Legends League Cricket ಬಿಗ್ ಬಿ ಅಮಿತಾಭ್ ಬಚ್ಚನ್ ರಾಯಭಾರಿ!

By Suvarna News  |  First Published Dec 9, 2021, 8:24 PM IST

ಲೆಜೆಂಡ್ಸ್ ಲೀಗ್ ಕ್ರಿಕೆಟ್  ಜೊತೆ ಒಪ್ಪಂದಕ್ಕೆ ಮೆಗಾಸ್ಟಾರ್ ಸಹಿ
ಮೂರು ತಂಡಗಳ ನಡುವೆ ನಡೆಯಲಿರುವ ಮುಖಾಮುಖಿ
2022ರ ಜನವರಿಯಲ್ಲಿ ಒಮನ್ ನ ಅಲ್ ಅಮೆರೆತ್ ಕ್ರೀಡಾಂಗಣದಲ್ಲಿ ಪಂದ್ಯಗಳು


ಬೆಂಗಳೂರು(ಡಿ.09): ನಿವೃತ್ತ ವೃತ್ತಿಪರ ಕ್ರಿಕೆಟಿಗರನ್ನು ಒಳಗೊಂಡ ನೂತನ ವೃತ್ತಿಪರ ಕ್ರಿಕೆಟ್ ಟೂರ್ನಮೆಂಟ್, ಲೆಜೆಂಡ್ಸ್ ಲೀಗ್ ಕ್ರಿಕೆಟ್  ನ (Legends League Cricket)ಮೊಟ್ಟಮೊದಲ ರಾಯಭಾರಿಯಾಗಿ (Ambassador)ಬಾಲಿವುಡ್ ನ ದಿಗ್ಗಜ ನಟ, ಬಿಗ್ ಬಿ ಅಮಿತಾಭ್ ಬಚ್ಛನ್ (Amitabh Bachchan) ನೇಮಕವಾಗಿದ್ದಾರೆ. ಈ ಕುರಿತಾಗಿ ಲೆಜೆಂಡ್ಸ್ ಲೀಗ್ ಕ್ರಿಕೆಟ್  ಹಾಗೂ ಮೆಗಾಸ್ಟಾರ್ ನಡುವೆ ಒಪ್ಪಂದಗಳು ಅಧಿಕೃತವಾಗಿದೆ. ಭಾರತ (India), ಏಷ್ಯಾ (Asia) ಮತ್ತು ಇತರೇ ವಿಶ್ವ (Rest of the World) ಒಳಗೊಂಡ ಮೂರು ಬಲಿಷ್ಠ ತಂಡಗಳು ಈ ಲೀಗ್ ನಲ್ಲಿ ಸೆಣಸಾಡಲಿದ್ದು, ಜನವರಿ 2022ರಲ್ಲಿ ಮೊದಲ ಆವೃತ್ತಿ ನಡೆಯುವುದು ನಿಶ್ಚಯವಾಗಿದೆ. ಲೀಗ್ ನ ಎಲ್ಲಾ ಪಂದ್ಯಗಳು ಗಲ್ಫ್ ರಾಷ್ಟ್ರ ಒಮನ್ ನ (Oman) ಅಲ್ ಅಮೆರೆತ್ ಕ್ರೀಡಾಂಗಣದಲ್ಲಿ (Al Amerat Cricket Stadium) ನಡೆಯಲಿದೆ.

ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಸೂಪರ್ ಸ್ಟಾರ್ ಅಮಿತಾಭ್ ಬಚ್ಛನ್, "ಹಳೆಯ ಕಾಲದ ಕ್ರಿಕೆಟ್ ನೆನಪುಗಳನ್ನು ಮೆಲುಕು ಹಾಕಲು ಇರುವ ಒಳ್ಳೆಯ ಅವಕಾಶ. ಹಳೆದ ಪೈಪೋಟಿಗಳನ್ನು ಈ ಲೀಗ್ ಮತ್ತೆ ಮರುಕಳಿಸುವಂತೆ ಮಾಡುತ್ತದೆ. ವಿಶ್ವದಾದ್ಯಂತ ದಿಗ್ಗಜರ ಕ್ರಿಕೆಟ್ ಸಂಭ್ರಮಾಚರಣೆ ಇದಾಗಿದ್ದು, ವೈಯಕ್ತಿಕವಾಗಿಯೂ ನಾನು ಈ ಪಂದ್ಯಗಳನ್ನು ನೋಡಲು ಕಾತುರನಾಗಿದದ್ದೇನೆ. ದಿಗ್ಗಜ ಕ್ರಿಕೆಟಿಗರ ಆಟವನ್ನು ಮತ್ತೆ ನೇರಪ್ರಸಾರದಲ್ಲಿ ನೋಡಲು ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಇದೊಂದು ದೊಡ್ಡ ಅವಕಾಶ" ಎಂದು ಹೇಳಿದ್ದಾರೆ.

"ಅಮಿತಾಭ್ ಬಚ್ಛನ್ ಅವರಂಥ ವ್ಯಕ್ತಿ ನಮ್ಮೊಂದಿಗೆ ಇರುವುದು ಗೌರವ ತಂದಿದೆ. ಲೆಜೆಂಡ್ಸ್ ಎನ್ನುವ ಶಬ್ದ ಬಂದಾಗ ರಾಯಭಾರಿಯಾಗಲು ಇವರಿಗಿಂತ ದೊಡ್ಡ ಹಾಗೂ ಸೂಕ್ತವಾದ ಹೆಸರು ಯಾವುದೂ ಇಲ್ಲ. ಬಚ್ಛನ್ ಅವರು ಜಾಗತಿಕ ಐಕಾನ್ ಅದಲ್ಲದೆ, ಎಲ್ಲರಿಂದಲೂ ಗೌರವಿಸಲ್ಪಡುವ ವ್ಯಕ್ತಿ. ಅದರೊಂದಿಗೆ ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದು ಸ್ವತಃ ಕ್ರೀಡೆಯ ಪ್ರೋತ್ಸಾಹಕರಾಗಿದ್ದಾರೆ ನಮ್ಮ ಲೀಗ್ ನ ನಿಲುವನ್ನಿ ಇವರು ದೊಡ್ಡ ಮಟ್ಟಕ್ಕೆ ಏರಿಸಿದ್ದಾರೆ ಎಂದು ಲೆಜೆಂಡ್ಸ್  ಲೀಗ್ ಕ್ರಿಕೆಟ್ ನ ಸಿಇಒ ರಮಣ್ ರಹೇಜಾ (Raman Raheja) ಹೇಳಿದರು.



Amitabh Bachchan; 'ಒಪ್ಪಂದ ಮುರಿದುಕೊಂಡ್ರೂ ಪ್ರಸಾರ'  ಪಾನ್ ಮಸಾಲ ಕಂಪನಿಗೆ ಬಿಗ್‌ಬಿ ನೋಟಿಸ್
ಬಾಲ್ಯದ ದಿನಗಳಲ್ಲಿ ನಾನು ಕ್ರಿಕೆಟ್ ಆಡುತ್ತಿದ್ದೆ ಆ ಬಳಿಕ ಕ್ರಿಕೆಟ್ ನ ಕೆಲವು ಶ್ರೇಷ್ಠ ಹೆಸರುಗಳೊಂದಿಗೆ ಮಾತನಾಡುವ ಅವಕಾಶವನ್ನು ಪಡೆದೆ. ಈಗ ಇಂಥ ಅದ್ಭುತ ಕ್ರಿಕೆಟ್ ಲೀಗ್ ನ ಭಾಗವಾಗುವುದು ತುಂಬಾ ವಿಶೇಷ ಎನಿಸಿದೆ. ನಮ್ಮ ಪಾಲಿಗೆ ಎಂದಿಗೂ ಸಂತೋಷ ಮತ್ತು ಹೆಮ್ಮೆ ಹಾಗೂ ಸುಂದರ ಕ್ಷಣಗಳನ್ನು ನೀಡಿದ ಕ್ರಿಕೆಟ್ ಆಟದ ದಿಗ್ಗಜರು ಮತ್ತೆ ಮೈದಾನಕ್ಕೆ ಇಳಿಯುತ್ತಿರುವುದು ಹರ್ಷದಾಯಕ ಸಂಗತಿ. ಲೆಜೆಂಡ್ಸ್ ಕ್ರಿಕೆಟ್ ಲೀಗ್ ಖಂಡಿತವಾಗಿಯೂ ಲೆಜೆಂಡ್ ಗಳಿಗೆ ಹಾಗೂ ನನ್ನಂಥ ಕ್ರಿಕೆಟ್ ನ ಕಟ್ಟಾ ಅಭಿಮಾನಿಗಳನ್ನು ಸಂಪರ್ಕಿಸಲು ಅತ್ಯುತ್ತಮ ಅವಕಾಶ ನೀಡುತ್ತದೆ ಎನ್ನುವ ವಿಶ್ವಾಸ ನನ್ನದು ಎಂದು ಅಮಿತಾಭ್ ಬಚ್ಛನ್ ಹೇಳಿದ್ದಾರೆ.

Tap to resize

Latest Videos

Team India ಕೋಚ್ ಹುದ್ದೆಯಿಂದ ಕೆಳಗಿಳಿದ ಬಳಿಕ ಹೊಸ ಕನಸನ್ನು ಬಿಚ್ಚಿಟ್ಟ ರವಿಶಾಸ್ತ್ರಿ..!
ಹರ್ಷ ವ್ಯಕ್ತಪಡಿಸಿದ ರವಿಶಾಸ್ತಿ
ಟೀಮ್ ಇಂಡಿಯಾ (Team India) ಮಾಜಿ ಕೋಚ್ ರವಿಶಾಸ್ತ್ರಿ(Ravi Shastri) ಲೆಜೆಂಡ್ಸ್  ಲೀಗ್ ಕ್ರಿಕೆಟ್ ನ ಕಮೀಷನರ್ (Commissioner). ಅಮಿತಾಬ್ ಬಚ್ಛನ್ ಎಲ್ ಎಲ್ ಸಿಗೆ (LLC)ಜೊತೆಯಾಗಿರುವುದಕ್ಕೆ ತಮ್ಮದೇ ಆದ ರೀತಿಯಲ್ಲಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. "ಸಿನಿಮಾ ಲೋಕದ ಶೇಹನಶಾ, ನಮ್ಮೆಲ್ಲರ ಹೃದಯದ ಡಾನ್ ನಮ್ಮ ಎಲ್ ಎಲ್ ಸಿಯ ಸಾರ ಹಾಗೂ ಸಂದೇಶವನ್ನು ಜಗತ್ತಿನ ಎಲ್ಲೆಡೆಗೆ ಕೊಂಡೊಯ್ಯಲು ನಮ್ಮೊಂದಿಗೆ ಜೊತೆಯಾಗಿದ್ದಾರೆ. ಅವರೊಂದಿಗೆ ಕೆಲಸ ಮಾಡಲು ಇದು ಅವಕಾಶವಾಗಿದ್ದು,ನಾನು ಬಹಳ ಉತ್ಸುಕನಾಗಿದ್ದೇನೆ. ಈ ಜೊತೆಯಾಟ ಬುಲೆಟ್ ನ ಕುರುಹುಗಳ ರೀತಿ ಇರುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದಿದ್ದಾರೆ.

click me!