ಸೆಪ್ಟೆಂಬರ್ ಮೊದಲ ವಾರದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಸೀಮಿತ ಓವರ್‌ಗಳ ಸರಣಿ ಆಡುವುದು ಖಚಿತವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಲಂಡನ್(ಆ.15): ಸೆಪ್ಟೆಂಬರ್ ಮೊದಲ ವಾರದಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಸೀಮಿತ ಓವರ್‌ಗಳ ಸರಣಿಯನ್ನು ಆಡಲಿದೆ. ಈ ವಿಚಾರವನ್ನು ಉಭಯ ತಂಡಗಳ ಕ್ರಿಕೆಟ್ ಮಂಡಳಿಗಳು ಖಚಿತಪಡಿಸಿವೆ.
ಈ ಸರಣಿಯನ್ನಾಡಲು ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲ್ಲಿದ್ದು, ಸೆಪ್ಟೆಂಬರ್ 04ರಿಂದ ಟಿ20 ಸರಣಿ ಆರಂಭವಾಗಲಿದೆ. ಮೂರು ಪಂದ್ಯಗಳ ಟಿ20 ಸರಣಿಯು ಸೌಂಥಾಪ್ಟನ್‌ನಲ್ಲಿ ಸೆಪ್ಟೆಂಬರ್ 04, 06 ಹಾಗೂ 8ರಂದು ನಡೆಯಲಿದೆ. ಇದಾದ ಬಳಿಕ ಸೆಪ್ಟೆಂಬರ್ 11ರಿಂದ ಏಕದಿನ ಸರಣಿ ಶುರುವಾಗಲಿದೆ. ಏಕದಿನ ಸರಣಿಗೆ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರ್ಯಾಫೋರ್ಡ್ ಮೈದಾನ ಆತಿಥ್ಯವನ್ನು ವಹಿಸಲಿದ್ದು, ಸೆಪ್ಟೆಂಬರ್ 11, 13 ಹಾಗೂ 16ರಂದು ಏಕದಿನ ಸರಣಿ ನಡೆಯಲಿದೆ. ಮೂರು ಏಕದಿನ ಪಂದ್ಯಗಳು ಐಸಿಸಿ ವಿಶ್ವಕಪ್ ಕ್ರಿಕೆಟ್ ಸೂಪರ್ ಲೀಗ್‌ಗೆ ಸೇರ್ಪಡಲಿವೆ. ಈ ಎಲ್ಲಾ ಪಂದ್ಯಾವಳಿಗಳು ಖಾಲಿ ಸ್ಟೇಡಿಯಂನಲ್ಲೇ ನಡೆಯಲಿವೆ.
undefined
ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಅಗಸ್ಟ್ 24ರಂದು ಇಂಗ್ಲೆಂಡ್‌ಗೆ ಬಂದಿಳಿಯಲಿದೆ. ಡರ್ಬಿಶೈರ್ ಇಂಕೋರಾ ಕೌಂಟಿ ಮೈದಾನದಲ್ಲಿ ಆಸ್ಟ್ರೇಲಿಯಾ ಪಡೆ ಆಂತರಿಕ ತಂಡ ಮಾಡಿಕೊಂಡು ಒಂದು ಏಕದಿನ ಹಾಗೂ 3 ಟಿ20 ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ಐಪಿಎಲ್ ಪ್ರಾಯೋಜಕತ್ವಕ್ಕೆ ಬೆಂಗಳೂರು ಕಂಪನಿ ಅರ್ಜಿ..!
ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯಾವಳಿಗಳು ನೋಡಲು ರೋಚಕವಾಗಿರುತ್ತದೆ. ಏಕದಿನ ಹಾಗೂ ಟಿ20 ಸರಣಿಗಳು ಜಿದ್ದಾಜಿದ್ದಿನಿಂದ ಕೂಡಿರಲಿದ್ದು, ಅಂತಾರಾಷ್ಟ್ರೀಯ ಏಕದಿನ ಸರಣಿಯಾಡಲು ಇದಕ್ಕಿಂತ ಒಳ್ಳೆಯ ಆರಂಭ ಮತ್ತೆ ಯಾವುದಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ನ ಸಿಇಒ ಟಾಮ್ ಹ್ಯಾರಿಸನ್ ಹೇಳಿದ್ದಾರೆ.