
ಮುಂಬೈ (ಮಾ.05) ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ಮದುವೆ ಅದ್ಧೂರಿಯಾಗಿ ಮುಂಬೈನಲ್ಲಿ ನಡೆದಿದೆ. ಅದ್ಧೂರಿ ಮದುವೆಗೆ ಹಲವು ಕ್ಷೇತ್ರದ ಗಣ್ಯರು ಹಾಜರಾಗಿದ್ದಾರೆ. ದಕ್ಷಿಣ ಮುಂಬೈನಲ್ಲಿ ಆಯೋಜಿಸಲಾಗಿದ್ದ ಮದುವೆ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಬಹುತೇಕ ಸೆಲೆಬ್ರೆಟಿಗಳು, ಟೀಂ ಇಂಡಿಯಾ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು, ಮುಕೇಶ್ ಅಂಬಾನಿ ಕುಟುಂಬ ಸೇರಿದಂತೆ ಉದ್ಯಮ ಜಗತ್ತಿನ ಹಲವರು, ಮಹಾರಾಷ್ಟ್ರ ಮುಖ್ಯಮಂತ್ರಿ ಸೇರಿದಂತೆ ರಾಜಕೀಯ ಗಣ್ಯರು ಅರ್ಜುನ್ ಸಾನಿಯಾ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ.
ಕಳೆದ ಒಂದು ವಾರದಿಂದ ಅರ್ಜುನ್ ಸಾನಿಯಾ ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳು ಅದ್ಧೂರಿಯಾಗಿ ಆಯೋಜನೆಗೊಂಡಿತ್ತು. ಇದೀಗ ಮದುವೆ ಕಾರ್ಯಕ್ರಮ ಅಷ್ಟೇ ಅದ್ಧೂರಿಯಾಗಿ ನಡೆದಿದೆ. ಅರ್ಜುನ್ ಹಾಗೂ ಸಾನಿಯಾ ಕೆಂಪು ಬಣ್ಣದ ಟ್ವಿನ್ನಿಂಗ್ ಡ್ರೆಸ್ ಕಾಂಬಿನೇಷನ್‌ನಲ್ಲಿ ಮಿಂಚಿದ್ದಾರೆ. ಇತ್ತ ಸಚಿನ್ ತೆಂಡೂಲ್ಕಲ್ ಸಿಲ್ವರ್ ಶೆರ್ವಾನಿಯಲ್ಲಿ ಮಿಂಚಿದರೆ ಅಂಜಲಿ ತೆಂಡೂಲ್ಕರ್ ಹಾಗೂ ಸಾರಾ ತೆಂಡೂಲ್ಕರ್ ಪಿಂಕ್ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ಹಾರ ಬದಲಾಯಿಸುತ್ತಿದ್ದಂತೆ ಮಂಟಪದಲ್ಲಿ ಹೂವಿನ ಮಳೆಯಾಗಿದೆ. ಸಚಿನ್ ಕುಟುಂಬಸ್ಥರು, ಆಪ್ತರು ಹೂವಿನ ಮಳೆ ಸುರಿಸಿದ್ದಾರೆ. ಅರ್ಜುನ್ ಸಾನಿಯಾ ಮದುವೆಗೆ ಹಲವು ಗಣ್ಯರು, ಅತಿಥಿಗಳು ಸಾಕ್ಷಿಯಾಗಿದ್ದಾರೆ.
ಶಾರುಖ್ ಖಾನ್ ಹಾಗೂ ಕುಟುಂಬ, ಅಮೀರ್ ಖಾನ್, ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ, ನೀಲ್ ನಿತಿನ್ ಮುಕೇಶ್ ಸೇರಿದಂತೆ ಬಾಲಿವುಡ್‌ನ ಬಹುತೇಕ ಸೆಲೆಬ್ರೆಟಿಗಳು ಮದುವೆಯಲ್ಲಿ ಪಾಲ್ಗೊಂಡಿದ್ದಾರೆ.ಸಚಿನ್ ಪುತ್ರನ ಮದುವೆಯಲ್ಲಿ ಅತಿಥಿಗಳು, ಗಣ್ಯರಿಂದಲೇ ತುಂಬಿತ್ತು. ಇತ್ತ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ , ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಸೇರಿದಂತೆ ಹಲವು ರಾಜಕೀಯ ಗಣ್ಯರು ಪಾಲ್ಗೊಂಡಿದ್ದಾರೆ.
ಎಂಎಸ್ ಧೋನಿ, ಸಾಕ್ಷಿ ಧೋನಿ, ಯುವರಾಜ್ ಸಿಂಗ್ ಹಾಗೂ ಕುಟುಂಬ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಮಾಜಿ ಕೋಚ್ ರವಿ ಶಾಸ್ತ್ರಿ, ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್, ದಿಗ್ಗಜ ಸುನಿಲ್ ಗವಾಸ್ಕರ್, ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಸೇರಿದಂತೆ ಟೀಂ ಇಂಡಿಯಾದ ದಿಗ್ಗಜರು ಹಾಜರಾಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.