ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಪರಾಭವ ಹೊಂದುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಡೆದುಕೊಂಡ ಭಾರತ ಮಹಿಳಾ ಕ್ರಿಕೆಟ್ ತಂಡ
ಬರ್ಮಿಂಗ್‌ಹ್ಯಾಮ್(ಆ.08): ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಪರಾಭವ ಹೊಂದುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಡೆದುಕೊಂಡಿದೆ. ಆಸ್ಟ್ರೇಲಿಯಾ ನೀಡಿದ್ದ 161 ರನ್‌ಗಳ ಗುರಿಯನ್ನ ತಲುಪಲಾಗದೆ ಆಲ್‌ಔಟ್ ಆಗುವ ಮೂಲಕ 152 ರನ್ ಗಳಿಸುವ ಸೋಲಿಗೆ ಶರಣಾಯಿತು. ಇಂದಿನ ಪಂದ್ಯದಲ್ಲಿ ಭಾರತದ ವಿರುದ್ಧ ಜಯ ದಾಖಲಿಸುವ ಮೂಲಕ ಆಸ್ಟ್ರೇಲಿಯಾ ಮಹಿಳಾ ತಂಡ ಚಿನ್ನದ ಪದಕ್ಕೆ ಮುತ್ತಿಟ್ಟಿದೆ. ಇಂದಿನ ಪಂದ್ಯದಲ್ಲಿ ಉಭಯ ತಂಡಗಳಿಂದ ಸಮಬಲ ಹೋರಾಟ ಕಂಡು ಬಂತು. ಪಂದ್ಯದ ಕೊನೆಯ ಕ್ಷಣದ ವರೆಗೂ ರೋಚಕತೆಯನ್ನ ಪಡೆದುಕೊಂಡಿತ್ತು.
ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಮಹಿಳಾ ತಂಡದ ಪರ ಮೂನಿ(61), ಲ್ಯಾನಿಂಗ್(36), ಗಾರ್ಡನರ್(25), ಹೇನ್ಸ್(18) ರನ್‌ಗಳ ಕಾಣಿಕೆಯಿಂದ 161 ರನ್ ಗಳಿಸಿತ್ತು.
WI VS IND ಸ್ಪಿನ್ ದಾಳಿಗೆ ತತ್ತರಿಸಿದ ವಿಂಡೀಸ್, 4-1 ಅಂತರದಲ್ಲಿ ಭಾರತಕ್ಕೆ ಟಿ20 ಸರಣಿ!
ಭಾರತದ ಪರ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಜವಾಬ್ದಾರಿಯುತ ಆಟವಾಡಿ 65 ರನ್ ಗಳಿಸಿ ತಂಡಕ್ಕೆ ನೆರವಾದರು. ಇನ್ನು ಜೆಮಿಮಾ ರಾಡ್ರಿಗಸ್ 33 ರನ್ ಗಳಿಸಿ ಸ್ಚುಟ್‌ಗೆ ಬಲಿಯಾದರು. ನಂತರ ಬಂದ ದೀಪ್ತಿ ಶರ್ಮಾ ಅವರು 13 ರನ್ ಗಳಿಸಿದ್ದು ಯಾವೊಬ್ಬ ಆಟಗಾರ್ತಿಯರು ಎರಡಂಕಿ ರನ್ ಗಳಿಸುವಲ್ಲಿ ವಿಫಲರಾದರು.
ಆಸ್ಟ್ರೇಲಿಯಾ ತಂಡದ ಪರ ಮೇಗನ್ ಶುಟ್(2), ಡಾರ್ಸಿ ಬ್ರೌನ್(10) ಹಾಗೂ ಡಾರ್ಸಿ ಬ್ರೌನ್(3) ವಿಕೆಟ್ ಪಡೆದು ಸಂಭ್ರಮಿಸಿದ್ದರು. ಇದಕ್ಕೂ ಮುನ್ನ ಭಾರತ ಮಹಿಳಾ ಕ್ರಿಕೆಟ್ ತಂಡದ ಪರ ರೇಣುಕಾ ಸಿಂಗ್(2), ಸ್ನೇಹ ರಾಣಾ(2) ದೀಪ್ತಿ ಶರ್ಮಾ, ರಾಧಾ ಯಾದವ್ ತಲಾ ಒಂದು ವಿಕೆಟ್ ಪಡೆದಿದ್ದರು.