Asia Cup ಫೈನಲ್‌ಗೆ ಮಳೆ ಅಡ್ಡಿ ಮಾಡುತ್ತಾ? ಹವಾಮಾನ ವರದಿ ಏನು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

By Naveen Kodase  |  First Published Sep 17, 2023, 2:01 PM IST

ಏಷ್ಯಾಕಪ್ ಇತಿಹಾಸದಲ್ಲಿ ಭಾರತ ತಂಡವು ಏಳು ಬಾರಿ ಚಾಂಪಿಯನ್ ಆಗುವ ಮೂಲಕ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ. ಇನ್ನೊಂದೆಡೆ ಶ್ರೀಲಂಕಾ ತಂಡವು 6 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಇದೀಗ ಫೈನಲ್‌ನಲ್ಲಿ ಟೀಂ ಇಂಡಿಯಾ ಸೋಲಿಸಿ, ದಾಖಲೆ ಸರಿಗಟ್ಟಲು ದಶುನ್ ಶಾನಕ ಪಡೆ ಎದುರು ನೋಡುತ್ತಿದೆ. ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ವರುಣನ ಭೀತಿ ಎದುರಾಗಿದೆ 


ಕೊಲಂಬೊ(ಸೆ17): ಬಹುನಿರೀಕ್ಷಿತ 2023ರ ಏಷ್ಯಾಕಪ್ ಟೂರ್ನಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 8ನೇ ಬಾರಿಗೆ ಏಷ್ಯಾಕಪ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಭಾರತ ಹಾಗೂ ಶ್ರೀಲಂಕಾ ನಡುವಿನ ಹೈವೋಲ್ಟೇಜ್‌ ಏಷ್ಯಾಕಪ್ ಫೈನಲ್‌ ಪಂದ್ಯಕ್ಕೆ ಇಲ್ಲಿನ ಆರ್ ಪ್ರೇಮದಾಸ ಸ್ಟೇಡಿಯಂ ಆತಿಥ್ಯ ವಹಿಸಿದೆ.

ಏಷ್ಯಾಕಪ್ ಇತಿಹಾಸದಲ್ಲಿ ಭಾರತ ತಂಡವು ಏಳು ಬಾರಿ ಚಾಂಪಿಯನ್ ಆಗುವ ಮೂಲಕ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ. ಇನ್ನೊಂದೆಡೆ ಶ್ರೀಲಂಕಾ ತಂಡವು 6 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಇದೀಗ ಫೈನಲ್‌ನಲ್ಲಿ ಟೀಂ ಇಂಡಿಯಾ ಸೋಲಿಸಿ, ದಾಖಲೆ ಸರಿಗಟ್ಟಲು ದಶುನ್ ಶಾನಕ ಪಡೆ ಎದುರು ನೋಡುತ್ತಿದೆ. ಒಂದು ಕಡೆ ಶ್ರೀಲಂಕಾ ತಂಡವು ಪಾಕಿಸ್ತಾನ ಎದುರು ರೋಚಕ ಜಯ ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇನ್ನೊಂದಡೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಆಘಾತಕಾರಿ ಸೋಲು ಅನುಭವಿಸಿದ್ದು, ಫೈನಲ್‌ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದೆ.

Tap to resize

Latest Videos

ಬಿಟ್ಟುಕೊಡೋ ಮಾತೇ ಇಲ್ಲ; ಗೊತ್ತಿರಲಿ, ನಾಯಕನಾಗಿ ರೋಹಿತ್ ಶರ್ಮಾ ಇದುವರೆಗೂ ಸೋತಿದ್ದು ಕೇವಲ ಒಂದು ಫೈನಲ್ ಮಾತ್ರ...!

ಇನ್ನು ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸುತ್ತಾ ಎನ್ನುವ ಆತಂಕ ಕ್ರಿಕೆಟ್ ಅಭಿಮಾನಿಗಳನ್ನು ಕಾಡಲಾರಂಭಿಸಿದೆ. ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಹಲವು ಪಂದ್ಯಗಳಿಗೆ ಮಳೆರಾಯ ಅಡ್ಡಿಪಡಿಸಿದ್ದ. ಭಾರತ ಹಾಗೂ ಪಾಕಿಸ್ತಾನ ನಡುವಿನ ಗ್ರೂಪ್ ಹಂತದ ಪಂದ್ಯ ಮಳೆಯಿಂದಾಗಿ ಅರ್ಧಕ್ಕೆ ರದ್ದಾಗಿತ್ತು. ಇನ್ನೂ ಸೂಪರ್ 4 ಹಂತದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಎರಡು ದಿನಗಳ ಕಾಲ ನಡೆದಿತ್ತು. ಇದೀಗ ಹವಾಮಾನ ಇಲಾಖೆಯ ವರದಿಯ ಪ್ರಕಾರ ಕೊಲಂಬೊದಲ್ಲಿ ವೆದರ್‌ ರಿಪೋರ್ಟ್ ಹೇಗಿದೆ ಎನ್ನುವುದನ್ನು ನಾವಿಂದು ನೋಡೋಣ ಬನ್ನಿ

ಕೊಲಂಬೊದಲ್ಲಿ ಹವಾಮಾನ ವರದಿ ಹೀಗಿದೆ

3pm: ತಾಪಮಾನ - 29 ಡಿಗ್ರಿ ಸೆಲ್ಸಿಯಸ್, ಮಳೆ ಸಾಧ್ಯತೆ - 49%

4pm: ತಾಪಮಾನ - 29 ಡಿಗ್ರಿ ಸೆಲ್ಸಿಯಸ್, ಮಳೆ ಸಾಧ್ಯತೆ - 49%

5pm: ತಾಪಮಾನ - 29 ಡಿಗ್ರಿ ಸೆಲ್ಸಿಯಸ್, ಮಳೆ ಸಾಧ್ಯತೆ - 49%

6pm: ತಾಪಮಾನ - 27 ಡಿಗ್ರಿ ಸೆಲ್ಸಿಯಸ್, ಮಳೆ ಸಾಧ್ಯತೆ - 61%

7pm: ತಾಪಮಾನ - 27 ಡಿಗ್ರಿ ಸೆಲ್ಸಿಯಸ್, ಮಳೆ ಸಾಧ್ಯತೆ - 49%

8pm: ತಾಪಮಾನ - 27 ಡಿಗ್ರಿ ಸೆಲ್ಸಿಯಸ್, ಮಳೆ ಸಾಧ್ಯತೆ - 57%

9pm: ತಾಪಮಾನ - 28 ಡಿಗ್ರಿ ಸೆಲ್ಸಿಯಸ್, ಮಳೆ ಸಾಧ್ಯತೆ - 49%

10pm: ತಾಪಮಾನ - 27 ಡಿಗ್ರಿ ಸೆಲ್ಸಿಯಸ್, ಮಳೆ ಸಾಧ್ಯತೆ - 65%

11pm: ತಾಪಮಾನ - 27 ಡಿಗ್ರಿ ಸೆಲ್ಸಿಯಸ್, ಮಳೆ ಸಾಧ್ಯತೆ - 49%

'ಹಂಗೆಲ್ಲಾ ಮಾಡೋಕೆ ನಾನೇನು ಹುಚ್ಚನಾ..?' ಏಷ್ಯಾಕಪ್ ಫೈನಲ್‌ಗೂ ಮುನ್ನ ಗಿಲ್‌ಗೆ ಮೇಲೆ ಕಿಡಿಕಾರಿದ ರೋಹಿತ್ ಶರ್ಮಾ..!

ನಾಳೆ ಮೀಸಲು ದಿನ

ಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸೋಮವಾರ ಮೀಸಲು ದಿನವಾಗಿ ನಿಗದಿಪಡಿಸಲಾಗಿದೆ. ಭಾನುವಾರ ಮಳೆಯಿಂದಾಗಿ ಪಂದ್ಯ ಮುಗಿಯದಿದ್ದರೆ, ಅಂದರೆ ಮೊದಲ ಇನ್ನಿಂಗ್ಸ್‌ ಮುಗಿದು 2ನೇ ಇನ್ನಿಂಗ್ಸಲ್ಲಿ ಕನಿಷ್ಠ 20 ಓವರ್‌ ಆಟವೂ ಸಾಧ್ಯವಾಗದೆ ಇದ್ದರೆ ಆಗ ಸೋಮವಾರ ಪಂದ್ಯ ಮುಂದುವರಿಯಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್ ಗಿಲ್‌, ವಿರಾಟ್‌ ಕೊಹ್ಲಿ, ಕೆ ಎಲ್ ರಾಹುಲ್‌, ಇಶಾನ್‌ ಕಿಶನ್, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್/ವಾಷಿಂಗ್ಟನ್‌ ಸುಂದರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್‌, ಕುಲ್ದೀಪ್‌ ಯಾದವ್.

ಶ್ರೀಲಂಕಾ: ಪೆರೇರಾ, ನಿಸ್ಸಾಂಕ, ಮೆಂಡಿಸ್‌, ಸಮರವಿಕ್ರಮ, ಅಸಲಂಕ, ಧನಂಜಯ, ಶಾನಕ(ನಾಯಕ), ವೆಲ್ಲಲಗೆ, ಹೇಮಂತ, ರಜಿತ, ಪತಿರನ.

ಪಂದ್ಯ: ಮಧ್ಯಾಹ್ನ 3ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌
 

click me!