'ದಿ ಹಂಡ್ರೆಡ್‌' ಟೂರ್ನಿಯಿಂದ ಹಿಂದೆ ಸರಿದ ವಾರ್ನರ್-ಸ್ಟೋನಿಸ್

By Suvarna NewsFirst Published Jun 11, 2021, 3:44 PM IST
Highlights

* ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಗೆ ತಾರಾ ಆಟಗಾರರ ಕೊರತೆ

* ಟೂರ್ನಿಯಿಂದ ಹಿಂದೆ ಸರಿದ ಡೇವಿಡ್ ವಾರ್ನರ್, ಮಾರ್ಕಸ್ ಸ್ಟೋನಿಸ್

* ಚೊಚ್ಚಲ ಆವೃತ್ತಿಯ ದಿ ಹಂಡ್ರೆಡ್ ಟೂರ್ನಿಗೆ ಹಲವು ಸ್ಟಾರ್ ಕ್ರಿಕೆಟಿಗರು ಗೈರು

ಮೆಲ್ಬರ್ನ್‌(ಜೂ.11): ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿಯು ಆಯೋಜಿಸಿರುವ ಚೊಚ್ಚಲ ಆವೃತ್ತಿಯ 'ದಿ ಹಂಡ್ರೆಡ್‌' ಕ್ರಿಕೆಟ್‌ ಟೂರ್ನಿಯಿಂದ ಹೊರಗುಳಿಯಲು ಆಸ್ಟ್ರೇಲಿಯಾ ಕ್ರಿಕೆಟಿಗರಾದ ಡೇವಿಡ್ ವಾರ್ನರ್ ಹಾಗೂ ಮಾರ್ಕಸ್ ಸ್ಟೋನಿಸ್ ತೀರ್ಮಾನಿಸಿದ್ದಾರೆ.

ಭಾರತದಲ್ಲಿ ನಡೆಯುತ್ತಿದ್ದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಕೋವಿಡ್ ಕಾರಣದಿಂದ ದಿಢೀರ್ ಸ್ಥಗಿತವಾದ ಬೆನ್ನಲ್ಲೇ ಕಠಿಣ ಕ್ವಾರಂಟೈನ್‌ ಮುಗಿಸಿ ತವರಿಗೆ ವಾಪಾಸಾಗಿದ್ದರು. ಇದೀಗ ವೆಸ್ಟ್‌ ಇಂಡೀಸ್ ಹಾಗೂ ಬಾಂಗ್ಲಾದೇಶ ವಿರುದ್ದದ ಸೀಮಿತ ಓವರ್‌ಗಳ ಸರಣಿಗೆ ಆಸ್ಟ್ರೇಲಿಯಾ ಪ್ರಾಥಮಿಕ ತಂಡದಲ್ಲಿ ಡೇವಿಡ್ ವಾರ್ನರ್ ಹಾಗೂ ಮಾರ್ಕಸ್ ಸ್ಟೋನಿಸ್ ಸ್ಥಾನ ಪಡೆದಿದ್ದಾರೆ. ಈ ಎರಡು ಸರಣಿಗಳಿಗೂ ಹಾಗೂ ಜುಲೈ ಮತ್ತು ಆಗಸ್ಟ್‌ನಲ್ಲಿ ನಡೆಸಲು ಉದ್ದೇಶಿಸಲಾಗಿರುವ 'ದಿ ಹಂಡ್ರೆಡ್' ಟೂರ್ನಿ ವೇಳಾಪಟ್ಟಿಗಳ ನಡುವೆ ತಿಕ್ಕಾಟ ಏರ್ಪಡುವ ಸಾಧ್ಯತೆಯಿದೆ. 

ವಿದೇಶಿ ಕ್ರಿಕೆಟ್‌ ಲೀಗ್‌ಗಳಲ್ಲಿ ಶಫಾಲಿ ವರ್ಮಾಗೆ ಭಾರೀ ಬೇಡಿಕೆ!

ಡೇವಿಡ್ ವಾರ್ನರ್ ಹಾಗೂ ಮಾರ್ಕಸ್ ಸ್ಟೋನಿಸ್ ಇಬ್ಬರು ಸದರ್ನ್‌ ಬ್ರೇವ್ ತಂಡದ ಪರ ಆಡಬೇಕಿತ್ತು. ಇನ್ನು ಪಾಕಿಸ್ತಾನದ ವೇಗದ ಬೌಲರ್ ಶಾಹಿನ್ ಅಫ್ರಿದಿ ಸಹಾ 'ದಿ ಹಂಡ್ರೆಡ್' ಟೂರ್ನಿಯಿಂದ ಹಿಂದೆ ಸರಿಯುವ ಸಾಧ್ಯತೆಯಿದೆ. ಇನ್ನು ಸ್ಪೋಟಕ ಬ್ಯಾಟ್ಸ್‌ಮನ್ ಆಂಡ್ರ್ಯೆ ರಸೆಲ್‌ ಕೂಡಾ ಮೊದಲಾರ್ಧದ ಟೂರ್ನಿಗೆ ಕೈಕೊಡುವ ಸಾಧ್ಯತೆಯಿದೆ. 'ದಿ ಹಂಡ್ರೆಡ್' ಟೂರ್ನಿಯ ವೇಳೆಯೇ ವೆಸ್ಟ್ ಇಂಡೀಸ್ ತಂಡವು ತವರಿನಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ವಿರುದ್ದ ಟಿ20 ಸರಣಿಯನ್ನು ಆಡಲಿದೆ.
 

click me!