4 ದಿನಗಳ ಟೆಸ್ಟ್‌ ನಡೆಸಲು ಗಂಗೂಲಿ ಬಿಡಲ್ಲ: ಅಖ್ತರ್‌!

Suvarna News   | Asianet News
Published : Jan 07, 2020, 11:02 AM IST
4 ದಿನಗಳ ಟೆಸ್ಟ್‌ ನಡೆಸಲು ಗಂಗೂಲಿ ಬಿಡಲ್ಲ: ಅಖ್ತರ್‌!

ಸಾರಾಂಶ

4 ದಿನಗಳ ಟೆಸ್ಟ್ ಆಯೋಜನೆಯ ಬಗ್ಗೆ ಒಲವು ಹೊಂದಿರುವ ಐಸಿಸಿ ವಿರುದ್ಧ ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಕಿಡಿಕಾರಿದ್ದಾರೆ. ಅಲ್ಲದೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಎದುರು ಹಾಕಿಕೊಂಡು 4 ದಿನಗಳ ಟೆಸ್ಟ್ ಆಯೋಜನೆ ಸುಲಭವಲ್ಲ ಎಂದಿದ್ದಾರೆ. ಈ ಮೂಲಕ ಬಿಸಿಸಿಐ ಮಹತ್ವವನ್ನು ಒತ್ತಿ ಹೇಳಿದ್ದಾರೆ.

ಕರಾಚಿ(ಜ.07): ಟೆಸ್ಟ್‌ ಕ್ರಿಕೆಟನ್ನು 5 ದಿನಗಳಿಂದ 4 ದಿನಗಳಿಗೆ ಇಳಿಸಲು ಹೊರಟಿರುವ ಐಸಿಸಿ, ಏಷ್ಯಾದ ಕ್ರಿಕೆಟಿಂಗ್‌ ರಾಷ್ಟ್ರಗಳ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್‌ ಅಖ್ತರ್‌ ಆರೋಪಿಸಿದ್ದಾರೆ. 

ಜಾಗತಿಕ ಮಟ್ಟದಲ್ಲಿ ಹೆಚ್ಚು ಟೂರ್ನಿಗಳನ್ನು ಆಯೋಜಿಸಿ, ದ್ವಿಪಕ್ಷೀಯ ಸರಣಿಗಳ ಪ್ರಸಾರ ಹಕ್ಕು ಕಿತ್ತುಕೊಳ್ಳಲು ಐಸಿಸಿ ಈ ರೀತಿ ಮಾಡುತ್ತಿದೆ ಎಂದಿರುವ ಅಖ್ತರ್‌, ‘ಬಿಸಿಸಿಐ ವಿರೋಧ ಕಟ್ಟಿಕೊಂಡು ಐಸಿಸಿ ಮುನ್ನಡೆಯಲು ಸಾಧ್ಯವಿಲ್ಲ. ಅಧ್ಯಕ್ಷ ಗಂಗೂಲಿ ಚಾಣಾಕ್ಷ, 4 ದಿನಗಳ ಟೆಸ್ಟ್‌ ನಡೆಸಲು ಅವರು ಬಿಡುವುದಿಲ್ಲ’ ಎಂದು ಬಿಸಿಸಿಐಗೆ ಬೆಂಬಲ ನೀಡಿದ್ದಾರೆ.

2023ರಿಂದ 4 ದಿನಗಳ ಟೆಸ್ಟ್‌ ಕ್ರಿಕೆಟ್?

ಈ ವಿರಾಟ್ ಕೊಹ್ಲಿ ಸಹಾ 4 ದಿನಗಳ ಟೆಸ್ಟ್ ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸಾಂಪ್ರದಾಯಿಕ ಕ್ರಿಕೆಟ್ 5 ದಿನಗಳು ನಡೆದರೆ ಉತ್ತಮ. ನಾಲ್ಕು ದಿನಗಳ ಟೆಸ್ಟ್ ಪಂದ್ಯಕ್ಕೆ ತಮ್ಮ ಸಹಮತವಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದರು.

2023ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್’ಶಿಪ್ ವ್ಯಾಪ್ತಿಗೆ ಬರುವ ಟೆಸ್ಟ್ ಪಂದ್ಯಗಳನ್ನು 5 ದಿನಗಳ ಬದಲಿಗೆ ಕಡ್ಡಾಯವಾಗಿ 4 ದಿನಕ್ಕೆ ಇಳಿಸಲು ಐಸಿಸಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಹಿಂದೆಯೇ 2017ರ ಅಕ್ಟೋಬರ್’ನಲ್ಲಿ 4 ದಿನಗಳ ಟೆಸ್ಟ್ ಪಂದ್ಯ ಆಯೋಜನೆಗೆ ಐಸಿಸಿ ತನ್ನ ಒಪ್ಪಿಗೆ ಮುದ್ರೆ ಹಾಕಿದೆ.

4 ದಿನಗಳ ಟೆಸ್ಟ್‌ಗೆ ವಿರಾಟ್‌ ಕೊಹ್ಲಿ ವಿರೋಧ!

ಅಂದಹಾಗೆ 4 ದಿನಗಳ ಟೆಸ್ಟ್ ಪಂದ್ಯ ಏನು ಹೊಸ ಯೋಜನೆಯಲ್ಲ. 2019ರಲ್ಲಿ ಇಂಗ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳು 4 ದಿನಗಳ ಟೆಸ್ಟ್ ಪಂದ್ಯವನ್ನಾಡಿದ್ದವು. ಇನ್ನು 2017ರಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ತಂಡಗಳು ಸಹಾ ಒಂದು ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು.  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?