WTC Final: ಎಷ್ಟು ಗಂಟೆಯಿಂದ ಆರಂಭ? ಯಾವ ಚಾನೆಲ್‌ನಲ್ಲಿ ನೋಡಬಹುದು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

Published : Jun 08, 2025, 05:08 PM IST
WTC Final 2025

ಸಾರಾಂಶ

ಜೂನ್ 11 ರಿಂದ 15 ರವರೆಗೆ ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಡೆಯಲಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿದ್ದು, ಉಭಯ ತಂಡಗಳು ಗೆಲುವಿಗಾಗಿ ಕಠಿಣ ಪೈಪೋಟಿ ನಡೆಸಲಿವೆ.

ಬೆಂಗಳೂರು: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ. ಈ ಪಂದ್ಯ ಕ್ರಿಕೆಟ್‌ನ ತವರು ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ಜೂನ್ 11 ರಿಂದ 15 ರವರೆಗೆ ನಡೆಯಲಿದೆ. 2021–2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಸ್ಟ್ರೇಲಿಯಾ ಭಾರತವನ್ನು ಸೋಲಿಸಿ ಚಾಂಪಿಯನ್ ಪಟ್ಟ ಗೆದ್ದಿತ್ತು. ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುತ್ತಿದೆ. ಇದೇ ಮೊದಲ ಬಾರಿಗೆ ಭಾರತ ಇಲ್ಲದೆಯೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಡೆಯುತ್ತಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್

ಇದುವರೆಗೆ ಐಸಿಸಿ ದೊಡ್ಡ ಟೂರ್ನಿಗಳನ್ನು ಗೆಲ್ಲದ ದಕ್ಷಿಣ ಆಫ್ರಿಕಾ ಈ ಬಾರಿ ಗೆಲ್ಲಲಿದೆಯೇ ಎಂಬ ಕುತೂಹಲ ಮೂಡಿದೆ. ಎರಡೂ ತಂಡಗಳಲ್ಲಿ ಉತ್ತಮ ಆಟಗಾರರಿದ್ದಾರೆ, ಹೀಗಾಗಿ ಪಂದ್ಯ ರೋಚಕವಾಗಿರುತ್ತದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅನ್ನು ಯಾವ ಟಿವಿ, ಒಟಿಟಿಯಲ್ಲಿ ನೋಡಬಹುದು, ಪಂದ್ಯ ಆರಂಭವಾಗುವ ಸಮಯ ಏನು ಎಂಬುದನ್ನು ನೋಡೋಣ.

 

ಭಾರತದಲ್ಲಿ WTC ಫೈನಲ್ ಅನ್ನು ಯಾವ ಟಿವಿಯಲ್ಲಿ ನೋಡಬಹುದು?

ಭಾರತದಲ್ಲಿ WTC ಫೈನಲ್ ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ನೋಡಬಹುದು.

ಭಾರತದಲ್ಲಿ WTC ಫೈನಲ್ ಅನ್ನು ಯಾವ ಒಟಿಟಿಯಲ್ಲಿ ನೋಡಬಹುದು?

WTC ಫೈನಲ್ ಅನ್ನು ಜಿಯೋ ಸಿನಿಮಾ JioHotstar ಒಟಿಟಿ ವೇದಿಕೆಯಲ್ಲಿ ವೀಕ್ಷಿಸಬಹುದು.

ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ WTC ಫೈನಲ್ ಆರಂಭವಾಗುವ ಸಮಯ ಏನು?

WTC ಫೈನಲ್ ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಆರಂಭವಾಗುತ್ತದೆ.

ಉಭಯ ತಂಡಗಳ ಇತ್ತೀಚೆಗಿನ ಪ್ರದರ್ಶನ:

ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಕಳೆದ 19 ಪಂದ್ಯಗಳ ಪೈಕಿ 13 ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಇದೀಗ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗೆಲ್ಲುವ ವಿಶ್ವಾಸದಲ್ಲಿದೆ. ಇನ್ನೊಂದೆಡೆ ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ತಾನಾಡಿದ ಕಳೆದ 7 ಪಂದ್ಯಗಳ ಪೈಕಿ ಏಳೂ ಪಂದ್ಯಗಳನ್ನು ಗೆದ್ದು ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಚೊಚ್ಚಲ ಪ್ರಯತ್ನದಲ್ಲಿಯೇ ಟೆಸ್ಟ್ ವಿಶ್ವಕಪ್ ಗೆಲ್ಲು ವಿಶ್ವಾಸದಲ್ಲಿದೆ.

ಇನ್ನು ಉಭಯ ತಂಡಗಳು ಕಳೆದ 5 ಪಂದ್ಯಗಳ ಮುಖಾಮುಖಿಯನ್ನು ನೋಡುವುದಾದರೇ, ಅಲ್ಲಿಯೂ ಸಮಬಲ ಸಾಧಿಸಿವೆ. 5 ಪಂದ್ಯಗಳ ಪೈಕಿ ದಕ್ಷಿಣ ಆಫ್ರಿಕಾ ಎರಡು ಹಾಗೂ ಆಸ್ಟ್ರೇಲಿಯಾ ತಲಾ ಎರಡು ಪಂದ್ಯ ಜಯಿಸಿದ್ದು, ಇನ್ನೊಂದು ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಇದೀಗ ಫೈನಲ್‌ನಲ್ಲಿ ಯಾವ ತಂಡ ಕೈ ಮೇಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

WTC ಫೈನಲ್‌ಗೆ ಆಸ್ಟ್ರೇಲಿಯಾ ತಂಡ

ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಕ್ಯಾಮರೂನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ, ಸ್ಯಾಮ್ ಕಾನ್ಸ್ಟನ್ಸ್, ಮ್ಯಾಥ್ಯೂ ಕುಹ್ನೆಮನ್, ಮಾರ್ನಸ್ ಲ್ಯಾಬುಶೇನ್, ನಾಥನ್ ಲಿಯಾನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಬ್ಯೂ ವೆಬ್‌ಸ್ಟರ್, ಬ್ರಾಂಡನ್ ಡೋಗೆಟ್ (ಪ್ರಯಾಣ ಮೀಸಲು).

WTC ಫೈನಲ್‌ಗೆ ದಕ್ಷಿಣ ಆಫ್ರಿಕಾ ತಂಡ

ಟೋನಿ ಜೋರ್ಜಿ, ಏಯ್ಡನ್ ಮಾರ್ಕ್‌ರಮ್, ರಿಯನ್ ರಿಕೆಲ್ಟನ್, ಟ್ರಿಸ್ಟಿನ್ ಸ್ಟಬ್ಸ್, ತೆಂಬಾ ಬವುಮಾ(ನಾಯಕ), ಡೇವಿಡ್‌ ಬೆಡ್ರಿಗ್ಯಾಂ, ಕೈಲ್ ವೆರಿಯೆನ್ನೆ, ವಿಯಾನ್ ಮುಲ್ಡರ್, ಶೆನುರನ್ ಮುತ್ತುಸ್ವಾಮಿ, ಕೇಶವ್ ಮಹಾರಾಜ್, ಮಾರ್ಕೊ ಯಾನ್ಸನ್, ಕಾರ್ಬಿನ್ ಬೋಷ್, ಕಗಿಸೋ ರಬಾಡ, ಲುಂಗಿ ಎಂಗಿಡಿ, ಡೇನ್ ಪ್ಯಾಟರ್‌ಸನ್.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ-ಆಫ್ರಿಕಾ ಫೈನಲ್ ಫೈಟ್: ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?