
ಸರ್ಫರಾಜ್ ಖಾನ್ ಟೀಂ ಇಂಡಿಯಾದ ಪ್ರತಿಭಾನ್ವಿತ ಕ್ರಿಕೆಟರ್. ಸದ್ಯ ತಂಡದಲ್ಲಿ ಅವರಿಗೆ ಅವಕಾಶಗಳು ಇಲ್ಲ. ಒಂದೊಳ್ಳೆ ಅವಕಾಶ ಪಡೆಯಲು ಮತ್ತೆ ಎದುರು ನೋಡುತ್ತಿದ್ದಾರೆ. ಅದಕ್ಕಾಗಿ ನಿರಂತವಾಗಿ ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ. ಈ ಮಧ್ಯೆ ಆಕಾಶ್ ಚೋಪ್ರಾ ಅವರ ʼಬೈತ್ ಔರ್ ಬೋಲ್ʼ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಮ್ಮ ಮೇಲೆ ಬಂದಿದ್ದ ಡ್ರೆಸ್ಸಿಂಗ್ ರೂಮ್ ಸಂಭಾಷಣೆಗಳನ್ನು ಸೋರಿಕೆ ಆರೋಪಗಳಿಗೆ ಉತ್ತರ ನೀಡಿದ್ದಾರೆ.
ತಮ್ಮ ಮೇಲೆ ಆರೋಪಗಳು ಕೇಳಿಬಂದಾಗ ಏನಾಯಿತು? ಆ ಕ್ಷಣದಲ್ಲಿ ತಾವು ಏನೆಲ್ಲ ಘಟನೆಗಳು ಆದವು ಅನ್ನೋದ್ರ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ನಾನು ಗಾಯಗೊಂಡೆ, ನಾನು NCA ನಲ್ಲಿ ಪುನರ್ವಸತಿ ಮಾಡುತ್ತಿದ್ದೆ ಮತ್ತು ನಂತರ ಈ ಸುದ್ದಿ ಬಂದಿತು. ಡ್ರೆಸ್ಸಿಂಗ್ ರೂಮ್ ವಿಚಾರಗಳು ಹೇಗೆ ಸೋರಿಕೆ ಆಗಿದೆ ಎಂಬ ವಿಚಾರ ಕೇಳಿದಾಗ ನನಗೆ ತುಂಬಾ ನೋವು ಆಯಿತು. ನಾನು ವಿಮಾನದಿಂದ ಇಳಿದಾಗ ಕರೆಗಳು ಮತ್ತು ಸಂದೇಶಗಳು ಬರಲು ಶುರುವಾದವು. ನನ್ನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅನಗತ್ಯ ಸುದ್ದಿಗಳು ವೈರಲ್ ಆಗಲು ಶುರುವಾಗಿತ್ತು.
ನಾನು ಯಾರೊಂದಿಗಾದರೂ ಮಾತನಾಡಿದ್ದರೆ.. ಯಾರೊಂದಿಗೆ ಮಾತನಾಡುತ್ತಿದ್ದೆ? ಹಾಗಂತ ಏನೂ ಇರಲಿಲ್ಲ. ನಾನು ಭಾರತ-ಎ ತಂಡಕ್ಕೆ ಹಿಂತಿರುಗುತ್ತಿರಲಿಲ್ಲ. ನಾನು ಶ್ರೀಲಂಕಾಕ್ಕೆ ಹೋಗಿದ್ದೆ. ಹಾಗಾದರೆ ಇದು ಸಾಮಾಜಿಕ ಮಾಧ್ಯಮದಲ್ಲಿ ಹೇಗೆ ಹರಡಿತು? ನನಗೆ ಗೊತ್ತಿಲ್ಲ. ಆ ಸಮಯದಲ್ಲಿ ತುಂಬಾ ಬೇಸರವಾಯಿತು. ಅಂತಹ ಸಮಯದಲ್ಲಿ ಯಾರೂ ಫೋನ್ ಕೂಡ ಎತ್ತುವುದಿಲ್ಲ. ನನ್ನ ಮನೆಯವರಿಗೆ ಅದು ತುಂಬಾ ಕೆಟ್ಟ ಸಮಯವಾಗಿತ್ತು. ನನ್ನ ಜೀವನದಲ್ಲಿ ತುಂಬಾ ಕಷ್ಟಗಳಿವೆ, ಹಾಗಾಗಿ ನಾನು ಸಹಿಸಿಕೊಳ್ಳುತ್ತೇನೆ. ಆದರೆ ಅಪ್ಪನಿಗಾಗಿ ಬೇಸರವಾಗುತ್ತದೆ. ಹೆಂಡತಿ, ಸಹೋದರ ಮತ್ತು ನನ್ನ ಅಮ್ಮನಿಗಾಗಿಯೂ ಬೇಸರವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಒಂದು ಸಣ್ಣ ವಿಷಯ ಬಂದರೂ ಅದು ತುಂಬಾ ದೊಡ್ಡದಾಗುತ್ತದೆ.
ಎರಡು ದಿನಗಳ ನಂತರ ಗಂಭೀರ್ ಸರ್ ಅವರಿಂದ ಕರೆ ಬಂದಿತು. ಅವರು ಆಟದತ್ತ ಗಮನ ಹರಿಸಲು ಕೇಳಿಕೊಂಡರು. ಆ ವಿಷಯಗಳತ್ತ ಗಮನ ಹರಿಸಬೇಡಿ, ಇದೆಲ್ಲ ರಾಜಕೀಯ ಎಂದರು. ನನ್ನ ತಂದೆ ದುಃಖಿತರಾಗಿದ್ದಾರೆ ಮತ್ತು ನನ್ನ ಹೆಂಡತಿ ಅಳುತ್ತಿದ್ದಾರೆ ಎಂದು ಸರ್‌ಗೆ ಹೇಳಿದೆ. ಆಗ ಕೋಚ್ ಗಂಭೀರ್ ಸರ್ ನನ್ನ ತಂದೆ ಜೊತೆ ಮಾತನ್ನಾಡಿ ನಡೆದಿರುವ ವಿಚಾರಗಳನ್ನ ತಿಳಿಸಿದರು. ಅವರು ಒಳ್ಳೆಯ ಕ್ರಿಕೆಟಿಗ ಮತ್ತು ಅವರನ್ನು ಆಡಲು ಬಿಡಿ ಆ ವಿಷಯಗಳತ್ತ ಗಮನ ಹರಿಸಬೇಡಿ ಎಂದು ಗಂಭೀರ್ ಅಭಯ ನೀಡಿರುವ ಬಗ್ಗೆ ಸರ್ಫರಾಜ್ ಖಾನ್ ವಿವರಿಸಿದ್ದಾರೆ.
ಡ್ರೆಸ್ಸಿಂಗ್ ರೂಮ್ ವಿಚಾರಗಳ ಸೋರಿಕೆ ವಿಚಾರದಲ್ಲಿ ಸರ್ಫರಾಜ್ ಖಾನ್ ಮೇಲೆ ಆರೋಪ ಕೇಳಿಬಂದಿತ್ತು. ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ನಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳಿಗೆ ಸೋರಿಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದೇ ವಿಚಾರಕ್ಕೆ ಗಂಭೀರ್ ಅವರು, ಸರ್ಫರಾಜ್ ಖಾನ್‌ನನ್ನು ತಂಡದಿಂದ ಹೊರಗಿಟ್ಟರು ಎಂಬ ಸುದ್ದಿ ಹರಡಿತ್ತು. ಈಗ ಸರ್ಫರಾಜ್ ಖಾನ್ ಅವರು ಗಂಭೀರ್ ಅವರು ಫೋನ್ ಮಾಡಿ ನನಗೆ ಮಾತನ್ನಾಡಿದ್ದರು. ಧೈರ್ಯ ತುಂಬಿದ್ದರು ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.