ಪಾಕ್ ಹಾಗೂ ಭಾರತ ಎದುರಿನ ಸರಣಿಯಿಂದ ಹೊರಬಿದ್ದ ಕಿವೀಸ್ ಮಾರಕ ವೇಗಿ, ಬ್ಲೈರ್ ಟಿಕ್ನರ್‌ಗೆ ಸ್ಥಾನ

Published : Jan 02, 2023, 01:13 PM IST
ಪಾಕ್ ಹಾಗೂ ಭಾರತ ಎದುರಿನ ಸರಣಿಯಿಂದ ಹೊರಬಿದ್ದ ಕಿವೀಸ್ ಮಾರಕ ವೇಗಿ, ಬ್ಲೈರ್ ಟಿಕ್ನರ್‌ಗೆ ಸ್ಥಾನ

ಸಾರಾಂಶ

ಪಾಕಿಸ್ತಾನ, ಭಾರತ ಎದುರಿನ ಸರಣಿಯಿಂದ ಹಿಂದೆ ಸರಿದ  ಆಡಂ ಮಿಲ್ನೆ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಕಿವೀಸ್ ವೇಗಿ ಮಿಲ್ನೆ ಆಡಂ ಮಿಲ್ನೆ ಬದಲಿಗೆ ನ್ಯೂಜಿಲೆಂಡ್ ತಂಡ ಕೂಡಿಕೊಂಡ ಬ್ಲೈರ್ ಟಿಕ್ನರ್

ವೆಲ್ಲಿಂಗ್ಟನ್‌(ಜ.02): ನ್ಯೂಜಿಲೆಂಡ್ ತಂಡವು ಈಗಾಗಲೇ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದು, ಇದಾದ ಬಳಿಕ ಭಾರತ ಪ್ರವಾಸ ಮಾಡಲಿದೆ. ಇನ್ನು ಪಾಕಿಸ್ತಾನ ಹಾಗೂ ಭಾರತ ವಿರುದ್ದ ಸೀಮಿತ ಓವರ್‌ಗಳ ಸರಣಿಗೆ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದ ವೇಗಿ ಆಡಂ ಮಿಲ್ನೆ, ಫಿಟ್ನೆಸ್‌ ಕಾರಣದಿಂದಾಗಿ ಈ ಎರಡು ಸರಣಿಯಿಂದ ಹೊರಗುಳಿದಿದ್ದು, ಇವರ ಬದಲಿಗೆ ಮತ್ತೋರ್ವ ವೇಗಿ ಬ್ಲೈರ್ ಟಿಕ್ನರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇತ್ತೀಚೆಗಷ್ಟೇ ತವರಿನಲ್ಲಿ ಭಾರತ ವಿರುದ್ದ ನಡೆದ ಸರಣಿಯಲ್ಲಿ ಸ್ನಾಯು ಸೆಳೆತದಿಂದಾಗಿ ತಂಡದಿಂದ ಹೊರಗುಳಿದಿದ್ದರು. ಇನ್ನು ಇದಾದ ಬಳಿಕ ಡಿಸೆಂಬರ್‌ನಲ್ಲಿ ನಡೆದ ಕಿವೀಸ್ ದೇಶಿ ಟೂರ್ನಿಯಾದ ಫೋರ್ಡ್‌ ಟ್ರೋಫಿಯ ಎರಡು ಪಂದ್ಯಗಳಿಂದಲೂ ಹೊರಗುಳಿದಿದ್ದರು. ಆದಾಗಿಯೂ ಆಡಂ ಮಿಲ್ನೆ ಸೂಪರ್ ಸ್ಮಾಶ್ ಟೂರ್ನಿಯಲ್ಲಿ ಫೈರ್‌ಬರ್ಡ್ಸ್‌ ತಂಡದ ಪರ ಮೊದಲೆರಡು ಪಂದ್ಯಗಳನ್ನು ಆಡಿದ್ದರು. ಆದರೆ ಕೇವಲ 16 ದಿನಗಳ ಅವಧಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ವಿರುದ್ದ 6 ಏಕದಿನ ಪಂದ್ಯಗಳನ್ನು ಆಡಬೇಕಿರುವುದರಿಂದಾಗಿ, ಭವಿಷ್ಯದ ಮಹತ್ವದ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನ ಹಾಗೂ ಭಾರತ ಎದುರಿನ ಏಕದಿನ ಸರಣಿಯಿಂದ ಹಿಂದೆ ಸರಿಯುವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಇನ್ನು ಈಗಾಗಲೇ ನ್ಯೂಜಿಲೆಂಡ್‌ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದು ಪಾಕಿಸ್ತಾನ ಪ್ರವಾಸದಲ್ಲಿ ವೇಗಿ ಬ್ಲೈರ್ ಟಿಕ್ನರ್ ಅವರನ್ನು ಮಿಲ್ನೆ ಬದಲಿಗೆ ಸೀಮಿತ ಓವರ್‌ಗಳ ಸರಣಿಗೆ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥ ಗೆವಿನ್ ಲಾರ್ಸೆನ್ ಹೇಳಿದ್ದಾರೆ. "ಆಡಂ ಮಿಲ್ನೆ ನಮ್ಮ ತಂಡದ ಮುಂಚೂಣಿ ವೇಗಿಗಳಲ್ಲಿ ಒಬ್ಬರು. ಮುಂಬರುವ ಏಕದಿನ ಸರಣಿಗೆ ಅವರು ಸಂಪೂರ್ಣವಾಗಿ ಸಿದ್ದತೆ ನಡೆಸದ ಹಿನ್ನೆಲೆಯಲ್ಲಿ ಪಾಕಿಸ್ತಾನ ಹಾಗೂ ಭಾರತ ಎದುರಿನ ಏಕದಿನ ಸರಣಿಯಿಂದ ಹಿಂದೆ ಸರಿಯುವ ತೀರ್ಮಾನ ತೆಗೆದುಕೊಂಡಿದ್ದಾರೆ" ಎಂದು ಲಾರ್ಸೆನ್ ಹೇಳಿದ್ದಾರೆ.

ಟೀಂ ಇಂಡಿಯಾ ಕೀಪರ್‌-ಬ್ಯಾಟರ್‌ ಸ್ಥಾನಕ್ಕೆ ಕೆ ಎಸ್‌ ಭರತ್‌, ಇಶಾನ್ ಕಿಶನ್‌ ನಡುವೆ ಸ್ಪರ್ಧೆ

ನಾವು ಅವರ ಜತೆ ಮಾತುಕತೆ ನಡೆಸಿದ ಬಳಿಕ ಸತತ ಸರಣಿಗಳಿರುವುದರಿಂದ ಈ ಎರಡು ಸರಣಿಗೆ ಅವರು ಸಂಪೂರ್ಣವಾಗಿ ಸಂಪೂರ್ಣವಾಗಿ ಫಿಟ್ ಇಲ್ಲದ ಹಿನ್ನೆಲೆಯಲ್ಲಿ, ತಮ್ಮಿಂದ ತಂಡಕ್ಕೆ ಹಿನ್ನಡೆಯಾಗಬಾರದು ಎಂದು ಪ್ರಾಮಾಣಿಕವಾಗಿ ತಮ್ಮ ಅಭಿಪ್ರಾಯ ತಿಳಿಸಿದ ಆಡಂ ಮಿಲ್ನೆಯವರ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ಲಾರ್ಸೆನ್ ತಿಳಿಸಿದ್ದಾರೆ.

ಕೇನ್ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲೆಂಡ್ ತಂಡವು ಜನವರಿ 09ರಿಂದ 13ರ ಅವಧಿಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಇದಾದ ಬಳಿಕ ಕಿವೀಸ್ ತಂಡವು ಭಾರತ ಪ್ರವಾಸ ಮಾಡಲಿದ್ದು, ಭಾರತ ಪ್ರವಾಸದಲ್ಲಿ ಜನವರಿ 18ರಿಂದ 24ರ ಅವಧಿಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.

ಭಾರತ ಹಾಗೂ ಪಾಕಿಸ್ತಾನ ಪ್ರವಾಸಕ್ಕೆ ನ್ಯೂಜಿಲೆಂಡ್ ತಂಡ ಹೀಗಿದೆ ನೋಡಿ:

ಕೇನ್ ವಿಲಿಯಮ್ಸನ್(ನಾಯಕ- ಪಾಕಿಸ್ತಾನ ಏಕದಿನ ಸರಣಿಗೆ ಮಾತ್ರ), ಟಾಮ್ ಲೇಥಮ್(ನಾಯಕ-ಭಾರತ ಎದುರಿನ ಏಕದಿನ ಸರಣಿಗೆ), ಫಿನ್ ಅಲೆನ್, , ಮೈಕೆಲ್ ಬ್ರಾಸ್‌ವೆಲ್, ಮಾರ್ಕ್‌ ಚಾಂಪ್ಮನ್(ಭಾರತ ಸರಣಿಗೆ ಮಾತ್ರ), ಡೆವೊನ್ ಕಾನ್‌ವೇ, ಜೇಕಬ್ ಡುಫ್ಫಿ(ಭಾರತ ಸರಣಿಗೆ ಮಾತ್ರ), ಲಾಕಿ ಫರ್ಗ್ಯೂಸನ್‌, ಮ್ಯಾಟ್ ಹೆನ್ರಿ, ಬ್ಲೈರ್ ಟಿಕ್ನರ್, ಡೇರಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಫ್ಸ್, ಮಿಚೆಲ್ ಸ್ಯಾಂಟ್ನರ್, ಹೆನ್ರಿ ಶಿಪ್ಲೆ, ಇಶ್ ಸೋಧಿ, ಟಿಮ್ ಸೌಥಿ(ಪಾಕಿಸ್ತಾನ ಎದುರಿನ ಸರಣಿಗೆ ಮಾತ್ರ).

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?