Maxwell Marriage ಹಿಂದೂ ಸಂಪ್ರದಾಯದಂತೆ ವಿನಿ ರಾಮನ್ ಕೈ ಹಿಡಿದ ಮ್ಯಾಕ್ಸ್‌ವೆಲ್, ಚೆನ್ನೈನಲ್ಲಿ ಅದ್ಧೂರಿ ಮದುವೆ!

Published : Mar 28, 2022, 10:21 PM IST
Maxwell Marriage ಹಿಂದೂ ಸಂಪ್ರದಾಯದಂತೆ ವಿನಿ ರಾಮನ್ ಕೈ ಹಿಡಿದ ಮ್ಯಾಕ್ಸ್‌ವೆಲ್, ಚೆನ್ನೈನಲ್ಲಿ ಅದ್ಧೂರಿ ಮದುವೆ!

ಸಾರಾಂಶ

ಭಾರತೀಯ ಮೂಲದ ವಿನಿ ರಾಮನ್ ಜೊತೆ ಮ್ಯಾಕ್ಸಿ ಮದುವೆ ಭಾರತೀಯ ಸಂಪ್ರದಾಯದಂತೆ ಚೆನ್ನೈನಲ್ಲಿ ಮದುವೆ ಸಾಮಾಜಿಕ ಜಾಲತಾಣದಲ್ಲಿ ಮ್ಯಾಕ್ಸಿ ಮದುವೆ ವೈರಲ್

ಚೆನ್ನೈ(ಮಾ.28) ಆಸ್ಪ್ರೇಲಿಯಾದ ತಾರಾ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಚೆನ್ನೈ ಮೂಲದ ಹುಡುಗಿ ವಿನಿ ರಾಮನ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಚೆನ್ನೈನಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ ಮ್ಯಾಕ್ಸ್‌ವೆಲ್ ಭಾರತೀಯ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.

2 ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮ್ಯಾಕ್ಸ್‌ವೆಲ್ ಕಳೆದ ವಾರ ಆಸ್ಟ್ರೇಲಿಯಾದಲ್ಲಿ ಮುದುವೆಯಾಗಿದ್ದರು. ಇದೀಗ ವಿನಿ ರಾಮನ್ ಕುಟುಂಬ ಸದಸ್ಯರು ಚೆನ್ನೈನಲ್ಲಿ ಭಾರತೀಯ ಸಂಪ್ರದಾಯದ ಪ್ರಕಾರ ಮದುವೆ ಆಯೋಜಿಸಿದ್ದರು. 

ತಮಿಳುನಾಡಿನ ವರನ ರೀತಿ ಕಾಣಿಸಿಕೊಂಡ ಮ್ಯಾಕ್ಸ್‌ವೆಲ್ ಭಾರತೀಯ ಅಭಿಮಾನಿಗಳಿಗೆ ಮತ್ತಷ್ಚು ಹತ್ತಿರವಾಗಿದ್ದಾರೆ. ಶೇರ್ವಾನಿ, ಮದುವೆ ಹಾರ ಸೇರಿದಂತೆ ಹಿಂದೂ ಸಂಪ್ರದಾಯ ಮೇಳೈಸಿತ್ತು. ಆಸೀಸ್ ಕ್ರಿಕೆಟಿಗನ ಜೊತೆ ವಿನಿ ರಾಮನ್ ಸಪ್ತಪದಿ ತುಳಿದಿದ್ದಾರೆ.

Glenn Maxwell ಆರ್‌ಸಿಬಿ ಕ್ರಿಕೆಟಿಗ ಗ್ಲೆನ್‌ ಮ್ಯಾಕ್ಸ್‌ವೆಲ್‌-ವಿನಿ ರಾಮನ್ ಮದುವೆ ಫೋಟೋಗಳು ವೈರಲ್.!

2017ರಿಂದ ವಿನಿ ರಾಮನ್ ಜೊತೆ ಡೇಟಿಂಗ್ ನಡೆಸುತ್ತಿದ್ದ ಮ್ಯಾಕ್ಸ್‌ವೆಲ್ ಇದೀಗ ಮದುವೆ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರನಾಗಿರುವ ಮ್ಯಾಕ್ಸ್‌ವೆಲ್ ಶೀಘ್ರದಲ್ಲೇ ಆರ್‌ಸಿಬಿ ಸೇರಿಕೊಳ್ಳಲಿದ್ದಾರೆ.

 

 

ಮ್ಯಾಕ್ಸ್‌ವೆಲ್ ಮದುವೆ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಹಲವರು ವಣಕ್ಕಮ್ ಮಾಪ್ಲೇ ಅಂತಾ ತಮಿಳಿನಲ್ಲಿ ಮ್ಯಾಕ್ಸಿ ಕರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು, ಕ್ರಿಕೆಟಿಗರು ಸೇರಿದಂತೆ ಹಲವರು ಹೊಸ ಬದುಕಿಗೆ ಕಾಲಿಟ್ಟ ಮ್ಯಾಕ್ಸ್‌ವೆಲ್ ಹಾಗೂ ವಿನಿ ರಾಮನ್‌ಗೆ ಶುಭಾಶಯ ಕೋರಿದ್ದಾರೆ. ವಿನಿ ರಾಮನ್‌ ಔಷಧ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. 

 

 

IPL 2021 -RCB ಪ್ಲೇಯರ್ಸ್‌ನ ಪೂಲ್‌ ಪಾರ್ಟಿ ಫೋಟೋ ವೈರಲ್‌!

ಆರ್‌ಸಿಬಿ ತಂಡಕ್ಕೆ ಮೊದಲ ಪಂದ್ಯದಲ್ಲೇ ಸೋಲಿನ ಕಹಿ
ಗ್ಲೆನ್ ಮ್ಯಾಕ್ಸ್‌ವೆಲ್ ಮದುವೆಯಾಗಿ ಹೊಸ ಬದುಕು ಆರಂಭಿಸಿದ್ದರೆ, ಇತ್ತ ಆರ್‌ಸಿಬಿ ತಂಡ ಸೋಲಿನೊಂದಿಗೆ ಟೂರ್ನಿ ಆರಂಭಿಸಿದೆ. ರಾಯಲ್‌ ಚಾಲೆಂಜ​ರ್‍ಸ್ ಬೆಂಗಳೂರು(ಆರ್‌ಸಿಬಿ) ಎಷ್ಟೇ ಉತ್ತಮ ಬ್ಯಾಟರ್‌ಗಳನ್ನು ಹೊಂದಿದ್ದರೂ, ಬೌಲರ್‌ಗಳ ಕಳಪೆ ಪ್ರದರ್ಶನದಿಂದ ಸೋಲುವುದನ್ನು ಅಭಿಮಾನಿಗಳು ಹಲವು ವರ್ಷಗಳಿಂದ ನೋಡುತ್ತಿದ್ದಾರೆ. ಈ ವರ್ಷವೂ ವಿಭಿನ್ನವಾಗಿರುವುದಿಲ್ಲ ಎನ್ನುವ ಭಾವನೆ ಮೊದಲ ಪಂದ್ಯದಲ್ಲೇ ಅಭಿಮಾನಿಗಳ ಮನದಲ್ಲಿ ಮೂಡಿದೆ. 15ನೇ ಆವೃತ್ತಿಯಲ್ಲಿ 200ಕ್ಕೂ ಹೆಚ್ಚು ರನ್‌ ಸಿಡಿಸಿದ ಮೊದಲ ತಂಡ ಎನ್ನುವ ಹಿರಿಮೆಗೆ ಪಾತ್ರವಾದ ಆರ್‌ಸಿಬಿ, 200ಕ್ಕೂ ಹೆಚ್ಚು ರನ್‌ ಚಚ್ಚಿಸಿಕೊಂಡ ಮೊದಲ ತಂಡ ಎನ್ನುವ ಅಪಖ್ಯಾತಿಗೂ ಗುರಿಯಾಗಿದೆ.

ಭಾನುವಾರ ಇಲ್ಲಿನ ಡಿ.ವೈ.ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಆರ್‌ಸಿಬಿ 5 ವಿಕೆಟ್‌ಗಳ ಸೋಲು ಅನುಭವಿಸಿತು. ಮೊದಲು ಬ್ಯಾಟ್‌ ಮಾಡಿ 2 ವಿಕೆಟ್‌ಗೆ 205 ರನ್‌ ಸಿಡಿಸಿದ ಆರ್‌ಸಿಬಿ, ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ ಪಂಜಾಬ್‌ ಗೆಲುವಿನ ದಡ ಸೇರುವಷ್ಟುಕಳಪೆಯಾಗಿ ಬೌಲ್‌ ಮಾಡಿತು. 7 ಕೋಟಿ ರು. ಪಡೆದು ಹರಾಜಿಗೂ ಮೊದಲೇ ತಂಡದಲ್ಲಿ ಉಳಿದಿದ್ದ ವೇಗಿ ಮೊಹಮದ್‌ ಸಿರಾಜ್‌ 4 ಓವರಲ್ಲಿ 59 ರನ್‌ ಚಚ್ಚಿಸಿಕೊಂಡು ತಂಡದ ಆಡಳಿತ ಮುಜುಗರಕ್ಕೆ ಒಳಗಾಗುವಂತೆ ಮಾಡಿದರು. ಕ್ಷೇತ್ರರಕ್ಷಣೆಯಲ್ಲಿ ಎಡವಟ್ಟು ಮಾಡಿಕೊಂಡ ಆರ್‌ಸಿಬಿ, 21 ವೈಡ್‌ ಸೇರಿ ಒಟ್ಟು 22 ಇತರೆ ರನ್‌ ಬಿಟ್ಟುಕೊಟ್ಟಿತು. ಇವೆರಡು ಅಂಶಗಳು ತಂಡ ಸೋಲಲು ಪ್ರಮುಖ ಕಾರಣ.

ಪಂಜಾಬ್‌ ಅಬ್ಬರ: ದೊಡ್ಡ ಗುರಿ ಬೆನ್ನತ್ತಲು ಇಳಿದ ಪಂಜಾಬ್‌ ಮೊದಲ ಓವರ್‌ನಿಂದಲೇ ಆಕ್ರಮಣಕಾರಿ ಆಟಕ್ಕಿಳಿಯಿತು. ನಾಯಕ ಮಯಾಂಕ್‌ 32, ಧವನ್‌ 43, ರಾಜಪಕ್ಸ 43, ಲಿವಿಂಗ್‌ಸ್ಟೋನ್‌ 19, ಶಾರುಖ್‌ ಖಾನ್‌ ಔಟಾಗದೆ 24, ಎರಡು ಜೀವದಾನ ಪಡೆದ ಒಡೆಯನ್‌ ಸ್ಮಿತ್‌ ಕೇವಲ 8 ಎಸೆತದಲ್ಲಿ 25 ರನ್‌ ಸಿಡಿಸಿ ಗೆಲುವಿಗೆ ನೆರವಾದರು. ಪಂಜಾಬ್‌ ಇನ್ನಿಂಗ್ಸಲ್ಲಿ ಒಟ್ಟು 11 ಬೌಂಡರಿ, 14 ಸಿಕ್ಸರ್‌ಗಳಿದ್ದವು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?