ಐಪಿಎಲ್‌ ಸ್ಪಾಟ್‌ ಫಿಕ್ಸರ್‌ ಅಂಕಿತ್ ಚೌವಾಣ್ ನಿಷೇಧ ಶಿಕ್ಷೆ ಅಂತ್ಯ

By Suvarna NewsFirst Published Jun 16, 2021, 4:40 PM IST
Highlights

* ಸ್ಪಾಟ್‌ ಫಿಕ್ಸರ್ ಅಂಕಿತ್ ಚೌವಾಣ್ ನಿಷೇಧ ಶಿಕ್ಷೆ ಅಂತ್ಯಗೊಳಿಸಿದ ಬಿಸಿಸಿಐ

* 2013ರ ಐಪಿಎಲ್ ವೇಳೆ ಸ್ಪಾಟ್ ಫಿಕ್ಸಿಂಗ್ ನಡೆಸಿ ಸಿಕ್ಕಿಬಿದ್ದಿದ್ದ ರಾಜಸ್ಥಾನ ರಾಯಲ್ಸ್ ಸ್ಪಿನ್ನರ್

* ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಕನಸು ಕಾಣುತ್ತಿದ್ದಾರೆ ಎಡಗೈ ಸ್ಪಿನ್ನರ್

ಮುಂಬೈ(ಜೂ.16): 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡು ಬಿಸಿಸಿಐನಿಂದ ನಿಷೇಧಕ್ಕೆ ಗುರಿಯಾಗಿದ್ದ ಎಡಗೈ ಸ್ಪಿನ್ನರ್ ಅಂಕಿತ್ ಚೌವಾಣ್ ವನವಾಸ ಅಂತ್ಯವಾಗಿದೆ. ಚೌವಾಣ್ ಮೇಲಿನ ನಿಷೇಧ ಶಿಕ್ಷೆಯನ್ನು ಬಿಸಿಸಿಐ ತೆರವುಗೊಳಿಸಿದೆ.

ಹೌದು, ಐಪಿಎಲ್ ಟೂರ್ನಿಯ ವೇಳೆ ಚೌವಾಣ್ ಸ್ಪಾಟ್ ಫಿಕ್ಸಿಂಗ್ ನಡೆಸಿರುವುದು ತನಿಖೆಯ ವೇಳೆ ದೃಢವಾಗುತ್ತಿದ್ದಂತೆಯೇ 2013ರ ಸೆಪ್ಟೆಂಬರ್‌ನಲ್ಲಿ ಮುಂಬೈ ಮೂಲದ ಸ್ಪಿನ್ನರ್ ಮೇಲೆ ಬಿಸಿಸಿಐ ಆಜೀವ ನಿಷೇಧ ಶಿಕ್ಷೆ ವಿಧಿಸಿತ್ತು. ಇನ್ನು ಕಳೆದ ತಿಂಗಳು ಬಿಸಿಸಿಐ ನೈತಿಕ ಅಧಿಕಾರಿಗಳು ಆಜೀವ ಶಿಕ್ಷೆಯ ಬದಲು 7 ವರ್ಷಗಳ ಶಿಕ್ಷೆಯನ್ನು ವಿಧಿಸಿತ್ತು. ಹೀಗಾಗಿ ರಾಜಸ್ಥಾನ ರಾಯಲ್ಸ್ ಮಾಜಿ ಬೌಲರ್ ಬಿಸಿಸಿಐ ನಿರಾಪೇಕ್ಷಣ ಪತ್ರಕ್ಕೆ ಎದುರು ನೋಡುತ್ತಿದ್ದಾರೆ.

ಲಂಕಾ ಪ್ರವಾಸಕ್ಕೆ ದ್ರಾವಿಡ್‌ ಕೋಚ್‌: ಗೊಂದಲಗಳಿಗೆ ಸೌರವ್ ತೆರೆ

ಬಿಸಿಸಿಐನಿಂದ ಈ ಔಪಾಚಾರಿಕ ಮಾತುಕತೆಯ ಬಳಿಕ ನಾನು ಹಾಗೂ ನನ್ನ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಬಿಸಿಸಿಐ ಹಾಗೂ ನನ್ನ ತವರು ಸಂಸ್ಥೆ ಮುಂಬೈ ಕ್ರಿಕೆಟ್ ಸಂಸ್ಥೆಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಕೋವಿಡ್ ಪಿಡುಗು ದೂರವಾದ ಬಳಿಕ ಮೈದಾನಕ್ಕಿಳಿಯಲು ಎದುರು ನೋಡುತ್ತಿರುವುದಾಗಿ ಸ್ಪೋರ್ಟ್ಸ್‌ಸ್ಟಾರ್‌ ವೆಬ್‌ಸೈಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬಿಸಿಸಿಐ ನೈತಿಕ ಅಧಿಕಾರಿಗಳು ಕಳೆದು ತಿಂಗಳು ಸಭೆ ಸೇರಿ ಚೌವಾಣ್ ಮೇಲಿನ ಆಜೀವ ನಿಷೇಧ ಶಿಕ್ಷೆಯನ್ನು ಪರಿಷ್ಕರಿಸಿ 7 ವರ್ಷಕ್ಕೆ ಇಳಿಸಲಾಯಿತು. ಜೂನ್ 15ಕ್ಕೆ ಅಂಕಿತ್ ಚೌವಾಣ್ ನಿಷೇಧ ಶಿಕ್ಷೆ ಕೊನೆಯಾಗಿದೆ ಎಂದು ಬಿಸಿಸಿಐ ಖಚಿತಪಡಿಸಿದೆ.
 

click me!