IND vs SA 2 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಪಂದ್ಯ, ಕ್ರೀಡಾಂಗಣ ಸುತ್ತ ಭಾರಿ ಭದ್ರತೆ!

By Suvarna NewsFirst Published Jun 19, 2022, 5:19 PM IST
Highlights
  • ಭಾರತ- ದಕ್ಷಿಣ ಆಫ್ರಿಕಾ ನಡುವೆ ಹೈವೋಲ್ಟೆಜ್ ಪಂದ್ಯ
  • ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಲೂ ಹಬ್ಬದ ವಾತಾವರಣ
  •  ಒಂದು ಸಾವಿರ ಪೊಲೀಸರ ನಿಯೋಜನೆ

ಬೆಂಗಳೂರು(ಜೂ.19): ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 5ನೇ ಹಾಗೂ ಕೊನೆಯ ಟಿ20 ಪಂದ್ಯ ಫೈನಲ್ ಸ್ವರೂಪ ಪಡೆದುಕೊಂಡಿದೆ.  ಸಹಜವಾಗಿ ಪಂದ್ಯಕ್ಕಾಗಿ ಅಭಿಮಾನಿಗಳ ಕಾತರ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಬರೋಬ್ಬರಿ 2 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಪಂದ್ಯ ಆಯೋಜನೆಗೊಂಡಿದೆ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಕ್ರಿಕೆಟ್ ಫೀವರ್ ಜೋರಾಗಿದೆ. ಇತ್ತ ಕ್ರೀಡಾಂಗಣದ ಸುತ್ತ ಮುತ್ತ ಭಾರಿ ಭದ್ರತೆ ನಿಯೋಜಿಸಲಾಗಿದೆ.

ಸಂಜೆ 7 ಗಂಟೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆರಂಭಗೊಳ್ಳಲಿದೆ. ಪಂದ್ಯ ವೀಕ್ಷಣೆಗೆ ಈಗಾಗಲೇ ಕ್ರೀಡಾಂಗಣದತ್ತ  ಜನಸಾಗರವೇ ಹರಿದು ಬರುತ್ತಿದೆ. ಹಲವರು ಟಿಕೆಟ್ ಹಿಡಿದು ಬಂದರೆ ಇನ್ನೂ ಹಲವರು ಟಿಕೆಟ್ ಸಿಗಬಹುದು ಎಂದು ಕ್ರೀಡಾಂಗದತ್ತ ಧಾವಿಸುತ್ತಿದ್ದಾರೆ. ಇತ್ತ ಪೊಲೀಸ್ ಇಲಾಖೆ ಭಾರಿ ಭದ್ರತೆ ಕೈಗೊಂಡಿದೆ

Latest Videos

ಭಾರತ-ದಕ್ಷಿಣ ಆಫ್ರಿಕಾ ಟಿ20, ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಚಾರ ಮಾರ್ಗ ಬದಲಾವಣೆ!

ಕ್ರೀಡಾಂಗಣದ ಸುತ್ತ ಮುತ್ತ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.20ಕ್ಕ ಹೆಚ್ಚು ಎಸಿಪಿ, 50 ಇನ್ಸ್‌ಪೆಕ್ಟರ್,150 ಸಬ್ ಇನ್ಸ್‌ಪೆಕ್ಟರ್, 800 ಕಾನ್ಸ್‌ಟೇಬಲ್, ಕೆಎಸ್ಆರ್ ಪಿ ತುಕಡಿ ನಿಯೋಜಿಸಲಾಗಿದೆ.

ಕ್ರೀಡಾಂಗಣ ಸಂಪರ್ಕಿಸುವ ಮಾರ್ಗಗಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಹತ್ತಕ್ಕೂ ಹೆಚ್ಚು ರಸ್ತೆಗಳಲ್ಲಿ ಸಂಚಾರ ಮಾರ್ಪಾಡು ಮಾಡಲಾಗಿದೆ. ಇನ್ನು ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ. ಮಾರ್ಗ ಬದಲಾವಣೆ ಕಾರಣ ನಗರದಲ್ಲಿ ಭಾರಿ ಟ್ರಾಫಿಕ್ ಎರ್ಪಟ್ಟಿದೆ.ಕ್ರಿಕೆಟ್‌ ಪಂದ್ಯಕ್ಕೆ ಸೂಕ್ತ ಭದ್ರತೆ ಕಲ್ಪಿಸಲಾಗಿದೆ. ಈಗಾಗಲೇ ಕ್ರೀಡಾಂಗಣದಲ್ಲಿ ಬಾಂಬ್‌ ನಿಷ್ಕಿ್ರಯ ದಳ, ಶ್ವಾನ ದಳಗಳಿಂದ ತಪಾಸಣೆ ಸಹ ನಡೆಸಲಾಗಿದೆ  ಎಂದು ಕೇಂದ್ರ ವಿಭಾಗದ ಡಿಸಿಪಿ (ಪ್ರಭಾರಿ) ಡಾಎಸ್‌.ಡಿ.ಶರಣಪ್ಪ ಹೇಳಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಪಂದ್ಯದ ಭದ್ರತೆಗೆ ಇಬ್ಬರು ಡಿಸಿಪಿ, 10 ಎಸಿಪಿ, 25 ಇನ್‌ಸ್ಪೆಕ್ಟರ್‌, 75 ಪಿಎಸ್‌ಐ ಹಾಗೂ 600 ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ ಕೆಎಸ್‌ಆರ್‌ಪಿ, ಸಿಎಆರ್‌ ಹಾಗೂ ಗರುಡು ಪಡೆಗಳನ್ನು ಬಂದೋಸ್‌್ತಗೆ ಬಳಸಿಕೊಳ್ಳಲಾಗಿದ್ದು, ಒಟ್ಟು 1 ಸಾವಿರಕ್ಕೂ ಅಧಿಕ ಪೊಲೀಸರು ಭದ್ರತೆಕ್ಕೆ ನಿಯೋಜನೆಯಾಗಿದ್ದಾರೆ ಎಂದು ವಿವರಿಸಿದರು.

ಸಂಚಾರ ಬದಲಾವಣೆ: ಟಿ-20 ಪಂದ್ಯಾವಳಿ ಹಿನ್ನಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Weather Forecast: ಇಂಡೋ-ದ. ಆಫ್ರಿಕಾ ನಡುವಿನ ಬೆಂಗಳೂರಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ?

ಪ್ರೇಕ್ಷಕರ ವಾಹನಗಳಿಗೆ ನಿಲುಗಡೆ ಸ್ಥಳ: ಮಲ್ಯ ಆಸ್ಪತ್ರೆ ರಸ್ತೆಯ ಸೆಂಟ್‌ ಜೋಸೆಫ್‌ ಇಂಡಿಯನ್‌ ಹೈಸ್ಕೂಲ್‌ ಮೈದಾನ, ಮ್ಯೂಸಿಯಂ ರಸ್ತೆಯ ಸೆಂಟ್‌ ಜೋಸೆಫ್‌ ಬಾಯ್‌್ಸ ಹೈಸ್ಕೂಲ್‌ ಆವರಣ, ಯುಬಿ ಸಿಟಿ ಆವರಣ, ಶಿವಾಜಿ ನಗರದ ಬಸ್‌ ನಿಲ್ದಾಣದ 1ನೇ ಮಹಡಿ ಹಾಗೂ ಬೌರಿಂಗ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಕೆಎಸ್‌ಸಿಎ ಸದಸ್ಯರ ವಾಹನ ನಿಲುಗಡೆ ಮಾಡಬೇಕು.

ಈ ರಸ್ತೆಗಳಿಗೆ ಪರ್ಯಾಯ ಮಾರ್ಗ ಬಳಸಿ:
ಕ್ರಿಕೆಟ್‌ ಪಂದ್ಯ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸುವ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆ, ಕ್ವೀನ್ಸ್‌ ರಸ್ತೆ, ಕಬ್ಬನ್‌ ರಸ್ತೆ ಹಾಗೂ ಸೆಂಟ್ರಲ್‌ ಸ್ಟ್ರೀಟ್‌ ರಸ್ತೆಗಳಿಗೆ ಭಾನುವಾರ ಸಂಜೆ 4ರ ಬಳಿಕ ವಾಹನ ದಟ್ಟಣೆ ಉಂಟಾಗಲಿದೆ. ಹೀಗಾಗಿ ಆ ದಿನ ಈ ರಸ್ತೆಗಳನ್ನು ಬಳಸುವ ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸಬಹುದು.
 

click me!