಲಿ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಬೇಕಿತ್ತು. ಆದ್ರೀಗ, ನನ್ನ ಕಥೆ ಇನ್ನು ಮುಗಿದಿಲ್ಲ. ನನ್ನ ಸಾಮರ್ಥ್ಯ ಕಡಿಮೆಯಾಗಿಲ್ಲ ಅನ್ನೋದನ್ನ ಕೊಹ್ಲಿ ನಿರೂಪಿಸಬೇಕಿದೆ. ಆ ಮೂಲಕ ಟೀಕಾಕಾರರಿಗೆ ಮುಟ್ಟಿ ನೋಡಿ ಕೊಳ್ಳುವಂತೆ ಉತ್ತರ ಕೊಡಬೇಕಿದೆ. 

ಈವರೆಗೂ ಕೊಹ್ಲಿ 4 ಬಾರಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಆಡಿದ್ದಾರೆ. ಈ ನಾಲ್ಕೂ ಸರಣಿಗಳಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ದಾಖಲೆಗಳೇ ಕೊಹ್ಲಿ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡಿವೆ.

ಈವರೆಗೂ ವಿರಾಟ್ ಆಸ್ಟ್ರೇಲಿಯಾದಲ್ಲಿ 25 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಇದ್ರಲ್ಲಿ 54.08ರ ಸರಾಸರಿಯಲ್ಲಿ 6 ಶತಕ ಮತ್ತು  4 ಅರ್ಧಶತಕ ಸಹಿತ 1,352 ರನ್ ಕಲೆಹಾಕಿದ್ದಾರೆ. 

ಈ ದಾಖಲೆಗಳೇನೇ ಇರಲಿ, ಈ ಬಾರಿಯೂ ಆಸ್ಟ್ರೇಲಿಯಾದಲ್ಲಿ ವಿರಾಟ್ ವಿರಾಟರೂಪ ತೋರಿಸಲಿ. ಭಾರತಕ್ಕೆ ಸರಣಿ ಗೆದ್ದುಕೊಡಲಿ ಅನ್ನೋದೆ ಅಭಿಮಾನಿಗಳ ಆಶಯ.

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 

click me!