
ಅಬು ಧಾಬಿ(ಸೆ.19)ಪಾಕಿಸ್ತಾನಕ್ಕಿಂತ ಒಮನ್ ವಿರುದ್ಧದ ಪಂದ್ಯ ಭಾರತಕ್ಕೆ ಸವಾಲು ಒಡ್ಡಿತ್ತು. ಏಷ್ಯಾಕಪ್ ಟೂರ್ನಿಯ ಓಮನ್ ವಿರುದ್ದದ ಲೀಗ್ ಪಂದ್ಯದಲ್ಲಿ ಭಾರತ ವಿಕೆಟ್ ಕಳೆದುಕೊಂಡು 188 ರನ್ ಸಿಡಿಸಿದೆ. ಶುಬಮನ್ ಗಿಲ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ ನಿರಾಸೆ ನಡುವೆಯೂ ಸಂಜು ಸ್ಯಾಮ್ಸನ್, ಅಕ್ಸರ್ ಪಟೇಲ್ ಹೋರಾಟದಿಂದ ಭಾರತ 188 ರನ್ ಸಿಡಿಸುವಲ್ಲಿ ಯಶಸ್ವಿಯಾಗಿದೆ.
ಓಮನ್ ವಿರುದ್ದದ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ಆರಂಭದಲ್ಲೇ ಶುಬಮನ್ ಗಿಲ್ ವಿಕೆಟ್ ಕಳೆದುಕೊಂಡಿತ್ತು. ಗಿಲ್ ಕೇವಲ 5 ರನ್ ಸಿಡಿಸಿ ನಿರ್ಗಮಿಸಿದ್ದರು. ಇತ್ತ ಅಭಿಶೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅಭಿಶೇಕ್ ಶರ್ಮಾ 15 ಎಸೆತದಲ್ಲಿ 38 ರನ್ ಸಿಡಿಸಿದರು. 4 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದರು. ಶರ್ಮಾ ವಿಕೆಟ್ ಪತನದ ಬಳಿಕ ಸಂಜು ಸ್ಯಾಮ್ಸನ್ ಅಬ್ಬರ ಆರಂಭಗೊಂಡಿತ್ತು. ಆದರೆ ಹಾರ್ದಿಕ್ ಪಾಂಡ್ಯ ರನೌಟ್‌ಗೆ ಬಲಿಯಾಗುವ ಮೂಲಕ ನಿರಾಸೆ ಅನುಭವಿಸಿದರು. ಹಾರ್ದಿಕ್ ಪಾಂಡ್ಯ ಕೇವಲ 1 ರನ್ ಸಿಡಿಸಿ ಔಟಾಗಿದ್ದರು.
ಅಕ್ಸರ್ ಪಟೇಲ್ ಹಾಗೂ ಸಂಜು ಸ್ಯಾಮ್ಸನ್ ಜೊತೆಯಾಟ ಮುಂದುವರಿದಿತ್ತು. ಆದರೆ ಅಕ್ಸರ್ ಪಟೇಲ್ 26 ರನ್ ಸಿಡಿಸಿ ನಿರ್ಗಮಿಸಿದ್ದರು. ಇತ್ತ ಶಿವಂ ದುಬೆ ಕೇವಲ 5 ರನ್ ಸಿಡಿಸಿ ಔಟಾದರು. 5 ವಿಕೆಟ್ ಪತನದ ಬಳಿಕ ಭಾರತದ ರನ್ ಗಳಿಕೆ ವೇಗ ಇಳಿಕೆಯಾಗಿತ್ತು. ತಿಲಕ್ ವರ್ಮಾ ಹಾಗೂ ಸ್ಯಾಮ್ಸನ್ ಹೋರಾಟದಿಂದ ಭಾರತ ಮತ್ತೆ ಬೃಹತ್ ಮೊತ್ತ ಕಲೆ ಹಾಕುವ ಸೂಚನೆ ನೀಡಿತ್ತು. ಇತ್ತ ಸ್ಯಾಮ್ಸನ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಸ್ಯಾಮ್ಸನ್ 56 ರೂಪಾಯಿ ಸಿಡಿಸಿ ಔಟಾದರು. ಇತ್ತ ತಿಲಕ್ ವರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ವರ್ಮಾ 28 ರನ್ ಸಿಡಿಸಿ ಔಟಾದರು. ಹರ್ಶಿತ್ ರಾಣಾ 13 ರನ್ ಸಿಡಿಸಿದರು. ಭಾರತ 8 ವಿಕೆಟ್ ನಷ್ಟಕ್ಕೆ 188 ರನ್ ಸಿಡಿಸಿತು.
ಓಮನ್ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಮಾಡಿತ್ತು. ಪ್ರಮುಖವಾಗಿ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ತಂಡದಲ್ಲಿ ಕೆಲ ಮಹತ್ವದ ಬದಲಾವಣೆ ಮಾಡಲಾಗಿದೆ.
ಅಭಿಶೇಕ್ ಶರ್ಮಾ, ಶುಬಮನ್ ಗಿಲ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಹರ್ಶಿತ್ ರಾಣಾ, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್
ಅಮೀರ್ ಕಲೀಮ್, ಜತೀಂದರ್ ಸಿಂಗ್ (ನಾಯಕ), ಹಮಾದ್ ಮಿರಾಜ್, ವಿನಾಯಕ್ ಶುಕ್ಲ, ಶಾ ಫೈಸಲ್, ಝಾಕಿರ್ ಇಸ್ಲಾಮ್, ಆರ್ಯನ್ ಬಿಶ್ತ್, ಮೊಹಮ್ಮದ್ ನದೀಮ್, ಶಾಕೀಲ್ ಅಹಮ್ಮದ್, ಸಮಯ್ ಶ್ರೀವಾತ್ಸವ, ಜಿತಿನ್ ರಾಮಾನಂದಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.