ಭಾರತ ವಿರುದ್ಧ ಸೋಲುಕಂಡರೂ ಸೂರ್ಯಕುಮಾರ್‌ಗೆ ಓಮನ್ ನಾಯಕ ಧನ್ಯವಾದ ಹೇಳಿದ್ದೇಕೆ?

Published : Sep 20, 2025, 08:56 PM IST
suryakumar yadav

ಸಾರಾಂಶ

ಭಾರತ ವಿರುದ್ಧ ಸೋಲುಕಂಡರೂ ಸೂರ್ಯಕುಮಾರ್‌ಗೆ ಓಮನ್ ನಾಯಕ ಧನ್ಯವಾದ ಹೇಳಿದ್ದೇಕೆ? ಟೀಂ ಇಂಡಿಯಾ ನಾಯಕನಿಗೆ ಥ್ಯಾಂಕ್ಸ್ ಹೇಳಿದ ಜತಿಂದರ್ ಸಿಂಗ್, ಬಿಸಿಸಿಐಗೂ ಮಾಡಿದ ವಿಶೇಷ ಮನವಿ ಏನು? 

ಅಬು ಧಾಬಿ (ಸೆ.20) ಏಷ್ಯಾಕಪ್ ಟೂರ್ನಿಯಲ್ಲಿ ಓಮನ್ ವಿರುದ್ಧ ಭಾರತ ಗೆಲುವು ಸಾಧಿಸಿದೆ. ಸತತ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಸೂಪರ್ 4 ಹಂತಕ್ಕೆ ಲಗ್ಗೆ ಇಟ್ಟಿದೆ. ಇನ್ನು ಸೂಪರ್ 4 ಹಂತದಲ್ಲೂ ಪಾಕಿಸ್ತಾನ ವಿರುದ್ದ ಭಾರತ ಹೋರಾಟ ನಡೆಸಲಿದೆ. ಕಳೆದ ಪಂದ್ಯದಲ್ಲಿ ಭಾರತ, ಓಮನ್ ವಿರುದ್ದ 21 ರನ್ ಗೆಲುವು ದಾಖಲಿಸಿತ್ತು. ಓಮನ್ ಅದ್ಭುತ ಹೋರಾಟ ನೀಡಿತ್ತು. ಭಾರತ ವಿರುದ್ದ ಸೋಲುಕಂಡರೂ ಪಂದ್ಯದ ಬಳಿಕ ಓಮನ್ ನಾಯಕ ಜತಿಂದರ್ ಸಿಂಗ್, ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್‌ಗೆ ಧನ್ಯವಾದ ಹೇಳಿದ್ದಾರೆ.

ಸೂರ್ಯಕುಮಾರ್ ಪೆಪ್ ಟಾಕ್‌ಗೆ ಧನ್ಯವಾದ

ಭಾರತ ವಿರುದ್ದ ಓಮನ್ ಮುಗ್ಗರಿಸಿದರೂ ದಿಟ್ಟ ಹೋರಾಟ ನೀಡಿದ ಸಂತೃಪ್ತಿ ಓಮನ್ ತಂಡಕ್ಕಿತ್ತು. ಪಂದ್ಯದ ಬಳಿಕ ನಾಯಕ ಸೂರ್ಯಕುಮಾರ್ ಯಾದವ್ ಸುತ್ತುವರೆದೆ ಓಮನ್ ತಂಡದ ಕ್ರಿಕೆಟಿಗರು, ಮಾತುಕತೆ ನಡೆಸಿದ್ದಾರೆ. ಈ ವೇಳೆ ಸೂರ್ಯಕುಮಾರ್ ಯಾದವ್ ಓಮನ್ ಕ್ರಿಕೆಟಿಗರಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ಆಟದಲ್ಲಿ ಗಮನ ಕೇಂದ್ರೀಕರಿಸುವುದು ಸೇರಿದಂತೆ ಒತ್ತಡ ಸಂದರ್ಭಗಳ ಕುರಿತು ಮಾತನಾಡಿದ್ದಾರೆ. ಸೂರ್ಯಕುಮಾರ್ ಯಾದವ್ ಓಮನ್ ಆಟಗಾರರಿಗೆ ನೀಡಿದ ಸಲಹೆ ಹಾಗೂ ಅವರ ಜೊತೆಗಿನ ಮಾತುಕತೆಗ ಜತಿಂದರ್ ಸಿಂಗ್ ಧನ್ಯವಾದ ಹೇಳಿದ್ದಾರೆ.

ಬಿಸಿಸಿಐಗೆ ಮನವಿ ಮಾಡಿದ ಜತಿಂದರ್ ಸಿಂಗ್

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜತಿಂದರ್ ಸಿಂಗ್, ಬಿಸಿಸಿಐಗೂ ಮನವಿ ಮಾಡಿದ್ದಾರೆ. ಬಿಸಿಸಿಐ ನಮ್ಮ ಮನವಿ ಪುರಸ್ಕರಿಸಬೇಕು. ಬಿಸಿಸಿಐನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಓಮನ್ ಆಟಗಾರರಿಗೆ ಅಭ್ಯಾಸಕ್ಕೆ ಅವಕಾಶ ನೀಡಬೇಕು. ಇದರಿಂದ ಓಮನ್ ಕ್ರಿಕೆಟ್‌ನಲ್ಲಿ ಸುಧಾರಿಸಲು ಸಹಾಯವಾಗುತ್ತದೆ ಎಂದಿದ್ದಾರೆ.ಈ ನಿಟ್ಟಿನಲ್ಲಿ ಬಿಸಿಸಿಐ ನಮಗೆ ಅವಕಾಶ ನೀಡಿದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿನ ಆಟ, ಫಿಟ್ನೆಸ್ ಸೇರಿದಂತೆ ಪ್ರಮುಖ ಆಯಾಮಗಳಲ್ಲಿ ಸುಧಾರಿಸಲು ಸಾಧ್ಯವಾಗಲಿದೆ ಎಂದು ಜತಿಂದರ್ ಸಿಂಗ್ ಮನವಿ ಮಾಡಿದ್ದಾರೆ.

ಸೂರ್ಯಕುಮಾರ್ ಯಾದವ್ ಜೊತೆ ತಂಡದ ಫೋಟೋ

ಪಂದ್ಯದ ಬಳಿಕ ತಂಡದ ಸದಸ್ಯರು, ಸಿಬ್ಬಂದಿಗಳು ಸೇರಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಆದರೆ ಸೂರ್ಯಕುಮಾರ್ ಜೊತೆ ಮಾತುಕತೆ ನಡೆಸಿದ ಓಮನ್ ತಂಡದ ಸದಸ್ಯರು, ಸಿಬ್ಬಂದಿಗಳು ಟೀಂ ಇಂಡಿಯಾ ನಾಯಕನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಓಮನ್ ತಂಡದ ಫೋಟೋದಲ್ಲಿ ಸೂರ್ಯಕುಮಾರ್ ಯಾದವ್ ಸೇರಿಸಲಾಗಿದೆ.

ಓಮನ್ ವಿರುದ್ಧದ ಪಂದ್ಯದಲ್ಲಿ ಭಾರತ 188 ರನ್ ಸಿಡಿಸಿತ್ತು. ಭಾರತದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಲು ಅವಕಾಶ ಸಿಗಲಿಲ್ಲ. ಟೀಂ ಇಂಡಿಯಾ ಘಟಾನುಘಟಿ ಬ್ಯಾಟರ್‌ಗಳನ್ನು ಓಮನ್ ಅಬ್ಬರಿಸದಂತೆ ಕಟ್ಟಿಹಾಕಿತ್ತು. 189 ರನ್ ಟಾರ್ಗೆಟ್ ಚೇಸ್ ಮಾಡಿದ ಓಮನ್ ದಿಟ್ಟ ಹೋರಾಟ ನೀಡಿತ್ತು. 20 ಓವರ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 164 ರನ್ ಸಿಡಿಸಿತ್ತು. ಈ ಮೂಲಕ ಕೇವಲ 21 ರನ್‌ಗಳಿಂದ ಸೋಲು ಅನುಭವಿಸಿತ್ತು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ