ಏಷ್ಯನ್ ಗೇಮ್ಸ್‌: ಒಂದೇ ಒಂದು ಬಾಲ್‌ ಆಡದೆ ಹೊರಬಿದ್ದ ಆಫ್ಘಾನಿಸ್ತಾನ; ಟೀಂ ಇಂಡಿಯಾ ಸೆಮೀಸ್‌ಗೆ ಲಗ್ಗೆ

Published : Sep 28, 2026, 01:06 PM IST
Team India

ಸಾರಾಂಶ

ಮಳೆಯ ಕಾರಣದಿಂದಾಗಿ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಷ್ಯನ್ ಗೇಮ್ಸ್ ಕ್ವಾರ್ಟರ್ ಫೈನಲ್ ಪಂದ್ಯ ರದ್ದಾಗಿದೆ. ಉತ್ತಮ ರ್‍ಯಾಂಕಿಂಗ್ ಆಧಾರದ ಮೇಲೆ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡ ನೇರವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಚಿನ್ನದ ಪದಕದ ಗುರಿಯೊಂದಿಗೆ ಟೀಂ ಇಂಡಿಯಾ ಮುನ್ನುಗ್ಗುತ್ತಿದೆ.

ಟೋಕಿಯೋ: ಮಳೆಯ ಕಾರಣದಿಂದಾಗಿ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಷ್ಯನ್ ಗೇಮ್ಸ್ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯವು ಒಂದೇ ಒಂದು ಎಸೆತ ಕಾಣದೆ ರದ್ದಾಗಿದೆ. ಪಂದ್ಯದ ಫಲಿತಾಂಶ ಹೊರಬೀಳದ ಕಾರಣ, ಟಿ20 ರ್‍ಯಾಂಕಿಂಗ್‌ನಲ್ಲಿ ಅಫ್ಘಾನಿಸ್ತಾನಕ್ಕಿಂತ ಮೇಲಿರುವ ಭಾರತ ತಂಡವು ನೇರವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಟೀಂ ಇಂಡಿಯಾ, ನೇಪಾಳ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಸೆಮೀಸ್‌ನಲ್ಲಿ ಎದುರಿಸಲಿದೆ. ಇದಕ್ಕೂ ಮುನ್ನ ಮಳೆಯು ಪಾಕಿಸ್ತಾನ ಮತ್ತು ಹಾಂಗ್ ಕಾಂಗ್ ಪಂದ್ಯವನ್ನು ಕೂಡ ರದ್ದುಗೊಳಿಸಿತ್ತು. ಹೀಗಾಗಿ ಪಾಕಿಸ್ತಾನ ತಂಡವು ಸೆಮಿಫೈನಲ್ ತಲುಪಿದೆ.

ಶ್ರೇಯಸ್ ಅಯ್ಯರ್ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವುದು ತಮಗೆ ಸಿಕ್ಕ ದೊಡ್ಡ ಗೌರವ ಎಂದಿದ್ದಾರೆ. "ಭಾರತವನ್ನು ಪ್ರತಿನಿಧಿಸುವುದರ ಜೊತೆಗೆ ನಾಯಕನಾಗಿ ಮುನ್ನಡೆಸುತ್ತಿರುವುದು ಹೆಮ್ಮೆಯ ವಿಚಾರ. ನಾವು ಭಾರತದ ಪರ ಆಡುವಾಗ ಯಾವಾಗಲೂ ನಂಬರ್ ಒನ್ ಸ್ಥಾನಕ್ಕೇರಬೇಕು ಎಂಬ ನಿರೀಕ್ಷೆಗಳಿರುತ್ತವೆ. ಇದೊಂದು ಒಳ್ಳೆಯ ಒತ್ತಡ. ನಾವು ಫಲಿತಾಂಶದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಪ್ರತಿಯೊಂದು ಪಂದ್ಯದಲ್ಲೂ ನಮ್ಮ ಆಟದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ" ಎಂದು ಅಯ್ಯರ್ ಸ್ಪಷ್ಟಪಡಿಸಿದ್ದಾರೆ.

ಅವರು 2028ರ ಒಲಿಂಪಿಕ್ಸ್ ಸಿದ್ಧತೆಯ ದೃಷ್ಟಿಯಿಂದ ಈ ಟೂರ್ನಿ ಬಹಳ ಮುಖ್ಯವಾಗಿದೆ ಎಂದು ಹೇಳಿದ್ದಾರೆ. "ನಮಗೆ ಪ್ರತಿಯೊಂದು ಪಂದ್ಯವೂ ಮುಖ್ಯ. ಇದು ಹೊಸ ತಂಡಗಳ ವಿರುದ್ಧ ಆಡಲು ಮತ್ತು ತರಬೇತಿ ಪಡೆಯಲು ಸಹಾಯ ಮಾಡುತ್ತದೆ. ಕ್ರಿಕೆಟ್ ಬೆಳೆದಂತೆ ಪೈಪೋಟಿ ಕೂಡ ಹೆಚ್ಚಾಗುತ್ತಿದೆ" ಎಂದು ಅಯ್ಯರ್ ತಿಳಿಸಿದ್ದಾರೆ.

ಭಾರತ ತಂಡಕ್ಕೆ ಮರಳಿರುವ ಸಂಜು ಸ್ಯಾಮ್ಸನ್ ಆಟ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ಉಪಸ್ಥಿತಿಯು ಟೂರ್ನಿಯಲ್ಲಿ ಟೀಂ ಇಂಡಿಯಾಗೆ ದೊಡ್ಡ ಶಕ್ತಿಯಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಗುರಿಯೊಂದಿಗೆ ಮುನ್ನುಗ್ಗುತ್ತಿದೆ.

ಆಸೀಸ್‌ ವಿರುದ್ಧ ಏಕದಿನ ಸರಣಿ ಗೆದ್ದ ದ.ಆಫ್ರಿಕಾ

ಜೋಹಾನ್ಸ್‌ಬರ್ಗ್‌: ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ದಕ್ಷಿಣ ಆಫ್ರಿಕಾ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ವಶಪಡಿಸಿಕೊಂಡಿದೆ. ಭಾನುವಾರ ನಡೆದ 2ನೇ ಪಂದ್ಯದಲ್ಲಿ ದ.ಆಫ್ರಿಕಾ 32 ರನ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ ಡೇವಿಡ್‌ ಮಿಲ್ಲರ್‌ (142) ಹಾಗೂ ತೆಂಬ ಬವುಮಾ (103)ರ ಶತಕಗಳ ನೆರವಿನಿಂದ 9 ವಿಕೆಟ್‌ಗೆ 365 ರನ್‌ ಗಳಿಸಿತು. ಮಾರ್ಷ್‌ (84), ಹೆಡ್‌ (84), ಬಾರ್ಟ್‌ಲೆಟ್‌ (50)ರ ಅರ್ಧಶತಕದ ಹೊರತಾಗಿಯೂ ಆಸೀಸ್‌ 49.5 ಓವರಲ್ಲಿ 333 ರನ್‌ಗೆ ಆಲೌಟ್‌ ಆಯಿತು.

ಲಂಕಾ ವಿರುದ್ಧ ಏಕದಿನ ಸರಣಿ ಗೆದ್ದ ಇಂಗ್ಲೆಂಡ್‌

ಲಂಡನ್‌: ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 223 ರನ್‌ಗಳ ಬೃಹತ್‌ ಗೆಲುವು ಸಾಧಿಸಿದ ಇಂಗ್ಲೆಂಡ್‌, 3 ಪಂದ್ಯಗಳ ಸರಣಿಯನ್ನು 2-1ರಲ್ಲಿ ಜಯಿಸಿತು. ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ಟಾಮ್‌ ಬ್ಯಾಂಟನ್‌ (126)ರ ಶತಕದ ನೆರವಿನಿಂದ 7 ವಿಕೆಟ್‌ಗೆ 355 ರನ್‌ ಗಳಿಸಿತು. ಲಂಕಾ 132 ರನ್‌ಗೆ ಆಲೌಟ್‌ ಆಯಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಚಿನ್ - ಕಾಂಬ್ಳಿ ಮಾಡಿದ ದಾಖಲೆಗೆ ಜೈಲಿನಲ್ಲೇಕೆ ಸಂಭ್ರಮ? ತಿಹಾರ್ ಜೈಲಿನಲ್ಲಿ ತೆರೆದುಕೊಂಡಿತ್ತು ಎರಡು 'ಖಾಸಗಿ' ವಾರ್ಡ್‌ಗಳು!
TVK: ಮಿತ್ರಪಕ್ಷಗಳ ತೀವ್ರ ವಿರೋಧ; ಜಾರಿಯಾದ ಕೆಲವೇ ಗಂಟೆಗಳಲ್ಲಿ ವಿವಾದಾತ್ಮಕ ನಿರ್ಧಾರ ಹಿಂಪಡೆದ ವಿಜಯ್‌ ಸರ್ಕಾರ!