ಫೆಬ್ರವರಿ ತಿಂಗಳಿಂದ ರಣಜಿ ಟ್ರೋಫಿ?

Kannadaprabha News   | Asianet News
Published : Jan 13, 2021, 02:47 PM ISTUpdated : Jan 13, 2021, 04:22 PM IST
ಫೆಬ್ರವರಿ ತಿಂಗಳಿಂದ ರಣಜಿ ಟ್ರೋಫಿ?

ಸಾರಾಂಶ

ಸದ್ಯ ಸಯ್ಯದ್ ಮುಷ್ತಾಕ್ ಅಲಿ ಟಿ20  ಆರಂಭವಾಗಿದ್ದು, ಫೆಬ್ರವರಿ ತಿಂಗಳಿನಲ್ಲಿ ರಣಜಿ ಟೂರ್ನಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಮುಂಬೈ(ಜ.13): 2020-21ರ ಸಾಲಿನ ರಣಜಿ ಟ್ರೋಫಿಯನ್ನು ಫೆಬ್ರವರಿಯಿಂದ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಜ.17ರಂದು ನಡೆಯಲಿರುವ ಸಭೆಯಲ್ಲಿ ನಿರ್ಧರಿಸುವ ನಿರೀಕ್ಷೆ ಇದೆ. 

‘ಸದ್ಯ ನಡೆಯುತ್ತಿರುವ ಮುಷ್ತಾಕ್‌ ಅಲಿ ಟಿ20 ರೀತಿಯಲ್ಲೇ ಬಯೋ ಸೆಕ್ಯೂರ್‌ ವಾತಾವರಣದಲ್ಲಿ ಪಂದ್ಯಾವಳಿ ನಡೆಯಲಿದೆ. ಟಿ20ಗೆ ಆತಿಥ್ಯ ನೀಡಿರುವ 6 ನಗರಗಳಲ್ಲೇ ಪಂದ್ಯಗಳನ್ನು ನಡೆಸ ಲಾಗುತ್ತದೆ. ಈಗಿರುವ ರೀತಿಯಲ್ಲೇ 6 ಗುಂಪುಗಳು ಇರಲಿವೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐಪಿಎಲ್‌ಗೂ ಮೊದಲು ಗುಂಪು ಹಂತ, ಐಪಿಎಲ್‌ ಬಳಿಕ ನಾಕೌಟ್‌ ಹಂತ ನಡೆಸುವ ಸಾಧ್ಯತೆ ಇದೆ.

ಮುಷ್ತಾಕ್ ಅಲಿ ಟ್ರೋಫಿ: ಪಂಜಾಬ್‌ ಎದುರು ಕರ್ನಾಟಕಕ್ಕೆ ಹೀನಾಯ ಸೋಲು

ಶೇ.90% ರಷ್ಟು ಫೆಬ್ರವರಿಯಲ್ಲಿಯೇ ರಣಜಿ ಟ್ರೋಫಿ ಆರಂಭವಾಗುವ ಸಾಧ್ಯತೆಯಿದೆ. 6 ತಂಡಗಳ 5 ಗುಂಪು ಹಾಗೂ 8 ತಂಡಗಳನ್ನೊಳಗೊಂಡ ಒಂದು ಗುಂಪು ಮಾಡುವ ಚಿಂತನೆ ಬಿಸಿಸಿಐ ಮುಂದಿದೆ ಎಂದು ಮೂಲಗಳು ಖಚಿತಪಡಿಸಿವೆ. ಇದೇ ವೇಳೆ 14ನೇ ಆವೃತ್ತಿಯ ಐಪಿಎಲ್ ಟ್ರೋಫಿಗೂ ಮುನ್ನ ರಣಜಿ ಟ್ರೋಫಿ ಲೀಗ್ ಹಂತದ ಪಂದ್ಯಗಳು, ಐಪಿಎಲ್ ಪಂದ್ಯಗಳು ಮುಕ್ತಾಯವಾದ ಬಳಿಕ ಕ್ವಾರ್ಟರ್‌ ಫೈನಲ್‌, ಸೆಮಿಫೈನಲ್ ಹಾಗೂ ಫೈನಲ್‌ ಹೀಗೆ ನಾಕೌಟ್‌ ಪಂದ್ಯಗಳನ್ನು ಬಿಸಿಸಿಐ ಆಯೋಜಿಸಲಿದೆ ಎನ್ನಲಾಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?