*ಕ್ರೀಡಾ ಬೆಟ್ಟಿಂಗ್ ಸಂಸ್ಥೆಗಳಾದ ಟಿಪಿಕೊ, ಸಿಸಾಲ್‌ನಲ್ಲಿ ಸಿವಿಸಿ ಪಾಲು
*ಅಹಮದಾಬಾದ್ ಐಪಿಎಲ್ ತಂಡವನ್ನು ಖರೀದಿಸಿರುವ ಸಿವಿಸಿ ಸಂಸ್ಥೆ
*ಅಹಮದಾಬಾದ್ ಹಾಗೂ ಲಕ್ನೌ ತಂಡಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದ ಬಿಸಿಸಿಐ
ನವದೆಹಲಿ (ಅ. 29) : ಯುರೋಪ್ ಮೂಲದ ಸಿವಿಸಿ ಕ್ಯಾಪಿಟಲ್ (CVC Capital) ಸಂಸ್ಥೆ ಐಪಿಎಲ್‌ನ ಹೊಸ ತಂಡವನ್ನು ಖರೀದಿಸಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಸಿವಿಸಿ ಕ್ಯಾಪಿಟಲ್ ಯುರೋಪ್‌ನ ಕ್ರೀಡಾ ಬೆಟ್ಟಿಂಗ್ ಸಂಸ್ಥೆಗಳಾದ ಟಿಪಿಕೊ, ಸಿಸಾಲ್, ಮಲೇಷ್ಯಾದ ಮ್ಯಾಂಗ್ನಮ್ ಕಾರ್ಪೋರೇಷನ್‌ನಲ್ಲಿ ಪಾಲು ಹೊಂದಿದೆ. ಸಿವಿಸಿ ಸಂಸ್ಥೆ ಐಪಿಎಲ್ ತಂಡ ಖರೀದಿಸಿದ್ದನ್ನು ಹಲವರು ಪ್ರಶ್ನಿಸಿದ ಬಳಿಕ ಬಿಸಿಸಿಐ (BCCI), ಸಿವಿಸಿ ಸಂಸ್ಥೆಯ ದಾಖಲೆಗಳನ್ನು ಮರುಪರಿಶೀಲಿಸುವಂತೆ ತನ್ನ ಕಾನೂನು ಅಧಿಕಾರಿಗಳಿಗೆ ಸೂಚಿಸಿತ್ತು.
T20 World Cup: ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ಸೆಹ್ವಾಗ್
undefined
ಬಿಸಿಸಿಐ ಕಾನೂನು ಅಧಿಕಾರಿಗಳು ಸಿವಿಸಿ ಸಂಸ್ಥೆಗೆ ಕ್ಲೀನ್ ಚಿಟ್ ನೀಡಿದ್ದಾರೆ. ಸಿವಿಸಿ ಬೆಟ್ಟಿಂಗ್ ನಡೆಸುವ ಸಂಸ್ಥೆಗಳಲ್ಲಿ ಪಾಲು ಹೊಂದಿದ್ದರೂ, ಅದು ಐಪಿಎಲ್ (IPL) ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಐಪಿಎಲ್‌ನಲ್ಲಿ ತಂಡ ಹೊಂದಲು ಸಿವಿಸಿ ಸಂಸ್ಥೆ ಅರ್ಹ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಸಿವಿಸಿ ತಂಡಕ್ಕೆ ಐಪಿಎಲ್ ಬಿಡ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದನ್ನು ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ (Lalit Modi) ಸಹ ಟ್ವೀಟರ್‌ನಲ್ಲಿ ಪ್ರಶ್ನಿಸಿದ್ದರು. ‘ಬೆಟ್ಟಿಂಗ್ ನಡೆಸುವ ಕಂಪೆನಿಗಳು ಐಪಿಎಲ್ ತಂಡವನ್ನು ಖರೀದಿಸಬಹುದೆಂದು ನಾನು ಊಹಿಸುತ್ತೇನೆ. ಇದು ಹೊಸ ನಿಯಮ ಆಗಿರಬಹುದು. ಒಂದು ದೊಡ್ಡ ಬೆಟ್ಟಿಂಗ್ ಕಂಪೆನಿ ಬಿಡ್ ಸಲ್ಲಿಸಿ ತಂಡವನ್ನು ಖರೀದಿಸಿದೆ. ಮುಂದೇನು? ಇಂತಹ ಪ್ರಕರಣಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಏನು ಮಾಡಬಹುದು? ಎಂದು ಟ್ವೀಟ್ ಮೂಲಕ ಮೋದಿ ಪ್ರಶ್ನಿಸಿದ್ದಾರೆ.
i guess betting companies can buy a team. must be a new rule. apparently one qualified bidder also owns a big betting company. what next 😳😳😳 - does not do there homework. what can Anti corruption do in such a case ?
— Lalit Kumar Modi (@LalitKModi)
ಮುಂದಿನ ಐಪಿಎಲ್ ಟೂರ್ನಿಗೆ 10 ತಂಡಗಳು!
ಮುಂದಿನ ಐಪಿಎಲ್ ಟೂರ್ನಿಗೆ 10 ತಂಡಗಳು ಹೋರಾಟ ನಡೆಸಲಿದೆ. ಸೋಮವಾರ (ಅ. 25) ದುಬೈನಲ್ಲಿ ನಡೆದ ಹೊಸ ತಂಡಗಳ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಬಿಸಿಸಿಐ ಅಹಮ್ಮದಾಬಾದ್ (Ahmdabad) ಹಾಗೂ ಲಕ್ನೌ (Lucknow) ತಂಡಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ. ಮುಂದಿನ ಐಪಿಎಲ್ ಟೂರ್ನಿಯಲ್ಲಿ ಅಹಮ್ಮದಾಬಾದ್ ಹಾಗೂ ಲಕ್ನೌ ತಂಡ ಸೇರ್ಪಡೆಗೊಳ್ಳುತ್ತಿದೆ. ಸಂಜೀವ್ ಗೊಯಂಕಾ ಮಾಲೀಕತ್ವದ RPSG ಹಾಗೂ ಲಂಡನ್ ಮೂಲದ ಸಿವಿಸಿ ಕ್ಯಾಪಿಟಲ್ ಬಿಡ್ ಗೆದ್ದುಕೊಂಡಿದೆ. ಸಂಜೀವ್ ಗೊಯೆಂಕಾ 7,090 ಕೋಟಿ ರೂಪಾಯಿಗೆ ತಂಡ ಖರೀದಿಸಿದರೆ, ಸಿವಿಸಿ ಕ್ಯಾಪಿಟಲ್ 5,600 ಕೋಟಿ ರೂಪಾಯಿಗೆ ತಂಡ ಖರೀದಿಸಿತು.
CSK ಮತ್ತು RR ಎರಡು ವರ್ಷ ನಿಷೇಧ!
2013ರ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣದ ಕಪ್ಪುಚುಕ್ಕೆ ಈಗಾಗಲೇ ಐಪಿಎಲ್ ಟೂರ್ನಿ ಮೇಲೆ ಇದೆ . ಈ ಪರಿಸ್ಥಿತಿಯಲ್ಲಿ, ಬೆಟ್ಟಿಂಗ್ ಮತ್ತು ಜೂಜು ಕಂಪನಿಗಳಲ್ಲಿ ಪಾಲುದಾರಿಕೆ ಹೊಂದಿರುವ ವಿದೇಶಿ ಕಂಪನಿಗೆ ಹೊಸ ತಂಡವನ್ನು ನೀಡುವುದು ಬಿಸಿಸಿಐಗೆ ಸವಾಲಿನ ಪ್ರಶ್ನೆಯಾಗಿತ್ತು. ಆದರೆ ಬಿಸಿಸಿಐ ಕಾನೂನು ಅಧಿಕಾರಿಗಳು ಸಿವಿಸಿ ಸಂಸ್ಥೆಗೆ ಕ್ಲೀನ್ ಚಿಟ್ ನೀಡಿದ್ದಾರೆ ಭಾರತೀಯ ಕಾನೂನುಗಳ ಪ್ರಕಾರ ದೇಶದಲ್ಲಿ ಜೂಜು ಮತ್ತು ಬೆಟ್ಟಿಂಗ್ ಅನ್ನು ನಿಷೇಧಿಸಲಾಗಿದೆ. ಸಂಜೀವ್ ಗೊಯೆಂಕಾ ಅವರ RPSG ಗ್ರೂಪ್ ಐಪಿಎಲ್ ಟೂರ್ನಿಯಲ್ಲಿ 2 ವರ್ಷಗಳ ಕಾಲ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಅನ್ನೋ ತಂಡ ಮುನ್ನಡೆಸಿತ್ತು.
IPLಗೆ ಅಹಮ್ಮದಾಬಾದ್, ಲಕ್ನೌ ಹೊಸ 2 ತಂಡ; ಬಿಡ್ಡಿಂಗ್ ಗೆದ್ದ RPSG ಹಾಗೂ CVC ಕ್ಯಾಪಿಟಲ್!
ಐಪಿಎಲ್ ಸ್ಫಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಕಾರಣದಿಂದ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ರಾಜಸ್ಥಾನ ರಾಯಲ್ಸ್ (RR) ತಂಡಕ್ಕೆ ಎರಡು ವರ್ಷ ನಿಷೇಧ ಹೇರಲಾಗಿತ್ತು. ಈ ಎರಡು ಆವೃತ್ತಿಗಳಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಹಾಗೂ ಗುಜರಾತ್ ಲಯನ್ಸ್ ತಂಡ ಕಣಕ್ಕಿಳಿದಿತ್ತು. ಇದರಲ್ಲಿ ರೈಸಿಂಗ್ ಪುಣೆ ಫ್ರಾಂಚೈಸಿಯನ್ನು ಇದೇ RPSG ಗ್ರೂಪ್ ಖರೀದಿ ಮಾಡಿತ್ತು. 15ನೇ ಐಪಿಎಲ್ ಆವೃತ್ತಿಯಿಂದ ಅಂದರೆ ಐಪಿಎಲ್ 2022ರಿಂದ ಹೊಸ ಎರಡು ತಂಡಗಳು ಸೇರಿಕೊಳ್ಳುತ್ತಿದೆ. ಇನ್ನು 10 ತಂಡಗಳ ಮೆಘಾ ಹರಾಜು ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ.