
ಪಲ್ಲೆಕಲ್ಲೆ(ಏ.23): ನಾಯಕ ಮೊಮಿನುಲ್ ಹಕ್(127) ಹಾಗೂ ನಜ್ಮುಲ್ ಹೊಸೈನ್(163) ಅಮೋಘ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನ 2ನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 474 ರನ್ ಪೇರಿಸಿದೆ. ಈ ಮೂಲಕ ಪಂದ್ಯದ ಮೇಲೆ ಮೇಲುಗೈ ಸಾಧಿಸಿದೆ.
ಮೊದಲ ದಿನದ ಅಂತ್ಯಕ್ಕೆ 2 ವಿಕೆಟ್‌ಗೆ 302 ರನ್ ಗಳಿಸಿದ್ದ ಬಾಂಗ್ಲಾ, 2ನೇ ದಿನ ನಿಧಾನಗತಿಯ ಬ್ಯಾಟಿಂಗ್ ನಡೆಸಿತು. ಲಂಕಾ ಬೌಲರ್‌ಗಳನ್ನು ಕಾಡಿದ ಮೊಮಿನುಲ್, ನಜ್ಮುಲ್ ಜೋಡಿ 242 ರನ್‌ಗಳ ಭರ್ಜರಿ ಜೊತೆಯಾಟ ನೀಡಿದರು. ಬ್ಯಾಡ್‌ಲೈಟ್ ಕಾರಣ 96 ನಿಮಿಷ ಮೊದಲೇ 2ನೇ ದಿನದಾಟ ಅಂತ್ಯಗೊಳಿಸಲಾಯಿತು.
ಬಾಂಗ್ಲಾ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಲು ಶ್ರೀಲಂಕಾ ನಾಯಕ ದಿಮುತ್ ಕರುಣರತ್ನೆ ಹರಸಾಹಸ ಪಟ್ಟರಾದರೂ ಯಶಸ್ವಿ ಸಿಕ್ಕಿದ್ದು ಮಾತ್ರ ಸ್ವಲ್ಪವೇ ಸ್ವಲ್ಪ. ಇದೀಗ ಮುಷ್ಫಿಕುರ್ ರಹೀಮ್(43*) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಲಿಟನ್ ದಾಸ್(25) 5ನೇ ವಿಕೆಟ್‌ಗೆ ಮುರಿಯದ 50 ರನ್‌ಗಳ ಜತೆಯಾಟ ನಿಭಾಯಿಸಿದ್ದು, ಬೃಹತ್ ಮೊತ್ತ ದಾಖಲಿಸಿ ಬಾಂಗ್ಲಾ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಸಾಧ್ಯತೆಯಿದೆ.
ಐಪಿಎಲ್ 2021: ಬಲಿಷ್ಠ ಮುಂಬೈಗಿಂದು ಪಂಜಾಬ್ ಕಿಂಗ್ಸ್ ಸವಾಲು
ಶ್ರೀಲಂಕಾ ಪರ ವಿಶ್ವ ಫರ್ನಾಂಡೋ 2 ವಿಕೆಟ್ ಕಬಳಿಸಿದರೆ,ಲಹಿರು ಕುಮಾರ ಹಾಗೂ ಧನಂಜಯ ಡಿಸಿಲ್ವಾ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.
ಸ್ಕೋರ್:
ಬಾಂಗ್ಲಾದೇಶ 474/4
(* ಎರಡನೇ ದಿನದಾಟದಂತ್ಯದ ವೇಳೆಗೆ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.