ಮೊದಲ ಟೆಸ್ಟ್‌: ಶ್ರೀಲಂಕಾ ವಿರುದ್ಧ ಬಾಂಗ್ಲಾ ಮೇಲುಗೈ

By Suvarna NewsFirst Published Apr 24, 2021, 8:46 AM IST
Highlights

ಶ್ರೀಲಂಕಾ ವಿರುದ್ದದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ಎರಡನೇ ದಿನವೂ ಬಿಗಿ ಹಿಡಿತ ಸಾಧಿಸಿದೆ. ಇದರೊಂದಿಗೆ ಮೂರನೇ ದಿನದಾಟ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಪಲ್ಲೆಕಲ್ಲೆ(ಏ.24): ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಪ್ರವಾಸಿ ಬಾಂಗ್ಲಾದೇಶ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ 7 ವಿಕೆಟ್‌ ನಷ್ಟಕ್ಕೆ 541 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು.

ಬೃಹತ್‌ ಮೊತ್ತ ಬೆನ್ನತ್ತಿರುವ ಲಂಕಾ, 3ನೇ ದಿನದಂತ್ಯಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ ನಷ್ಟಕ್ಕೆ 229 ರನ್‌ ಗಳಿಸಿದ್ದು, ಇನ್ನೂ 312 ರನ್‌ ಹಿನ್ನಡೆಯಲ್ಲಿದೆ. ಫಾಲೋ ಆನ್‌ ತಪ್ಪಿಸಿಕೊಳ್ಳಲು ತಂಡ ಇನ್ನೂ 112 ರನ್‌ ಗಳಿಸಬೇಕಿದೆ. ನಾಯಕ ದಿಮುತ್‌ ಕರುಣರತ್ನೆ 85 ರನ್‌ ಗಳಿಸಿ ಔಟಾಗದೆ ಉಳಿದಿದ್ದಾರೆ. ಮತ್ತೊಂದು ತುದಿಯಲ್ಲಿ ಧನಂಜಯ ಡಿ ಸಿಲ್ವಾ ಅಜೇಯ 25  ರನ್‌ ಬಾರಿಸಿದ್ದು, ಮೂರನೇ ದಿನದಾಟ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. 

ಟೆಸ್ಟ್‌: ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ಪ್ರಾಬಲ್ಯ

Stumps in Pallekele!

Sri Lanka reduce the deficit, with Dimuth Karunaratne’s 85* powering their effort.

Who will come out on top on day four? 🤔 | | https://t.co/o4z3X6g7HL pic.twitter.com/8zM59FmOr7

— ICC (@ICC)

ಬಾಂಗ್ಲಾದೇ ಪರ ವೇಗದ ಬೌಲರ್‌ ಟಸ್ಕಿನ್ ಅಹಮ್ಮದ್, ಮೆಹದಿ ಹಸನ್‌ ಹಾಗೂ ತೈಜುಲ್ ಇಸ್ಲಾಂ ತಲಾ ಒಂದೊಂದು ವಿಕೆಟ್ ಕಬಳಿಸಿದರು. 

ಸ್ಕೋರ್‌: ಬಾಂಗ್ಲಾ 541/7 ಡಿ.
ಶ್ರೀಲಂಕಾ 229/3
(* ಎರಡನೇ ದಿನದಾಟ ಮುಕ್ತಾಯದ ವೇಳೆಗೆ)
 

click me!