ದ್ರಾವಿಡ್ ಪುತ್ರನಿಗೆ ಬಿಗ್ ಪ್ರಮೋಶನ್, ಕರ್ನಾಟಕ ತಂಡದ ನಾಯಕನಾಗಿ ಅನ್ವಯ್ ದ್ರಾವಿಡ್ ಆಯ್ಕೆ

Published : Sep 30, 2026, 08:25 PM IST
Anvay Dravid

ಸಾರಾಂಶ

ರಾಹುಲ್ ದ್ರಾವಿಡ್ ಹಾದಿಯಲ್ಲೇ ಪುತ್ರ ಅನ್ವಯ್ ದ್ರಾವಿಡ್ ಸಾಗುತ್ತಿದ್ದಾರೆ. ಅಂಡರ್ 19 ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಅನ್ವಯ್ ದ್ರಾವಿಡ್‌ಗೆ ಬಿಗ್ ಪ್ರಮೋಶನ್ ಸಿಕ್ಕಿದೆ. ಕರ್ನಾಟಕ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರು (ಸೆ.30) ಟೀಂ ಇಂಡಿಯಾ ದಿಗ್ಗಜರ ಕ್ರಿಕೆಟಿಗರ ಪುತ್ರರು ಇದೀಗ ಅದ್ಭುತ ಪ್ರದರ್ಶನ ಮೂಲಕ ಗಮನಸೆಳೆಯುತ್ತಿದ್ದಾರೆ. ಈ ಪೈಕಿ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ತಮ್ಮ ಪ್ರತಿಭೆ ಸಾಬೀತುಪಡಿಸುತ್ತಿದ್ದಂತೆ ಬಿಗ್ ಪ್ರಮೋಶನ್ ಸಿಕ್ಕಿದೆ. ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ವಿರುದ್ದದ ಅಂಡರ್ 19 ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಅನ್ವಯ್ ದ್ರಾವಿಡ್‌ಗೆ ಕರ್ನಾಟಕ ಅಂಡರ್ 19 ತಂಡದ ನಾಯಕತ್ವ ನೀಡಲಾಗಿದೆ. ವಿನು ಮಂಕಡ್ ಟ್ರೋಫಿ ಅಂಡರ್ 19 ಟೂರ್ನಿಯಲ್ಲಿ ಅನ್ವಯ್ ದ್ರಾವಿಡ್ ಕರ್ನಾಟಕ ತಂಡ ಮುನ್ನಡೆಸಲಿದ್ದಾರೆ.

ಕರ್ನಾಟಕ ಅಂಡರ್ 19 ತಂಡ

ಅನ್ವಯ್ ದ್ರಾವಿಡ್ (ನಾಯಕ & ವಿಕೆಟ್ ಕೀಪರ್), ನಿತೀಶ್ ಆರ್ಯ, ಧ್ರುವ ಕೃಷ್ಣನ್, ಆರ್ ರೋಹಿತ್ ರೆಡ್ಡಿ, ಆದರ್ಶ್ ಎಸ್‌ಜೆ, ಸುಜಯ್ ಕೊರ್ವಾರ್, ವರುಣ್ ಪಟೇಲ್, ಅಂಕಿತ್ ರೆಡ್ಡಿ, ಪಿ ತೇಜಸ್ ರೆಡ್ಡಿ, ಸಮರ್ಥ್ ಎಂ ಕುಲಕರ್ಣಿ, ವೈಭವ್ ಸಿ, ಗೌರವ್ ವೆಂಕಟೇಶ್, ರತನ್ ಬಿಆರ್, ಪ್ರತೀಮ್ ರಾಜ್ ಕೆ, ಧ್ಯಾನ್ ಎಂ ಹೀರೆಮಠ

ಅಕ್ಟೋಬರ್ 8 ರಿಂದ ವಿನೂ ಮಂಕಡ್ ಟೂರ್ನಿ ಆರಂಭಗೊಳ್ಳಲಿದೆ. ವಿಶಾಖಪಟ್ಟಣಂನಲ್ಲಿ ಟೂರ್ನಿ ನಡೆಯಲಿದೆ. ಅಂಡರ್ 19 ಟೂರ್ನಿಯಲ್ಲಿ ಕರ್ನಾಟಕ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಇದೀಗ ಅನ್ವಯ್ ದ್ರಾವಿಡ್ ನಾಯಕತ್ವದಲ್ಲಿ ಟ್ರೋಫಿ ಗೆಲ್ಲೋ ನಿರೀಕ್ಷೆಯಲ್ಲಿದೆ. ಟೀಂ ಇಂಡಿಯಾ ಅಂಡರ್ 19 ಟೂರ್ನಿಗಳಲ್ಲಿ ಅನ್ವಯ್ ದ್ರಾವಿಡ್ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಹಲವು ರೋಚಕ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ. ವಿನೂ ಮಂಕಡ್ ಟೂರ್ನಿಯಲ್ಲಿ ಕರ್ನಾಟಕ ತಂಡ ಇ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಕರ್ನಾಟಕ ಜೊತೆ ಗುಜರಾತ್, ಜಾರ್ಖಂಡ್, ಚತ್ತೀಸಘಡ, ಹಿಮಾಚಲ ಪ್ರದೇಶ ಹಾಗೂ ದೆಹಲಿ ತಂಡಗಳಿವೆ. ಲೀಗ್ ಹಂತದಲ್ಲೇ ಕರ್ನಾಟತಕಕ್ಕೆ ಕಠಿಣ ಸವಾಲುಗಳು ಎದುರಾಗುವ ಸಾಧ್ಯತೆ ಇದೆ.

ಇತ್ತೀಚೆಗೆ ರಾಜ್‌ಕೋಟ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದದ 3 ಪಂದ್ಯಗಳ ಅಂಡರ್ 19 ಟೂರ್ನಿ, ಜುಲೈನಲ್ಲಿ ನಡೆದ ಶ್ರೀಲಂಕಾ ವಿರುದ್ದದ ಅಂಡರ್ 19 ಟೂರ್ನಿಯಲ್ಲಿ ಅನ್ವಯ್ ದ್ರಾವಿಡ್ ಕೀ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದರು. ರಾಹುಲ್ ದ್ರಾವಿಡ್ ರೀತಿಯಲ್ಲಿ ಪುತ್ರ ಅನ್ವಯ್ ದ್ರಾವಿಡ್ ಕ್ರಿಕೆಟ್‌ನಲ್ಲಿ ಹಂತ ಹಂತವಾಗಿ ಎಲ್ಲರ ಗಮನಸೆಳೆಯುತ್ತಿದ್ದಾರೆ. ಇದೀಗ ಅಂಡರ್ 19 ತಂಡದಲ್ಲಿ ಸ್ಥಾನ ಮಾತ್ರವಲ್ಲ ನಾಯಕ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಪಾಯದಲ್ಲಿದೆ ಶುಭ್‌ಮನ್ ಗಿಲ್ ಪಟ್ಟ; ಮತ್ತೆ ರೇಸ್‌ಗೆ ಬಂದ ವಿರಾಟ್ ಕೊಹ್ಲಿ...!
ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಹೊಸ ಮುಖ್ಯಸ್ಥ, ಅಗರ್ಕರ್ ಸ್ಥಾನ ಅಲಂಕರಿಸುವ ವ್ಯಕ್ತಿ ಹುಡುಕಿದ ಬಿಸಿಸಿಐ