ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಜೂನ್ 07ರಿಂದ ಲಂಡನ್‌ನ ಓವೆಲ್ ಮೈದಾನದಲ್ಲಿ ಆರಂಭ
ಪ್ರಶಸ್ತಿಗಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಫೈಟ್
ಮೆಲ್ಬರ್ನ್(ಏ.20): ಭಾರತ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾಗೂ ಇಂಗ್ಲೆಂಡ್ ವಿರುದ್ಧದ ಆ್ಯಷಸ್ ಸರಣಿಯ ಮೊದಲೆರಡು ಪಂದ್ಯಗಳಿಗೆ ತಿಂಗಳುಗಳ ಮೊದಲೇ ಆಸ್ಪ್ರೇಲಿಯಾ ತಂಡ ಪ್ರಕಟಗೊಂಡಿದೆ. ಸದ್ಯ 17 ಮಂದಿಯ ತಂಡವನ್ನು ಹೆಸರಿಸಲಾಗಿದ್ದು, ಮೇ 28ರಂದು 15 ಆಟಗಾರರ ಅಂತಿಮ ತಂಡವನ್ನು ಕ್ರಿಕೆಟ್ ಆಸ್ಪ್ರೇಲಿಯಾ ಪ್ರಕಟಿಸಲಿದೆ. ಪ್ಯಾಟ್ ಕಮಿನ್ಸ್ ನಾಯಕತ್ವ ವಹಿಸಲಿದ್ದು, ಡೇವಿಡ್ ವಾರ್ನರ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮಿಚೆಲ್ ಮಾರ್ಷ್, ಗ್ರೀನ್, ಟಾಡ್ ಮರ್ಫಿ ಕೂಡಾ ತಂಡದಲ್ಲಿದ್ದಾರೆ. ಟೆಸ್ಟ್ ವಿಶ್ವಕಪ್ ಜೂನ್ 7ರಿಂದ ಲಂಡನ್‌ನ ಓವಲ್ನಲ್ಲಿ ನಡೆಯಲಿದ್ದು, 5 ಪಂದ್ಯಗಳ ಆ್ಯಷಸ್ ಸರಣಿ ಜೂನ್ 16ರಿಂದ ಜುಲೈ 31ರ ವರೆಗೆ ಇಂಗ್ಲೆಂಡ್ನಲ್ಲಿ ನಡೆಯಲಿದೆ.
36 ವರ್ಷದ ಡೇವಿಡ್ ವಾರ್ನರ್, ಭಾರತ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ವೇಳೆ ದಯನೀಯ ವೈಫಲ್ಯ ಅನುಭವಿಸಿದ್ದರು. ಭಾರತ ಎದುರಿನ ಮೂರು ಇನಿಂಗ್ಸ್‌ಗಳಲ್ಲಿ ವಾರ್ನರ್ ಕೇವಲ 26 ರನ್ ಗಳಿಸಿದ್ದರು. ಇನ್ನು ಟೆಸ್ಟ್ ಸರಣಿಯ ವೇಳೆ ಗಾಯಗೊಂಡು ಆಸೀಸ್ ತಂಡದಿಂದ ಹೊರಗುಳಿದಿದ್ದರು. ಇದೀಗ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವಾರ್ನರ್ ಜತೆಗೆ ಮೀಸಲು ಆರಂಭಿಕರಾಗಿ ಮಾರ್ಕಸ್ ಹ್ಯಾರೀಸ್ ಮತ್ತು ಮ್ಯಾಟ್ ರೆನ್ಶೋ ಜತೆಗೆ ಖಾಯಂ ಆರಂಭಿಕ ಉಸ್ಮಾನ್ ಖವಾಜ ತಂಡ ಕೂಡಿಕೊಂಡಿದ್ದಾರೆ.
Your 17-strong squad ready for a massive few months abroad 💪 pic.twitter.com/yjrSdG9kyn
— Cricket Australia (@CricketAus)ತಾರಾ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಬದಲಿಗೆ ಬ್ಯಾಕ್‌ಅಪ್ ಆಲ್ರೌಂಡರ್ ಆಗಿ ಮಿಚೆಲ್ ಮಾರ್ಷ್‌ಗೆ ಆಸೀಸ್ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಲಾಗಿದೆ. ಮಿಚೆಲ್ ಮಾರ್ಷ್ 2019ರ ಬಳಿಕ ಮೊದಲ ಬಾರಿಗೆ ಕಾಂಗರೂ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಭಾರತ ಎದುರು ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಸ್ಪಿನ್ನರ್ ಟೋಡ್ ಮರ್ಫಿ ಕೂಡಾ ಆಸೀಸ್ ಟೆಸ್ಟ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನಾಯಕ ಪ್ಯಾಟ್ ಕಮಿನ್ಸ್ ಜತೆಗೆ ವೇಗಿಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್ ಹಾಗೂ ಸ್ಕಾಟ್ ಬೋಲೆಂಡ್ ಸ್ಥಾನ ಪಡೆದಿದ್ದಾರೆ. ಇನ್ನು ಬ್ಯಾಟರ್ ಪೀಟರ್ ಹ್ಯಾಂಡ್ಸ್‌ಕಂಬ್, ಸ್ಪಿನ್ನರ್‌ಗಳಾದ ಆಸ್ಟನ್ ಏಗರ್, ಮಿಚೆಲ್ ಸ್ವಪ್ಸನ್ ಮತ್ತು ಮ್ಯಾಥ್ಯೂ ಕುಹ್ನೆಮನ್ ಅವರು ಆಸ್ಟ್ರೇಲಿಯಾ ಟೆಸ್ಟ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ವಿಫಲವಾಗಿದ್ದಾರೆ.
ತಂಡ: ಪ್ಯಾಟ್ ಕಮಿನ್ಸ್(ನಾಯಕ), ಡೇವಿಡ್ ವಾರ್ನರ್, ಉಸ್ಮಾನ್ ಖವಾಜ, ಮ್ಯಾಟ್ ರೆನ್ಶಾ, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೋನ್ ಗ್ರೀನ್, ಮಿಚೆಲ್ ಮಾರ್ಷ್, ಅಲೆಕ್ಸ್ ಕೇರ್ರಿ, ಜೋಶ್ ಇಂಗ್ಲಿಸ್, ಮಿಚೆಲ್ ಸ್ಟಾರ್ಕ್, ಜೋಸ್ ಹೇಜಲ್‌ವುಡ್, ಸ್ಕಾಟ್ ಬೋಲೆಂಡ್, ನೇಥನ್ ಲಯನ್, ಟೋಡ್ ಮರ್ಫಿ.